More

    ಗೆದ್ದು ನನ್ನ ಆರೋಗ್ಯ ವೃದ್ಧಿಸಿ ಎಂದು ಬಲ್ಬೀರ್ ಹೇಳಿದ್ದು ಯಾರಿಗೆ…

    ಚಂಡೀಗಢ: ಕ್ರೀಡೆಗಳು ಬೇರೆಯಾದರೂ ಕ್ರೀಡಾಪಟುಗಳಿಗೆ ಪರಸ್ಪರ ಭಾವನಾತ್ಮಕ ಸಂಬಂಧ ಮಾತ್ರ ಹೇಳತೀರದು. ಬೇರೆ ಬೇರೆ ಕ್ರೀಡೆಗಳಿದ್ದರೂ ರಾಷ್ಟ್ರೀಯ ತಂಡ ಪರ ಆಡುತ್ತಿದ್ದಾಗ ಪರಸ್ಪರ ಪ್ರೋತ್ಸಾಹ ಇದ್ದೇ ಇರುತ್ತದೆ. ಅಂತ ಸ್ಫೂರ್ತಿಯುತ ಕ್ಷಣಗಳಿಗೆ ಸಾಕ್ಷಿಯಾಗಿದ್ದರು ಹಾಕಿ ದಂತಕಥೆ ಬಲ್ಬೀರ್ ಸಿಂಗ್ ಸೀನಿಯರ್. ಎಲ್ಲರೂ ವಿಷ್ ಮಾಡಿ, ಶುಭಕೋರಿದರೆ ಇದಕ್ಕೆ ವಿಭಿನ್ನವಾಗಿ ಕಾಣುತ್ತಾರೆ ಬಲ್ಬೀರ್. ನೀವು ಚೆನ್ನಾಗಿ ಆಡಿ ಪಂದ್ಯ ಗೆದ್ದು, ನನ್ನ ಆರೋಗ್ಯ ವೃದ್ಧಿಸಿ ಎಂದು ಎಂಎಸ್ ಧೋನಿ ಬಳಗಕ್ಕೆ ಹೇಳಿದ್ದರಂತೆ ಬಲ್ಬೀರ್. ಇದೀಗ ಸ್ವತಃ ಧೋನಿಯೇ ಈ ವಿಷಯ ಬಹಿರಂಗ ಪಡಿಸಿದ್ದಾರೆ.

    ಇದನ್ನೂ ಓದಿ:ಗಂಗೂಲಿ-ದ್ರಾವಿಡ್ ಅಮೋಘ ಜತೆಯಾಟಕ್ಕೆ 21 ವರ್ಷ!

    ಹ್ಯಾಟ್ರಿಕ್ ಒಲಿಂಪಿಕ್ಸ್ ಸ್ವರ್ಣ ಜಯಿಸಿದ ಏಕೈಕ ಭಾರತೀಯ ಎನಿಸಿಕೊಂಡಿರುವ ಬಲ್ಬೀರ್ ಸಿಂಗ್ ನಿಧನಕ್ಕೆ ಇಡೀ ಭಾರತೀಯ ಕ್ರೀಡಾಲೋಕವೇ ಸಂತಾಪ ಸೂಚಿಸಿದೆ. 2016ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಧೋನಿ ಪಡೆಯನ್ನು ಬಲ್ಬೀರ್ ಭೇಟಿಯಾಗಿದ್ದರು. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಧೋನಿ ತಂಡಕ್ಕೆ ಶುಭಕೋರಿದ ಬಲ್ಬೀರ್, ಗೆದ್ದು ನನ್ನ ಆರೋಗ್ಯ ಹೆಚ್ಚಿಸಿ. ನಿಮ್ಮ ನಾಯಕತ್ವದಲ್ಲಿ ಮೂರನೇ ವಿಶ್ವಕಪ್ ಗೆದ್ದು ನನ್ನ ದಾಖಲೆಯನ್ನು ಸರಿಗಟ್ಟಿ ಎಂದು ಹೇಳಿದ್ದರಂತೆ. ಅಂದು 92ನೇ ವಯಸ್ಸಿನ ಬಲ್ಬೀರ್ ಅನಾರೋಗ್ಯದಿಂದ ಬಳಲುತ್ತಿದ್ದರಂತೆ. ಆ ಪಂದ್ಯದಲ್ಲಿ ಜಯ ದಾಖಲಿಸಿದ ಭಾರತ ಮುಂಬೈನಲ್ಲಿ ವೆಸ್ಟ್ ಇಂಡೀಸ್ ಎದುರು ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿತು. ಧೋನಿ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್ ಹಾಗೂ 2011 ಏಕದಿನ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು.

    ಗೆದ್ದು ನನ್ನ ಆರೋಗ್ಯ ವೃದ್ಧಿಸಿ ಎಂದು ಬಲ್ಬೀರ್ ಹೇಳಿದ್ದು ಯಾರಿಗೆ...

    ಇದನ್ನೂ ಓದಿ: ಕ್ರೀಡೆಗೂ ಸಿಕ್ಕಿತು ಕೈಗಾರಿಕಾ ಸ್ಥಾನಮಾನ

    ಹಲವು ದಿನಗಳಿಂದ ಬಹುಅಂಗಾಂಗ ವೈಲ್ಯದಿಂದ ಬಳಲುತ್ತಿದ್ದ 96 ವರ್ಷದ ಬಲ್ಬೀರ್ ಸೋಮವಾರ ಬೆಳಗ್ಗೆ ನಿಧನರಾದರು. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಆಯ್ಕೆ ಮಾಡಿದ ಒಲಿಂಪಿಕ್ ಇತಿಹಾಸದ 16 ದಿಗ್ಗಜ ಕ್ರೀಡಾಪಟುಗಳ ಪೈಕಿ ಭಾರತದ ಏಕೈಕ ಕ್ರೀಡಾಪಟುವಾಗಿದ್ದರು. ಒಲಿಂಪಿಕ್ಸ್ ಫೈನಲ್ ‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ದಾಖಲೆ ಬಲ್ಬೀರ್ ಹೆಸರಿನಲ್ಲಿದೆ. 1952ರ ಹೆಲ್ಸಿಂಕಿ ಕ್ರೀಡಾಕೂಟದಲ್ಲಿ ಭಾರತ 6-1 ರಿಂದ ನೆದರ್ಲೆಂಡ್ಸ್ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ ಬಲ್ಬೀರ್ ಒಬ್ಬರೇ 5 ಗೋಲು ಬಾರಿಸಿದ್ದರು. ಭಾರತದ ಅವರಿಗೆ 1957ರಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವ ನೀಡಿತ್ತು. 1975ರ ಹಾಕಿ ವಿಶ್ವಕಪ್ ವಿಜೇತ ಭಾರತ ತಂಡದ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts