More

    ಒಂದು ಕಪ್​ ಟೀ ಬೆಲೆ ಸಾವಿರ ರೂಪಾಯಿ: ಟೀಪುಡಿ ಬೆಲೆ ಕೇಳಿದ್ರಂತೂ ಶಾಕ್​ ಆಗ್ತೀರಾ!

    ಕೋಲ್ಕತ: ಒಂದು ಕಪ್​ ಟೀ ಬೆಲೆ ಎಷ್ಟಿರಬಹುದು? ಅಬ್ಬಾಬ ಎಂದರೆ 5 ರಿಂದ 10 ರೂಪಾಯಿ ಇರಬಹುದು. ಕೆಲವಡೆ 20 ರೂಪಾಯಿ ಸಹ ತೆಗೆದುಕೊಳ್ಳಬಹುದು. ಫೈವ್​ಸ್ಟಾರ್​ ಹೋಟೆಲ್​​ಗಳಲ್ಲಿ 50 ರಿಂದ 100 ರೂ. ಬಿಲ್​ ಮಾಡಬಹುದು. ಆದರೆ, ಒಂದು ಕಪ್​ ಟೀಗೆ 1000 ರೂಪಾಯಿ ತೆಗೆದುಕೊಳ್ಳುತ್ತಾರೆಂದರೆ ಆ ಟೀ ಏನು ಚಿನ್ನದ್ದಾ ಎಂದು ಪ್ರಶ್ನಿಸುವುದು ಗ್ಯಾರೆಂಟಿ.

    ಇಂದು ಟೀ ಜನರ ಬದುಕಿನ ಒಂದು ಭಾಗವಾಗಿದೆ. ಟೀ ಕುಡಿದೇ ಬದುಕುವವರಿದ್ದಾರೆ. ಟೀ ಅನ್ನು ಒತ್ತಡ ನಿವಾರಕ ಎಂದು ಪರಿಗಣಿಸಲಾಗಿದ್ದು, ದಿನ ನಿತ್ಯ ಅನೇಕ ಬಾರಿ ಟೀ ಕುಡಿಯುವವರಿದ್ದಾರೆ. ಕಡಿಮೆ ಬೆಲೆಯಲ್ಲೇ ಸಿಗುವಾಗ ಒಂದು ಟೀಗೆ ಸಾವಿರ ಕೊಡೋಕ್ಕಾಗುತ್ತಾ? ಅಂಥದ್ದೇನಿದೆ ಆ ಟೀಯಲ್ಲಿ? ದುಡ್ಡು ಕೊಟ್ಟು ಅದನ್ನು ಕುಡಿಯುವವರಿ ಇದ್ದಾರಾ ಎಂದು ಪ್ರಶ್ನಿಸುವವರಿಗೆ ಮುಂದಿದೆ ಉತ್ತರ.

    ಅಂದಹಾಗೆ ದುಬಾರಿ ಟೀ ಹೆಸರು ಬೋ-ಲೇ. ಕೋಲ್ಕತದಲ್ಲಿರುವ ಈ ಟೀ ಸ್ಟಾಲ್​ನಲ್ಲಿ ಕನಿಷ್ಠ 100 ರೂ.ನಿಂದ ಗರಿಷ್ಠ 1000 ರೂ.ವರೆಗೂ ಟೀ ಸಿಗುತ್ತದೆ. 1000 ರೂ. ಟೀನ ವಿಶೇಷತೆಯೆಂದರೆ ಅದಕ್ಕೆ ಬಳಸುವ ಟೀಪುಡಿ ಕೆಜಿಗೆ 3 ಲಕ್ಷ ರೂಪಾಯಿ. ಈ ಶಾಪ್​ನ ಮಾಲೀಕನ ಹೆಸರು ಪರ್ತ್​ ಪ್ರತೀಮ್​ ಗಂಗೂಲಿ. ಇವರು ಅನೇಕ ವರ್ಷಗಳಿಂದ ಈ ಸ್ಟಾಲ್​ ಆರಂಭಿಸಿದ್ದು, ವೈವಿಧ್ಯಮಯವಾದ ಟೀಗಳನ್ನು ಮಾರಾಟ ಮಾಡುತ್ತಾ ಬಂದಿದ್ದಾರೆ.

    ಇದನ್ನೂ ಓದಿರಿ: ಜೆಡಿಎಸ್​ಗೆ ಶಕ್ತಿ ತುಂಬಿದ್ರೆ ನಮಗೇ ಮಾರಕ, ಯಾವುದೇ ಕಾರಣಕ್ಕೂ ನಂಬುವಂತಿಲ್ಲ ಎಂದ ಸಚಿವ

    ಗಂಗೂಲಿ 2014ರಲ್ಲಿ ನಿರ್ಜಾಸ್​ ಹೆಸರಿನಲ್ಲಿ ಸಣ್ಣ ಟೀ ಸ್ಟಾಲ್​ ತೆರೆದರು. ಆದರೆ, ಇಂದು ಬಹುದೊಡ್ಡದಾಗಿ ಬೆಳೆದಿದೆ. ಸಿಲ್ವರ್​ ಸ್ಯು ವೈಟ್​ ಟೀ, ಲ್ಯಾವೆಂಡರ್​ ಟೀ, ಹಿಬಿಕಸ್​ ಟೀ, ವೈನ್​ ಟೀ, ಬಾಸಿಲ್​ ಜಿಂಜರ್​ ಟೀ, ಕಾರ್ನ್​ಬ್ರೆಡ್​ ಟೀ ಮತ್ತು ರುಬಿಯೋ ಟೀ ಸೇರಿದಂತೆ ಅನೇಕ ಟೀ ವೆರೈಟಿಗಳು ದೊರೆಯುತ್ತದೆ.

    ಸುಮಾರು 7 ವರ್ಷಗಳ ವರೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ ಗಂಗೂಲಿ ಬಳಿಕ ತನ್ನದೇ ಸಣ್ಣ ಟೀ ಅಂಗಡಿಯನ್ನು ತೆರೆಯುತ್ತಾರೆ. ಬಳಿಕ ಅಭಿವೃದ್ಧಿ ಹೊಂದುತ್ತಾ ಇಂದು ಕೋಲ್ಕತದಲ್ಲೇ ತನ್ನ ಬ್ರ್ಯಾಂಡ್​ ಅನ್ನು ಈ ಟೀ ಸ್ಟಾಲ್​ ನಿರ್ಮಿಸಿಕೊಂಡಿದೆ. (ಏಜೆನ್ಸೀಸ್​)

    ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿ ಪತ್ತೆ..!

    ಶಾರುಖ್ ಖಾನ್​, ಆಲಿಯಾ ಭಟ್ ಜಂಟಿಯಾಗಿ ಸಿನಿಮಾ ನಿರ್ಮಾಣ…

    Web Exclusive |ಶೇ. 90 ಆಟೋ-ಟ್ಯಾಕ್ಸಿ ಚಾಲಕರಿಗೆ ಕರೊನಾ ಪ್ಯಾಕೇಜ್: ಪರಿಹಾರ ವಿತರಣೆ ಪ್ರಕ್ರಿಯೆ ಆರಂಭ, 29 ಸಾವಿರ ಅರ್ಜಿ ಪರಿಹರಿಸಲು ಹೆಣಗಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts