More

    ಯುವಕರಲ್ಲಿ ಜಾತಿ ಬದಲಿಗೆ ದೇಶ ಪ್ರೇಮ ಬೆಳಸಿ

    ಮಾನ್ವಿ: ದೇಶ ಸೇವೆಗೆ ಎಲ್ಲರು ಮುಂದಾಗಬೇಕು, ದೇಶದ ಭದ್ರತೆಗೆ ಯಾರು ಸೇನೆಯಲ್ಲಿ ಸೇರುತ್ತಾರೋ ಅವರಿಗೆ ಪ್ರೋತ್ಸಾಹ ನೀಡಿ, ಸಮಸ್ಯೆ ನೀಗಿಸುವ ಪ್ರಯತ್ನ ಮಾಡಿ ಎಂದು ಮಾಜಿ ಯೋದ ಜೆ. ಆಂಜನೇಯ್ಯ ನೀರಮಾನ್ವಿ ತಿಳಿಸಿದರು.

    ಇದನ್ನೂ ಓದಿ: ದೇಶ ಪ್ರೇಮಕ್ಕೆ ಒತ್ತಾಸೆ, ಹುತಾತ್ಮ ಯೋಧರ ತ್ಯಾಗ ಸ್ಮರಣೆ

    ತಾಲೂಕಿನ ಮದ್ಲಾಪುರು ಗ್ರಾಮದಲ್ಲಿ ಶುಕ್ರವಾರ ವಂದೇ ಮಾತರಂ ಯುವ ಸಂಘದಿಂದ ಅಗ್ನಿಪಥ್ ವೀರ್ ಸೈನಿಕರಾಗಿ ಅಗಮಿಸಿದ ಸೈನಿಕರನ್ನು ಸನ್ಮಾನಿಸಿ ಮಾತನಾಡಿದರು.

    ಯುವಕರನ್ನು ಜಾತಿಯ ಸಂಕೋಲೆಯಲ್ಲಿ ಬೀಳಿಸದೇ, ದೇಶ ಸೇವೆಯಲ್ಲಿ ತೋಡುಗುವಂತೆ ಮಾಡಿ ಜೈ ಜವಾನ್ ಜೈ ಕಿಸಾನ್ ನಮ್ಮ ಧೇಯ ವಾಕ್ಯಗಳಾಗಬೇಕು ಎಂದರು.

    ವಂದೇ ಮಾತರಂ ಸಂಘದ ಅಧ್ಯಕ್ಷ ಮಹಿಬೂಬ್ ಮದ್ಲಾಪುರ ಮಾತನಾಡಿ, ಸಂಘದ ಉದ್ದೇಶ ರೈತ, ಶಿಕ್ಷಕ ಮತ್ತು ಸೈನಿಕ ಈ ಮೂವರನ್ನು ಗೌರವಿಸುವ ಕಾರ್ಯ ಮಾಡುವುದು. ನಮ್ಮೂರ ಪ್ರತಿಭೆ ನನ್ನ ವಿದ್ಯಾರ್ಥಿ ಅಮರೇಶ ಕೆ. ಎಂದು ಹೇಳಿಕೊಳ್ಳಲು ಹಷರ್ವೆನಿಸುತ್ತದೆ. ದೇಶ ಸೇವೆ ಎಲ್ಲರ ಹೊಣೆ ದೇಶದ ಸೇವೆ ಮಾಡಿ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದರು.

    ಹೆಸರಾಂತ ಭಾರತೀಯ ಸೈನಿಕ ತರಬೇತಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಏಳು ತಿಂಗಳು ತರಬೇತಿ ಪಡೆದು ಗ್ರಾಮಕ್ಕೆ ಆಗಮಿಸಿದ ಸೈನಿಕರಾದ ಅಮರೇಶ್ ಕೆ. ಮದ್ಲಾಪುರ, ಹುಸೇನ್ ಭಾಷ್ ಗೋನವಾರ್ ಮತ್ತು ಮಲ್ಲಿಕಾರ್ಜುನ ಹಿರೇಬಾದರದಿನ್ನಿರಿಗೆ ಕಾರ್ಗಿಲ್ ಸ್ಮಾರಕ ವಂದೇ ಮಾತರಂ ಸರ್ಕಲ್‌ಲ್ಲಿ ಸನ್ಮಾನಿಸಲಾಯಿತು.

    ವಂದೇ ಮಾತರಂ ಪದಾದೀಕಾರಿಗಳಾದ ರವಿಭೋವಿಕರ್, ಗ್ರಾಪಂ ಸದಸ್ಯ ಬಸವರಾಜ್ ದೊಡ್ಮನೆ, ಸಮಾಜ ಸೇವಕ ಕೆ.ಎಂ ಭಾಷ, ಅಂಬಿಗ ಸಮುದಾಯದ ಮಾರೆಪ್ಪ, ಶಿವುಮೂರ್ತಿ, ದೇವಣ್ಣ ಭಜಂತ್ರಿ, ಸಂಗಮೇಶ, ರಮೇಶ್, ಮಹ್ಮದ್ ಮ್ಯಾಕನಿಕ್, ಸಬ್ಜಲ್ಲಿ ಸಾಬ್, ಹಸೇನ್ ಖುರೇಷಿ, ಮೌನೇಶ್ ವಿಶ್ವಕರ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts