More

    ಸಾವಿನಲ್ಲೂ ಇತರರ ಬಾಳಿಗೆ ಬೆಳಕಾದ ಯುವಕ; 5ಕ್ಕೂ ಹೆಚ್ಚು ಅಂಗಾಂಗ ದಾನ…

    ಹಾಸನ: ಇಲ್ಲೊಬ್ಬ ಹದಿವಯಸ್ಸಿನ ಯುವಕ ಸಾವಿನಲ್ಲೂ ಸಾರ್ಥಕತೆ ಪಡೆದಿದ್ದಾನೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಪುತ್ರನ ಮೆದುಳು ನಿಷ್ಕ್ರಿಯಗೊಂಡಿದೆ. ಆ ದುಃಖವನ್ನು ಮರೆತು ಹುಡುಗನ ಪೋಷಕರು ಮಗನ ಅಂಗಾಂಗವನ್ನು ದಾನ ಮಾಡಿದ್ದಾರೆ.

    ಡಿಸೆಂಬರ್ 6ರಂದು ಕಾಲೇಜಿಗೆ ತೆರಳುವ ಸಂದರ್ಭ ನಾರಾಯಣ ಗೌಡ ಹೆಸರಿನ 17 ವರ್ಷದ ಯುವಕ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಇದರಿಂದಾಗಿ ತಕೆಗೆ ಪೆಟ್ಟು ಬಿದ್ದು ಮೆದುಳು ನಿಷ್ಕ್ರೀಯಗೊಂಡಿದೆ. ಇನ್ನು ಯಾವುದೇ ಕಾರಣಕ್ಕೂ ಮಗ ಹಿಂತಿರುಗಿ ಬರಲಾರ ಎನ್ನುವುದು ಖಚಿತವಾಗಿತ್ತು. ಈ ವಿಷಯವನ್ನು ಪೋಷಕರಿಗೆ ವೈದ್ಯರು ಮನವರಿಕೆ ಮಾಡಿಸಿದ್ದಾರೆ.

    ನಂತರ ವೈದ್ಯರು ಅಂಗಾಂಗ ದಾನದ ಮಹತ್ವವನ್ನು ಪೋಷಕರಿಗೆ ತಿಳಿಸಿದ್ದಾರೆ. ಇದರ ಮಹತ್ವವನ್ನು ಪೋಷಕರು ಅರ್ಥ ಮಾಡಿಕೊಂಡು ಇದ್ದ ಒಬ್ಬನೇ ಒಬ್ಬ ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

    ಇದೀಗ ಪೋಷಕರು ಯುವಕನ ಯಕೃತ್ತು ಕಾರ್ನಿಯಾ, ಚರ್ಮ, ಎರಡೂ ಮೂತ್ರಪಿಂಡಗಳು, ಹೃದಯ ಕವಾಟಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ಪೋಷಕರಾದ ರಮೇಶ್ ಮತ್ತು ರಾಧಾ ದಂಪತಿಯ ಅನುಮತಿ ಮೇರೆಗೆ ನಾಳೆ ಮದ್ಯಾಹ್ನದ ವೇಳೆಗೆ ಅಂಗಂಗ ದಾನ ಪ್ರಕ್ರಿಯೆ ಪೂರೈಸಲಿದೆ. ನಂತರ ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆಡಳಿತ ಮಂಡಳಿ ಹಸ್ತಾಂತರ ಮಾಡಲಿದೆ. ಪೋಷಕರು ಹೆಚ್ಚಿನ ಶಿಕ್ಷಣ ಪಡೆದಿಲ್ಲವಾದರೂ ಮಗನ ಅಂಗಾಂಗ ದಾನ ಮಾಡಿ ಅನೇಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts