More

    ಬೆಂಗ್ಳೂರಿನಲ್ಲಿ ಟೆಕ್ಕಿ ವಿಚಿತ್ರ ಸಾವು: ಸಾರ್ವಜನಿಕರ ನೆರವಿನಿಂದ ಕಾರಿಗೆ ಹೊದಿಕೆ ಹೊದಿಸಿದ ಬಳಿಕ ದುರಂತ ಸಾವು

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬ ವಿಚಿತ್ರ ರೀತಿಯಲ್ಲಿ ಮೃತಪಟ್ಟಿದ್ದಾನೆ. ತನ್ನ ಕಾರಿನಲ್ಲಿ ನೈಟ್ರೋಜನ್ ಸಿಲಿಂಡರ್ ಸೋರಿಕೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ.

    ಸಾಫ್ಟ್​ ಇಂಜಿನಿಯರ್ ವಿಜಯ್‌ ಕುಮಾರ್ (51) ಮೃತ ದುರ್ದೈವಿ. ಅನಾರೋಗ್ಯದಿಂದ ಬೇಸತ್ತು ಕಾರಿನಲ್ಲಿ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮಹಾಲಕ್ಷ್ಮಿ ಲೇಔಟ್​ನ ಕುರುಬರಹಳ್ಳಿ ಜಂಕ್ಷನ್ ಬಳಿ ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮೃತ ವಿಜಯ್ ಕುಮಾರ್ ಮಹಾಲಕ್ಷ್ಮಿ ಲೇಔಟ್​ನ ನಿವಾಸಿ. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ. ಆದರೆ, ಆತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಇದರಿಂದ ಬೇಸತ್ತು ಸಾವಿನ ಕಡೆ ಮುಖ ಮಾಡಿದ್ದಾನೆ.

    ವಿಜಯ್ ಕುಮಾರ್ ಸಾವಿಗೆ ಆಯ್ದುಕೊಂಡ ದಾರಿಯೇ ವಿಚಿತ್ರ. ತನ್ನ ಕಾರಿನಲ್ಲಿ ನೈಟ್ರೋಜನ್ ಗ್ಯಾಸ್ ಸೋರಿಕೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಕ್ಕಾಗಿ ಟೆಕ್ಕಿ ನೈಟ್ರೋಜನ್ ಸಿಲಿಂಡರ್ ಖರೀದಿ ಮಾಡಿದ್ದ. ಬಳಿಕ ಕಾರಿನ ಹಿಂಬದಿ ಸೀಟ್​ನಲ್ಲಿ ಕುಳಿತುಕೊಂಡು ತಲೆಗೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಗ್ಯಾಸ್ ಲೀಕ್​ ಮಾಡಿ ಟೆಕ್ಕಿ ಮೃತಪಟ್ಟಿದ್ದಾನೆ. ಅಲ್ಲದೇ ಸಾರ್ವಜನಿಕರ ನೆರವಿನಿಂದ ವಿಜಯ್​ ಕುಮಾರ್​ ಕಾರಿಗೆ ಹೊದಿಕೆ ಹಾಕಿಸಿದ್ದ.

    ಮೊದಲು ಕಾರಿನೊಳಗೆ ಕುಳಿತುಕೊಂಡು ನಂತರ ಹೊದಿಕೆ ಹಾಕಿಸಿದ್ದನಂತೆ. ಅನುಮಾನಗೊಂಡು ಸ್ಥಳೀಯರು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ವಿಜಯ್​ ಕುಮಾರ್​ ಸಾವು ಬದುಕಿನ ನಡುವೆ ಹೋರಾಡತ್ತಿದ್ದ. ಕೂಡಲೇ ಆತನನ್ನು ಅಸ್ಪತ್ರೆಗೆ ದಾಖಲಿಸಲು ಪೊಲೀಸರು ಮುಂದಾದರು. ಆದರೆ, ಮಾರ್ಗಮಧ್ಯೆ ಟೆಕ್ಕಿ ಕೊನೆಯುಸಿರೆಳೆದಿದ್ದಾನೆ.

    ತನ್ನ ನೋವಿನ ಬಗ್ಗೆ ಮನೆಯವರ ಜೊತೆಗೂ ವಿಜಯ್​ ಕುಮಾರ್​ ಚರ್ಚಿಸುತ್ತಿದ್ದ. ಸದ್ಯ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​​)

    PSI ನೇಮಕಾತಿ ಹಗರಣ ಮೀರಿಸುವಂತಿದೆ ಈ ಬೆಸ್ಕಾಂ ಹಗರಣ: ಅನುಕಂಪದ ಆಧಾರದಲ್ಲಿ 6 ಜನ ನಕಲಿಗಳಿಗೆ ನೌಕರಿ!

    ಮೈಮಾಟ ಪ್ರದರ್ಶಿಸಲು ಹೋಗಿ ಎಡವಟ್ಟು: ದುಬೈನಲ್ಲಿ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ ಬಂಧನ

    ಸರ್ಕಾರಿ ಕಾರ್ನರ್: ಸೇವಾವಧಿ ಪರಿಗಣನೆ ನಿಯಮಾವಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts