More

    ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

    ಬಾಗಲಕೋಟೆ: ಸ್ವಲ್ಪ ಹೆಚ್ಚು-ಕಮ್ಮಿ ಆಗಿದ್ದರೂ ಜೀವಂತ ಯುವಕನೊಬ್ಬ ಪೋಸ್ಟ್ ಮಾರ್ಟಂ ಆಗಿಬಿಡುತ್ತಿದ್ದ! ಇನ್ನೇನು ಮರಣೋತ್ತರ ಪರೀಕ್ಷೆ ಆಗಬೇಕು ಅನ್ನುವಷ್ಟರಲ್ಲಿ ಸ್ವಲ್ಪದರಲ್ಲೇ ಮಹಾ ಯಡವಟ್ಟು ತಪ್ಪಿದೆ. ಇಂತಹ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಸೋಮವಾರ ಸಂಭವಿಸಿದ್ದು, ಸದ್ಯ ಆ ಯುವಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಪೋಸ್ಟ್ ಮಾರ್ಟಂ ಕೊಠಡಿಗೆ ಹೋಗಿ ಅದೃಷ್ಟವಶಾತ್​ ಜೀವಂತವಾಗಿ ವಾಪಸ್ ಬಂದ ಯುವಕನ ಹೆಸರು ​ ಮಹಾಲಿಂಗಪುರದ ಶಂಕರ ಷಣ್ಮುಖ ಗೊಂಬಿ(27). ಶನಿವಾರ ಶಂಕರ ಪ್ರಯಾಣಿಸುತ್ತಿದ್ದ ಸ್ಕೂಟಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ, ಶಂಕರ ಗಂಭೀರ ಗಾಯಗೊಂಡಿದ್ದ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಈತನನ್ನು ಬೆಳಗಾವಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿರಿ ಕೆಪಿಎಸ್​ಸಿಯ ಎಫ್‍ಡಿಎ ಪ್ರಶ್ನೆ ಪತ್ರಿಕೆ ವಿಜ್ಞಾನಮಯವಾಗಿದ್ದೇಕೆ? ನೆಟ್ಟಿಗರು ಕೊಟ್ಟ ಕಾರಣ ಹೀಗಿದೆ…

    ಶಂಕರ ಬದುಕುವ ಸಾಧ್ಯತೆ ತೀರಾ ಕಡಿಮೆ ಆಸ್ಪತ್ರೆಯ ವೈದ್ಯರು ಹೇಳಿದ್ದರು. ವಾಪಸ್​ ಸ್ವಗ್ರಾಮಕ್ಕೆ ಭಾನುವಾರ ತಡರಾತ್ರಿ ಆಂಬುಲೆನ್ಸ್​ ಮೂಲಕ ಕರೆತರಲಾಗುತ್ತಿತ್ತು. ಮಾರ್ಗ ಮಧ್ಯೆ ಶಂಕರ ಸತ್ತಿದ್ದಾನೆಂದು ಸುದ್ದಿ ಹಬ್ಬಿತ್ತು. ಸ್ನೇಹಿತರು ಹಾಗೂ ಅಭಿಮಾನಿಗಳು ‘ಮರಳಿ ಬಾರದೂರಿಗೆ ಪಯಣ’ ಎಂಬ ಬರಹದೊಂದಿಗೆ ಶಂಕರನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಅಷ್ಟರಲ್ಲಿ ಶಂಕರ ಸತ್ತಿಲ್ಲ ಬದುಕಿದ್ದಾನೆ ಎಂಬ ಸುದ್ದಿಯೂ ಬಂತು. ಜೀವ ಇನ್ನೂ ಇದೆ… ಜೀವ ಹೋಗಿದೆ… ಎನ್ನುವ ಸುದ್ದಿ ಹರಿದಾಡತೊಡಗಿತ್ತು.

    ಸೋಮವಾರ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಗೆ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿದ್ದ ಶಂಕರ್​ನನ್ನ ಕರೆದುಕೊಂಡು ಬಂದಾಗ ಜೀವ ಹೋಗಿದೆ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಅಲ್ಲದೆ ಅಪಘಾತ ಪ್ರಕರಣವಾಗಿದ್ದರಿಂದ ಮರಣೋತ್ತರ ಪರೀಕ್ಷೆಗಾಗಿ ಕೊಠಡಿಗೆ ಕರೆದೊಯ್ದಿದ್ದಾರೆ. ಮರಣೋತ್ತರ ಪರೀಕ್ಷಾ ಕೊಠಡಿಗೆ ಹಿರಿಯ ಅಧಿಕಾರಿ ಬಂದಿದ್ದು, ಆಗ ಯುವಕ ಇನ್ನೂ ಜೀವಂತ ಇದ್ದಾನೆ ಎನ್ನುವುದು ಗೊತ್ತಾಗಿದೆ. ತಕ್ಷಣವೇ ಶಂಕರನನ್ನು ಮಹಾಲಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಇದನ್ನೂ ಓದಿರಿ ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಯುವಕ ಶಂಕರ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪಿಎಂಗೆ ಕರೆದೊಯ್ದಿದ್ದಾರೆ ಎಂದು ನನಗೆ ಮಾಹಿತಿ ಬಂತು. ಅನೇಕರು ಆಸ್ಪತ್ರೆಗೆ ಬಂದು ಹೋಗುವಂತೆ ಫೋನ್ ಮಾಡಿದ್ದರು. ಆಸ್ಪತ್ರೆಗೆ ಭೇಟಿ ನೀಡಿ ಮರಣೋತ್ತರ ಪರೀಕ್ಷಾ ಕೊಠಡಿಗೆ ಹೋಗಿದ್ದೆ. ಆಗ ಯುವಕನ್ನು ಚೆಕ್ ಮಾಡಿದಾಗ ಆತ ಇನ್ನೂ ಜೀವಂತವಾಗಿ ಇರುವುದು ಗೊತ್ತಾಯಿತು. ಕೈ-ಕಾಲು ಅಲುಗಾಡಿಸುತ್ತಿದ್ದ. ತಕ್ಷಣವೇ ಆತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜಮಖಂಡಿ ತಾಲೂಕು ವೈದ್ಯಾಧಿಕಾರಿ ಜಿ.ಎಸ್.ಗಲಗಲಿ ಅವರು ಘಟನೆ ಬಗ್ಗೆ ವಿವರಿಸಿದರು.

    ಈ ಸುದ್ದಿ ತಿಳಿಯುತ್ತಿದ್ದಂತೆ ತೇರದಾಳ ಶಾಸಕ ಸಿದ್ದು ಸವದಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯದ ಬಗ್ಗೆ ವೈದ್ಯರ ಬಳಿ ಮಾಹಿತಿ ಪಡೆದರು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶಂಕರ ಬದುಕುಳಿಯಲ್ಲ ಎಂದು ವೈದ್ಯರು ಹೇಳಿದ್ದಾರೆ. ವಾಪಸ್ಸು ಕರೆದುಕೊಂಡು ಬರುತ್ತಿದ್ದಾಗ ಸತ್ತಿದ್ದಾನೆ ಎಂದು ಹೇಳಲಾಗಿತ್ತಂತೆ. ಪಿಎಂಗೂ ಕರೆದುಕೊಂಡು ಹೋಗಿದ್ದರು. ಆದರೆ, ಪರಿಶೀಲಿಸಿದಾಗ ಜೀವ ಇರುವುದು ಗೊತ್ತಾಗಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಪರಿಸ್ಥಿತಿ ಗಂಭೀರವಾಗಿದೆ. ಬದುಕುಳಿಯಲಿ ಎನ್ನುವುದು ಎಲ್ಲರ ಪ್ರಾರ್ಥನೆ ಎಂದು ಶಾಸಕರು ಸುದ್ದಿಗಾರರಿಗೆ ತಿಳಿಸಿದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಪ್ರಾಣಾಪಾಯದಿಂದ ನಟ ರಿಷಬ್​ ಶೆಟ್ಟಿ, ನಟಿ ಗಾನವಿ ಜಸ್ಟ್ ಮಿಸ್​!

    ಕಾಲೇಜು ಕಟ್ಟಡದಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ! ಡೆತ್​ನೋಟ್​ ಪತ್ತೆ, ಸಹಪಾಠಿಗಳ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts