More

    ಆರು ತಿಂಗಳ ಕಾಲ ಮುಷ್ಕರಕ್ಕಿಲ್ಲ ಅನುಮತಿ​! ಪ್ರತಿಭಟಿಸಿದರೆ ಸಾವಿರ ರೂ ದಂಡ, ಒಂದು ವರ್ಷ ಜೈಲು ಶಿಕ್ಷೆ

    ಲಖನೌ: ಬಹುತೇಕ ನಿಯಂತ್ರಣಕ್ಕೆ ಬಂದಿದ್ದ ಕರೊನಾ ಸೋಂಕು ದೀಪಾವಳಿ ಹಬ್ಬದ ನಂತರ ಕೊಂಚ ಏರಿಕೆ ಕಾಣಲಾರಂಭಿಸಿದೆ. ಕೆಲವು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿನ ನಿಯಂತ್ರಣಕ್ಕೆಂದು ಉತ್ತರ ಪ್ರದೇಶ ಸರ್ಕಾರ ಕಠಿಣ ನಿಯಮವನ್ನು ಜಾರಿಗೊಳಿಸಿದೆ.

    ಇದನ್ನೂ ಓದಿ: 50 ಕೆಜಿ ಚೀಲ 7 ಸಾವಿರ ರೂ.ವರೆಗೂ ಅಲೂಗಡ್ಡೆ ಬಿತ್ತನೆ ಬೀಜ ಮಾರಾಟ, ಭೂಮಿ ಹದ ಮಾಡಿಕೊಂಡಿದ್ದ ರೈತರಲ್ಲಿ ದುಗುಡ

    ಉತ್ತರ ಪ್ರದೇಶದಲ್ಲಿ ಬುಧವಾರದಿಂದ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ)ಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಅನುಸಾರ ಇನ್ನು ಆರು ತಿಂಗಳ ಕಾಲ ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ನಿಗಮಗಳಲ್ಲಿ ಯಾವುದೇ ರೀತಿಯ ಮುಷ್ಕರ ಮಾಡುವಂತಿಲ್ಲ. ಒಂದು ವೇಳೆ ಮುಷ್ಕರ ಮಾಡಿದರೆ ಅಂತವರಿಗೆ 1 ಸಾವಿರ ರೂಪಾಯಿ ದಂಡ ಮತ್ತು ಒಂದು ವರ್ಷದವರೆಗಿನ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎಸ್ಮಾ ಜತೆಯಲ್ಲಿ ಲಖನೌ ಜಿಲ್ಲೆಯಲ್ಲಿ ಸಿಆರ್​ಪಿಸಿಯ ಸೆಕ್ಷನ್​ 144 ಅನ್ನು ಜಾರಿಗೊಳಿಸಿರುವುದಾಗಿ ಜಿಲ್ಲಾ ಆಡಳಿತ ತಿಳಿಸಿದೆ.

    ಇದನ್ನೂ ಓದಿ: ಬಕೆಟ್​ ಹಿಡಿಯೋನು ಎಂದವರಿಗೆ ಜಗ್ಗೇಶ್​ ಖಡಕ್​ ಉತ್ತರ

    ರಾಜ್ಯದ ರಾಜ್ಯಪಾಲರಾದ ಆನಂದಿಬೆನ್​ ಪಟೇಲ್​ ಅವರೊಂದಿಗೆ ಚರ್ಚೆ ನಡೆಸಿ, ಅವರ ಅನುಮತಿಯನ್ನು ಪಡೆದ ನಂತರವೇ ಎಸ್ಮಾ ಜಾರಿಗೊಳಿಸಿರುವುದಾಗಿ ತಿಳಿಸಲಾಗಿದೆ. ಲಖನೌನಲ್ಲಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ, ಅನುಮತಿ ಪಡೆದಿರುವ ಕಾರ್ಯಕ್ರಮಗಳನ್ನು ಹೊರೆತುಪಡಿಸಿ ಬೇರಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಮುಷ್ಕರಗಳ ಮೇಲಿನ ನಿಷೇಧವು ಮೇ 2021ರವರೆಗೆ ಇರಲಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    VIDEO: ಉಗ್ರ ಸ್ವರೂಪ ಪಡೀತಿದೆ ದೆಹಲಿ ಚಲೋ: ಪೊಲೀಸರಿಂದ ಅಶ್ರುವಾಯು ಪ್ರಯೋಗ

    ಮಗು ಸತ್ತು ಹೋಯಿತು ಎಂದು ಸುಳ್ಳು ಹೇಳಿದ ಈ ತಂದೆ ಮಾಡಿದ್ದು ಪಾಪದ ಕೆಲಸ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts