More

    ಧರ್ಮನಿಂದೆ ಕುರಿತ ಟ್ವೀಟ್ ಮಾಡಿದ ಇಮ್ರಾನ್ ಖಾನ್: ಯುಎನ್​ಎಚ್​ಆರ್​ಸಿ ಸದಸ್ಯತ್ವದ ಪಾಕ್​ ಕನಸೂ ಭಗ್ನ

    ಬೆಂಗಳೂರು : ಧರ್ಮನಿಂದನೆ ಕುರಿತಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡಿರುವ ಟ್ವೀಟ್​ಗೆ ಯುಎನ್​ ವಾಚ್​ ಎಂಬ ಎನ್​ಜಿಒ ಸರಿಯಾದ ತಿರುಗೇಟು ನೀಡಿ ಗಮನಸೆಳೆದಿದೆ. ಅಷ್ಟೇ ಅಲ್ಲ, 2021-23ರ ಅವಧಿಯ ಸದಸ್ಯತ್ವಕ್ಕೆ ಸ್ಪರ್ಧಿಸಲು ಬಯಸಿದ್ದ ಪಾಕಿಸ್ತಾನದ ಆಸೆಗೆ ತಣ್ಣೀರೆರಚಿದೆ. ಜಿನೇವಾ ಮೂಲದ ಎನ್​ಜಿಒ ಇದಾಗಿದ್ದು ವಿಶ್ವಸಂಸ್ಥೆಯ ಕಾರ್ಯಸಾಧನೆಗಳ ಮೇಲೆ ನಿಗಾ ಇರಿಸುವ ಕಾರ್ಯ ಮಾಡುತ್ತಿದೆ.

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನವೆಂಬರ್ 5ರಂದು ಧರ್ಮನಿಂದನೆ ಕುರಿತ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿಡಿತದಲ್ಲಿ ಧರ್ಮನಿಂದನೆ ಇರುವುದನ್ನು ಸಹಿಸಲಾಗುತ್ತಿಲ್ಲ ಎಂಬ ಹೇಳಿಕೆಯನ್ನು ಖಾನ್ ನೀಡಿದ್ದರು. ಇದನ್ನು ಖಂಡಿಸಿರುವ ಯುಎನ್​ ವಾಚ್​ ನವೆಂಬರ್ 7ರಂದು ಚುಟುಕಾಗಿ ಯುಎನ್​ಎಚ್​ಆರ್​ಸಿಯಲ್ಲಿ ನಿಮ್ಮ ಉಪಸ್ಥಿತಿಯನ್ನೂ ಸಹಿಸಲಾಗುತ್ತಿಲ್ಲ ಎಂದು ತಿರುಗೇಟು ನೀಡುವ ಉತ್ತರ ನೀಡಿದೆ.

    ಇದನ್ನೂ ಓದಿ: ಮ್ಯಾನ್ಮಾರ್​ ಸಾರ್ವತ್ರಿಕ ಚುನಾವಣೆ ಇಂದು: ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಆಂಗ್ ಸಾನ್​ ಸೂ ಕಿ

    ಅಷ್ಟೇ ಅಲ್ಲ, ಈ ಚುಟುಕು ಕುಟುಕಿಗೆ ಪೂರಕವಾಗಿ ತಾನು ವಿಶ್ವಸಂಸ್ಥೆಯ ಹ್ಯೂಮನ್ ರೈಟ್ಸ್ ಕೌನ್ಸಿಲ್​ಗೆ ಸಲ್ಲಿಸಿದ ಹೇಳಿಕೆಯನ್ನೂ ಲಗತ್ತಿಸಿದೆ. ಅದರಲ್ಲಿ ಪಾಕಿಸ್ತಾನ 2021-23ನೇ ಸಾಲಿನ ಯುಎನ್​ಎಚ್​ಆರ್​ಸಿ ಸದಸ್ಯತ್ವಕ್ಕೆ ಪ್ರಯತ್ನಿಸುತ್ತಿರುವುದನ್ನು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ವಿಶ್ವಸಂಸ್ಥೆಯ ನಿಯಮಗಳ ಚೌಕಟ್ಟಿನಲ್ಲಿ ಪಾಕಿಸ್ತಾನ ಇಲ್ಲ. ಮಾನದಂಡಗಳನ್ನೂ ಪಾಲಿಸುತ್ತಿಲ್ಲ ಎಂಬ ಅಂಶಗಳತ್ತ ಗಮನಸೆಳೆದಿರುವ ಯುಎನ್​ವಾಚ್​, ಪಾಕಿಸ್ತಾನ ಈ ಸದಸ್ಯತ್ವಕ್ಕೆ ಅರ್ಹ ರಾಷ್ಟ್ರವಲ್ಲ ಎಂಬುದನ್ನು ಪ್ರತಿಪಾದಿಸಿದೆ. (ಏಜೆನ್ಸೀಸ್)

    ಬಿಗ್ ಬಾಸ್ಕೆಟ್​ನ 2 ಕೋಟಿ ಬಳಕೆದಾರರ ಡೇಟಾ ಡಾರ್ಕ್​ವೆಬ್​ನಲ್ಲಿ ಬಿಕರಿ : ಸೈಬಲ್​ ವರದಿ, ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts