More

    ಇಮ್ರಾನ್ ಖಾನ್ ಆಡಿಯೋ ಲೀಕ್​: ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ…

    ಪಾಕಿಸ್ತಾನ: ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಅವರದ್ದು ಎನ್ನಲಾದ ಸೆಕ್ಸ್​ ಸಂಭಾಷಣೆಯ 2 ಆಡಿಯೋ ವೈರಲ್​ ಆಗಿದ್ದು, ಪಾಕಿಸ್ತಾನ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಧಾನಿ ಆಗಿದ್ದ ವೇಳೆ ಮಹಿಳೆಯೊಬ್ಬರ ಜತೆ ಸೆಕ್ಸ್​ ಕುರಿತು ಫೋನ್​ ಮೂಲಕ ಇಮ್ರಾನ್​ ಖಾನ್​ ಮಾತುಕತೆ ನಡೆಸಿರುವ ಆಡಿಯೋ ಒಂದಾದರೆ, ಇನ್ನೊಂದು ಇತ್ತೀಚಿನದ್ದು ಎನ್ನಲಾಗಿದೆ. ಅಶ್ಲೀಲವಾಗಿ ಮಹಿಳೆ ಜತೆ ಮಾತನಾಡುತ್ತಾ ತನ್ನ ಬಳಿ ಬರುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಮಹಿಳೆಯು ನಿಮ್ಮಿಂದಾಗಿ ನನ್ನ ಖಾಸಗಿ ಅಂಗ ನೋಯುತ್ತಿದ್ದೆ… ಈಗ ಬರಲು ಆಗಲ್ಲ, ನಾಳೆ ಬರುವೆ ಎಂದಿದ್ದಾಳೆ.

    ಇಮ್ರಾನ್​ ಖಾನ್​ ಕಾಲಿಗೆ ಗುಂಡು ತಿಂದ ಕಥೆ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗಷ್ಟೇ ಮುಂದಿನ 5 ವರ್ಷಗಳ ಕಾಲ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಕ್ಕೆ ಒಳಗಾಗಿದ್ದರು. ಕಳೆದ ತಿಂಗಳು ಪಾಕಿಸ್ತಾನ ಸರ್ಕಾರದ ಅವರು ಮಾಡಿದ್ದ ಭಾಷಣವನ್ನು ಎಲ್ಲ ಮಾಧ್ಯಮದಿಂದಲೂ ತೆಗೆದು ಹಾಕಲಾಗಿತ್ತು. ಪಾಕಿಸ್ತಾನದ ರಾಷ್ಟ್ರೀಯ ಸುರಕ್ಷತೆಗೆ ಆಪತ್ತು ತರುವ ಈ ಭಾಷಣ ಜನರ ನಡುವೆ ದ್ವೇಷವನ್ನೂ ಮೂಡಿಸುತ್ತದೆ ಎಂಬ ಕಾರಣ ನೀಡಿ ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ಮತ್ತು ನಿಯಂತ್ರಣ ಮಂಡಳಿ (PEMRA), ಇಮ್ರಾನ್​ ಖಾನ್​ ಭಾಷಣ ಪ್ರಸಾರ ಮಾಡದಂತೆ ಸೂಚಿಸಿತ್ತು. ಇದೀಗ ಸೆಕ್ಸ್​ ಸಂಭಾಷಣೆಯ 2 ಆಡಿಯೋ ವೈರಲ್​ ಆಗಿದ್ದು, ಇಮ್ರಾನ್​ ಖಾನ್​ ಭಾರೀ ಸುದ್ದಿಯಾಗುತ್ತಾ ಭಾರೀ ಮುಜುಗರಕ್ಕೆ ಒಳಗಾಗಿದ್ದಾರೆ.

    ಆಡಿಯೋದಲ್ಲಿ ಏನಿದೆ?: ಇಮ್ರಾನ್​ ಖಾನ್​ ಅವರು ಮಹಿಳೆಯೊಬ್ಬರಿಗೆ ತನ್ನ ಬಳಿ ಬರುವಂತೆ ಕರೆಯುತ್ತಾರೆ. ಅದಕ್ಕೆ ಆ ಮಹಿಳೆ ‘ನಿಮ್ಮಿಂದಾಗಿ ನನ್ನ ಸ್ತನಗಳಿಗೆ ತುಂಬಾ ನೋವಾಗಿದೆ. ಈಗ ಬರಲು ಆಗಲ್ಲ. ನಾಳೆ ಬರುತ್ತೇನೆ’ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ, “ನನ್ನ ಮನೆಯವರು, ಮಕ್ಕಳು ಬರುವುದರಿಂದ ಸಾಧ್ಯವೇ ಆ ದಿನ ನನ್ನ-ನಿನ್ನ ಭೇಟಿ ಸಾಧ್ಯವೇ ಎಂದು ನೋಡುತ್ತೇನೆ. ಅವರ ಭೇಟಿ ತಡವಾಗಬಹುದು. ನನ್ನ ಎಲ್ಲ ಕಾರ್ಯಕ್ರಮಗಳನ್ನು ಬದಲಿಸುತ್ತೇನೆ. ನಾಳೆ ತಿಳಿಸುತ್ತೇನೆ” ಎಂದು ಹೇಳುತ್ತಾರೆ. ಹೀಗೆ ಸಂಭಾಷಣೆ ಸಾಗಿದ್ದು, ಅಶ್ಲೀಲ ಪದಗಳೂ ಬಳಕೆಯಾಗಿವೆ.

    ಅಂದಹಾಗೇ ಈ ಆಡಿಯೋವನ್ನು ಮೊದಲಿಗೆ ಲೀಕ್​ ಮಾಡಿದ್ದು ಪಾಕಿಸ್ತಾನಿ ಪತ್ರಕರ್ತ ಸೈಯದ್ ಅಲಿ ಹೈದರ್. ಈತ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಆಡಿಯೋ ಲೀಕ್​ ಮಾಡಿದ್ದು, ಸಖತ್​ ವೈರಲ್​ ಆಗಿದೆ. ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ದಿನಗಳಿದ್ದು, ಈ ಸಂದರ್ಭದಲ್ಲಿ ಸೆಕ್ಸ್​ ಆಡಿಯೋ ವೈರಲ್​ ಆಗಿರುವುದು ಎದುರಾಳಿ ಪಕ್ಷಗಳಿಗೆ ಅಸ್ತ್ರವಾಗಿದೆ. ಇದು ಇಮ್ರಾನ್​ ಖಾನ್​ ಅವರದ್ದೇ ಧ್ವನಿ. ಅವರು ಪ್ರಧಾನಿಯಾದಾಗ ಕಚೇರಿಯಲ್ಲಿ ಏನೆಲ್ಲಾ ಮಾಡುತ್ತಿದ್ದರು ಎಂಬುದಕ್ಕೆ ಈ ಸೆಕ್ಸ್​ ಆಡಿಯೋವೇ ಉದಾಹರಣೆ ಎಂದು ಪಾಕಿಸ್ತಾನ್​ ಪೀಪಲ್ ಪಾರ್ಟಿ ಹಾಗೂ ಪಾಕಿಸ್ತಾನ್​ ಮುಸ್ಲಿಂ ಲೀಗ್​ ಪಕ್ಷಗಳು ಗಂಭೀರ ಆರೋಪ ಮಾಡಿವೆ. ಆದರೆ ಇದನ್ನು ಅಲ್ಲಗೆಳೆದಿರುವ ಪಿಟಿಐ(ಪಾಕಿಸ್ತಾನ್​ ತೆಹರೀಕ್​ ಇ ಇನ್ಸಾಫ್​) ಪಕ್ಷವು, ಇದು ಫೇಕ್​ ಆಡಿಯೋ. ಆ ಧ್ವನಿ ಇಮ್ರಾನ್​ ಖಾನ್​ ಅವರದ್ದಲ್ಲ ಎಂದು ಸಮರ್ಥಿಸಿಕೊಂಡಿದೆ.(ಏಜೆನ್ಸೀಸ್​)

    ದಾವಣಗೆರೆ ಮೂಲದ ನವದಂಪತಿ ಬಾಳಲ್ಲಿ ದುರಂತ: ಸ್ಟ್ರೆಚರ್​​ನಲ್ಲಿ ಮಲಗಿಕೊಂಡೇ ಶವಗಾರಕ್ಕೆ ಬಂದು ಗಂಡನ ಮುಖ ಸವರಿದ ಪತ್ನಿ… ಮನಕಲಕುತ್ತೆ ಈ ಸ್ಟೋರಿ

    ಶಾಲಾ ಸಮಯ ಬದಲಾಗಲಿ, ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ನಿಗದಿ ಮಾಡಿ: ಹೃದ್ರೋಗ ತಜ್ಞ ಡಾ.ಸಿ.ಎನ್​.ಮಂಜುನಾಥ್​

    ಬೆಂಗ್ಳೂರಿನಲ್ಲಿ ಟೆಕ್ಕಿ ವಿಚಿತ್ರ ಸಾವು: ಸಾರ್ವಜನಿಕರ ನೆರವಿನಿಂದ ಕಾರಿಗೆ ಹೊದಿಕೆ ಹೊದಿಸಿದ ಬಳಿಕ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts