More

    ಪಿಜಿಗಳಲ್ಲಿದ್ದ ಹುಡುಗಿಯರ ಸ್ನಾನದ ವಿಡಿಯೋ ರೆಕಾರ್ಡ್​​​​ ಮಾಡುತ್ತಿದ್ದ ಆರೋಪಿ ಅಂದರ್!

    ಬೆಂಗಳೂರು: ಪಿಜಿಯಲ್ಲಿರುವ ಹುಡುಗಿಯರೇ ಎಚ್ಚರ ಎಚ್ಚರ..! ನೀವು ಸ್ನಾನಕ್ಕೆ ಹೋಗುವಾಗ ಒಮ್ಮೆ ಬಾತ್ರೂಮ್ ಕಿಟಕಿ ಕ್ಲೋಸ್ ಆಗಿದೆಯಾ ಅಂತ ಚೆಕ್ ಮಾಡಿಕೊಳ್ಳಿ. ಕೊಂಚ ಎಚ್ಚರ ತಪ್ಪಿದ್ರೂ ನಿಮ್ಮ ಖಾಸಗಿ ವಿಡಿಯೋಗಳು ರೆಕಾರ್ಡ್, ಆಗಿ ಬ್ಲ್ಯಾಕ್​​​ಮೇಲ್​​​​ಗೆ ಒಳಗಾಗಬಹುದು..!

    ಹೌದು, ಪಿಜಿಗಳಲ್ಲಿ ಹುಡುಗೀಯರು ಸ್ನಾನ ಮಾಡುತ್ತಿರುವ ವಿಡಿಯೋ ರೆಕಾರ್ಡ್​​​​ ಮಾಡಿಕೊಳ್ಳುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಓದಿದ್ದು ಇಂಜಿನಿಯರಿಂಗ್, ಆದ್ರೆ ಮಾಡುತ್ತಿದ್ದದ್ದು ಮಾತ್ರ ಹುಡ್ಗೀರ ಅಶ್ಲೀಲ ವಿಡಿಯೋ ಸೆರೆಹಿಡಿಯುವ ಕೆಲಸ.

    ಒಂದೇ ಕಾಂಪ್ಲೆಕ್ಸ್​​​ನಲ್ಲಿ ಹುಡುಗಿಯರ ಮತ್ತು ಹುಡುಗರ ಪಿಜಿ ಇವೆ. ನಾಲ್ಕು ವರ್ಷದಿಂದ ಈತ ಆ ಕಾಂಪ್ಲೆಕ್ಸ್ ನಲ್ಲಿರೋ ತನ್ನ ಪಿಜಿಯಲ್ಲಿದ್ದುಕೊಂಡೇ ಹುಡುಗಿಯರ ಸ್ನಾನದ ವಿಡಿಯೋ ಮಾಡುತ್ತಿದ್ದ. ನಂತರ ಬ್ಲ್ಯಾಕ್​​ಮೇಲ್​​​ ಮಾಡುತ್ತಿದ್ದ. ಟಾಪ್ ಫ್ಲೋರ್ ಮೇಲೆ ಹತ್ತಿ, ಬ್ಲಾಕ್​​​ಗಳ ನಡುವೆ ರಿಸ್ಕ್ ತೆಗೆದುಕೊಂಡು ಈ ಕೆಲಸ ಮಾಡುತ್ತಿದ್ದ. ನಂತರ ವಿಡಿಯೋ ಇಟ್ಟುಕೊಂಡು ಸೆಕ್ಷ್ಯೂಯಲ್ ಫೇವರ್​​​ಗೆ ಬಳಸಿಕೊಳ್ತಿದ್ದ.

    ಮೊದಲು ಒಬ್ಬ ಹುಡುಗಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಹುಡುಗಿಯ ಮೊಬೈಲ್​​​ನಿಂದ ಈತನಿಗೆ ಮೆಸೇಜ್ ಮಾಡಿಸಿ ಕರೆಸಿಕೊಂಡಿದ್ದಾರೆ. ನಂತರ ಇವನೇ ಅನ್ನೋದು ಕನ್​​ಫರ್ಮ್ ಆಗಿದ್ದೇ ತಡ ಎಲ್ಲ ವಿಷಯ ಬಾಯಿ ಬಿಡಿಸಿದ್ದಾರೆ. ಆತನ ಮೊಬೈಲ್, ಲ್ಯಾಪ್ ಟ್ಯಾಪ್ ವಶಕ್ಕೆ ಪಡೆದಾಗ ಅವುಗಳಲ್ಲಿ ಸಾಕಷ್ಟು ಹುಡುಗಿಯರ ವಿಡಿಯೋ ಪತ್ತೆಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts