More

    ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಟ್ಟರು, ಅದಕ್ಕೂ ಮುನ್ನ ಅದನ್ನು ತುಳಿದು, ಸೆಲ್ಫಿ ತೆಗೆದುಕೊಂಡರು

    ಮುಂಬೈ: ವಾಣಿಜ್ಯ ರಾಜಧಾನಿಯಲ್ಲಿ ಕೆಲದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಜನರಿಗೆ ಮಾತ್ರವಲ್ಲ, ಹಾವುಗಳು ಸೇರಿ ಬಿಲದಲ್ಲಿ ವಾಸಿಸುವ ಹಲವು ಪ್ರಾಣಿಗಳು, ಪಕ್ಷಿಗಳ ಪಾಲಿಗೂ ಮಾರಕಪ್ರಾಯವಾಗಿದೆ. ಮೋರಿಗಳು ತುಂಬಿಕೊಂಡು ರಸ್ತೆಗಳಲ್ಲಿ ಕೂಡ ನೀರು ಪ್ರವಾಹೋಪಾದಿಯಲ್ಲಿ ಹರಿಯುತ್ತಿರುವುದರಿಂದ, ಹಾವುಗಳು ಕೂಡ ನೀರಿನಲ್ಲಿ ತೇಲಿಕೊಂಡು ಹೋಗುತ್ತಿರುವ ಹಲವು ಘಟನೆಗಳು ನಡೆದಿವೆ.

    ಇಂಥ ಘಟನೆಯಲ್ಲಿ ತನ್ನನ್ನು ತಾನು ಬಚಾವ್​ ಮಾಡಿಕೊಂಡು, ಸುರಕ್ಷಿತ ಅಡಗುದಾಣವನ್ನು ಹುಡುಕಿಕೊಂಡು ಹೊರಟ್ಟಿದ್ದ 8.5 ಅಡಿ ಉದ್ದದ ಹೆಬ್ಬಾವನ್ನು ಬೋರಿವಲಿಯ ಹನುಮಾನ್​ ತೇಕ್ಡಿ ಪ್ರದೇಶದ ನಿವಾಸಿಗಳು ರಕ್ಷಿಸಿ, ಚೀಲದಲ್ಲಿ ತುಂಬಿಸಿಕೊಂಡು ಹೋಗಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.

    ಇದನ್ನೂ ಓದಿ: ಪಳನಿಯಲ್ಲಿ ಮನೆ ಬಾಗಿಲ ಬಳಿ ನೇತಾಡುತ್ತಿತ್ತು ಮನುಷ್ಯ ತಲೆಬುರಡೆ, ಎಲುಬುಗಳು!

    ಆದರೆ, ಹಾವನ್ನು ಚೀಲದೊಳಗೆ ತುಂಬುವ ಸಂದರ್ಭದಲ್ಲಿ ಅದನ್ನು ನೋಡಲು ಬಂದಿದ್ದ ಕೆಲವು ಯುವಕರು ಅದನ್ನು ಕಾಲಲ್ಲಿ ತುಳಿದು, ಒದ್ದು, ಸೆಲ್ಫಿ ತೆಗೆದುಕೊಂಡು ವಿಕೃತಿ ಮರೆದಿದ್ದಾರೆ. ಯುವಕನೊಬ್ಬ ಚಿತ್ರೀಕರಿಸಿಕೊಂಡಿರುವ ವಿಡಿಯೋ ತುಣುಕಿನಲ್ಲಿ ಈ ದೃಶ್ಯ ದಾಖಲಾಗಿದೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ವನ್ಯಪ್ರಾಣಿ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಂಘಟನೆಗಳ ಕಾರ್ಯಕರ್ತರ ಗಮನಕ್ಕೂ ಬಂದಿದೆ. ರೆಸ್ಕಿಂಕ್​ ಅಸೋಸಿಯೇಷನ್​ ಫಾರ್​ ವೈಲ್ಡ್​ಲೈಫ್​ ವೆಲ್ಫೇರ್​ (ಆರ್​ಎಡಬ್ಲ್ಯುಡಬ್ಲ್ಯು) ಕಾರ್ಯಕರ್ತ ಪವನ್​ ಶರ್ಮ ನೀಡಿದ ದೂರನ್ನು ಆಧರಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ಇಬ್ಬರು ಯುವಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಆರ್​ಎಡಬ್ಲ್ಯುಡಬ್ಲ್ಯು ಸಂಘಟನೆಯ ಕಾರ್ಯಕರ್ತರ ನೆರವಿನಿಂದ ಆ ಇಬ್ಬರನ್ನು ಗುರುತಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರನ್ವಯ ಬಂಧಿಸಿದ್ದಾರೆ.

    ಗ್ರಾಮದ ಮುಖ್ಯಸ್ಥರ ಮಾತು ಕೇಳಿ ಅಸಹಾಯಕ ತಾಯಿಯ ಕೊಂದ, ಕಾರಣ ಮಾತ್ರ ಶಾಕಿಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts