More

    ಚಂದ್ರನ ಮೇಲೆ 1 ಎಕರೆ ಭೂಮಿ ಖರೀದಿಸಿದ ಗೋವಾ ಯುವಕ!

    ನವದೆಹಲಿ: ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿದ ನಂತರ, ಇಸ್ರೋ ಪ್ರಪಂಚದಾದ್ಯಂತ ಪ್ರಶಂಸೆಗೆ ಪಾತ್ರವಾಯಿತು. ಅದೇ ಸಮಯದಲ್ಲಿ, ಚಂದ್ರನ ಮೇಲೆ ಭೂಮಿಯನ್ನು ಖರೀದಿಸುವ ಹೊಸ ಪ್ರವೃತ್ತಿಯು ಸಹ ಪ್ರಾರಂಭವಾಯಿತು. ಈಗ ಗೋವಾದ ಥಾಣೆ ಸತ್ತಾರಿಯ ಯುವಕ ಪರಾಗ್ ದೇಸಾಯಿ ಅವರು ಚಂದ್ರನ ಮೇಲೆ ಸುಮಾರು ಒಂದು ಎಕರೆ ಭೂಮಿಯನ್ನು ಖರೀದಿಸಿದ್ದಾರೆ.

    ಪ್ರಸ್ತುತ, ಯುರೋಪ್‌ನಲ್ಲಿರುವ ದೇಸಾಯಿ ಅವರು ಚಂದ್ರನ ಮೇಲಿನ ತಮ್ಮ ಭೂಮಿ ಆಸ್ತಿಯ ವಿವರಗಳನ್ನು ಹಂಚಿಕೊಂಡಿದ್ದಾರೆ. ದಿ ಲೂನಾರ್ ರಿಜಿಸ್ಟ್ರಿಯಿಂದ ಭೂಮಿಯನ್ನು ಖರೀದಿಸಿದ್ದಾರೆ. ಚಂದ್ರನ ಮೇಲೆ ಮನಿಲಿಯಸ್ ಕ್ರೇಟರ್ ಎಂಬ ಸ್ಥಳದಲ್ಲಿ 1 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಹೇಳಿದ್ದಾರೆ.

    ಬ್ಯಾಚುಲರ್ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್ ಅಧ್ಯಯನ ಮಾಡಿದ ಪರಾಗ್, ಪ್ರಸ್ತುತ ಜರ್ಮನಿಯಲ್ಲಿ ಯುಎಸ್‌ಎ ರಕ್ಷಣಾ ಇಲಾಖೆಯಲ್ಲಿ ನೆಟ್‌ವರ್ಕ್ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಥಾಣೆಯಲ್ಲಿ ‘ಮೊಕಾಸ ಮಾದರಿಯ ಜಮೀನು ಹೊಂದಿದ್ದಾರೆ. ಇದೀಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರನ ಮೇಲಿನ ತಮ್ಮ ಭೂಮಿ ಆಸ್ತಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಈ ಕುರಿತಾಗಿ ಮಾತನಾಡಿದ ದೇಸಾಯಿ ಅವರು, ಚಂದ್ರನ ಮೇಲೆ ಭೂಮಿಯನ್ನು ಖರೀದಿಸುವುದು ದೊಡ್ಡ ವಿಶ್ವಕ್ಕೆ ಸಂಪರ್ಕದ ಮಾರ್ಗವಾಗಿದೆ ಎಂದು ನಾನು ನಂಬುತ್ತೇನೆ. ಬಾಹ್ಯಾಕಾಶ ತಂತ್ರಜ್ಞಾನದ ಪ್ರಸ್ತುತವಾಗಿ ಮಾನವರು ಚಂದ್ರನ ಮೇಳೆ ವಾಸಿಸಲು ಎಲ್ಲಾ ಸೌಲಭ್ಯ ಇದೆಯಾ ಎನ್ನುವ ಬಗ್ಗೆ ಚಂದ್ರನ ಮೇಲೆ ಕಾರ್ಯಾಚರಣೆಗಳನ್ನು ನಡೆತಯುತ್ತಿದೆ. ಚಂದ್ರನ ಮೇಲೆ ಒಂದು ತುಂಡು ಭೂಮಿಯನ್ನು ಹೊಂದಿರುವುದು ಆವಿಷ್ಕರಿಸುವ ಮತ್ತು ಅನ್ವೇಷಿಸುವ ಮಾನವೀಯತೆಯ ಮಹತ್ವಾಕಾಂಕ್ಷೆಯನ್ನು ಬೆಂಬಲಿಸುತ್ತದೆ. ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಒಪ್ಪಂದಗಳು ಚಂದ್ರನ ಮೇಲಿನ ಆಸ್ತಿ ಹಕ್ಕುಗಳನ್ನು ಹೇಗೆ ಪರಿವರ್ತಿಸಲಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ ಎಂದು ದೇಸಾಯಿ ಹೇಳಿದರು.

    ಚಂದ್ರನ ಮೇಲೆ ಯಾರು ಬೇಕಾದರೂ ಭೂಮಿ ಖರೀದಿಸಬಹುದಾ?: ಲೂನಾರ್ ಸೊಸೈಟಿ ಇಂಟರ್ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ಕಂಪನಿಗಳ ಮೂಲಕ, ಆನ್‌ಲೈನ್‌ನಲ್ಲಿ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಬಹುದು. ಇದಕ್ಕಾಗಿ ನೀವು ಅವರ ವೆಬ್‌ಸೈಟ್‌ಗೆ ಹೋಗುವ ಮೂಲಕ ನೋಂದಾಯಿಸಿಕೊಳ್ಳಬೇಕು. ನಿರ್ದಿಷ್ಟ ಮೊತ್ತ ಪಾವತಿಸಿ ಭೂಮಿ ಖರೀದಿಸಬಹುದು. ಭಾರತೀಯರು ಕೂಡ ಇದೇ ಪ್ರಕ್ರಿಯೆಯ ಮೂಲಕ ಚಂದ್ರನ ಮೇಲೆ ಭೂಮಿಯನ್ನು ಖರೀದಿಸುತ್ತಿದ್ದಾರೆ.

    ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದ ಅನೇಕ ಗಣ್ಯರು: ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್  ಭೂಮಿಯನ್ನು ಖರೀದಿಸಿಲ್ಲ. ಅವರ ಅಭಿಮಾನಿಗಳಲ್ಲಿ ಒಬ್ಬರು ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಚಂದ್ರನ ಮೇಲೆ ಭೂಮಿ ಖರೀದಿಸಿದ್ದಾರೆ. 2002 ರಿಂದ, ಭೂಮಿ ಖರೀದಿಯ ಪ್ರವೃತ್ತಿ ಹೆಚ್ಚಾಗಿದೆ. ಹೈದರಾಬಾದ್, ಬೆಂಗಳೂರಿನ ಕೆಲ ಉದ್ಯಮಿಗಳೂ ಚಂದ್ರು ಮೇಲೆ ಜಮೀನು ಖರೀದಿಸಿದ್ದಾರೆ ಎನ್ನುವ ಮಾಹಿತಿ ಇದೆ.

    ಶುದ್ಧ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts