More

    ಸರ್ಕಾರಿ ಕಾರ್ನರ್: ಸೇವಾವಧಿ ಪರಿಗಣನೆ ನಿಯಮಾವಳಿ

    ದಿನದ ಪ್ರಶ್ನೆ

    ನಾನು 2017ರ ಜು.15ರಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಪದವೀಧರ ಪ್ರಾಥಮಿಕ ಶಾಲಾ ಸಹಶಿಕ್ಷಕರ ಆಯ್ಕೆ ಪಟ್ಟಿಯಲ್ಲಿದ್ದೇನೆ. ಹಾಗಾಗಿ ಈ ಹುದ್ದೆಗೆ ಸೇರಿದ ಮೇಲೆ ಮತ್ತೆ ಪ್ರೊಬೇಷನರಿ ಪೀರಿಯಡ್ ಮುಗಿಸಬೇಕೇ? ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಹೊಂದುವಾಗ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ ಸೇವಾವಧಿ ಪರಿಗಣಿಸುತ್ತಾರೆಯೇ?

    | ಅನುರಾಧ ಭಟ್ ಉಡುಪಿ

    ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್) ನಿಯಮಾವಳಿ 1977ರ ರೀತ್ಯಾ ನೀವು ಪ್ರಾಥಮಿಕ ಶಿಲಾ ಶಿಕ್ಷಕಿಯಾಗಿ ಸಲ್ಲಿಸಿದ ಸೇವೆಯು ಬೇರೆ ವೃಂದವಾಗಿದ್ದು, ಪದವೀಧರ ಪ್ರಾಥಮಿಕ ಶಾಲಾ ಸಹಶಿಕ್ಷಕಿಯಾಗಿ ಸೇರಿದ ಮೇಲೂ ಮತ್ತೆ 2 ವರ್ಷ ಪ್ರೊಬೇಷನ್ ಅವಧಿ ಪೂರೈಸಬೇಕಾಗುತ್ತದೆ. ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಪದೋನ್ನತಿ ಹೊಂದುವಾಗ ನೀವು ಪ್ರಾಥಮಿಕ ಶಾಲೆಯಲ್ಲಿ ನಿರ್ವಹಿಸಿದ ಸೇವಾವಧಿಯನ್ನು ಜ್ಯೇಷ್ಠತೆ ದೃಷ್ಟಿಯಿಂದ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು’ ಪುಸ್ತಕ ನೋಡಬಹುದು.

    ಸರ್ಕಾರಿ ಕಾರ್ನರ್: ಸೇವಾವಧಿ ಪರಿಗಣನೆ ನಿಯಮಾವಳಿ

    400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ನೋಟಿಸ್; 14 ಕೋಟಿ ರೂ. ಬಾಕಿ ಇದೆ ಎಂದ ಆದಾಯ ತೆರಿಗೆ ಅಧಿಕಾರಿಗಳು!

    ಮೂವರು ವಿವಾಹಿತ ಶಿಕ್ಷಕರ ನಡುವಿನ ಪ್ರೀತಿಗೆ ವಿದ್ಯಾರ್ಥಿ ಬಲಿ; ಇಬ್ಬಿಬ್ಬರೊಂದಿಗಿದ್ದ ಅಮ್ಮನ ಸಲುಗೆ ಮಗನಿಗೇ ಮುಳುವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts