More

    VIDEO: ಉಗ್ರ ಸ್ವರೂಪ ಪಡೀತಿದೆ ದೆಹಲಿ ಚಲೋ: ಪೊಲೀಸರಿಂದ ಅಶ್ರುವಾಯು ಪ್ರಯೋಗ

    ಚಂಡೀಗಢ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ನೀತಿ ವಿರೋಧಿಸಿ ನಡೆಸುತ್ತಿರುವ ದೆಹಲಿ ಚಲೋ ಉಗ್ರ ಸ್ವರೂಪ ಪಡೆದುಕೊಂಡಿದೆ. ಪಂಜಾಬ್ ಮೂಲಕ ಹರಿಯಾಣ ಪ್ರವೇಶಿಸಲು ಯತ್ನಿಸಿದ ರೈತರನ್ನು ತಡೆ ಹಿಡಿಯಲು ಮುಂದಾದ ಪೊಲೀಸರ ಮೇಲೆ ರೈತರು ಮುಗಿ ಬಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾ ನಿರತರ ಮೇಲೆ ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಲಾಗಿದೆ.

    ಹರಿಯಾಣ ರೈತರು ಅಂಬಾಲಾ-ಕುರುಕ್ಷೇತ್ರ ಗಡಿ ಸಮೀಪ ತಿಯೋರಿ ಗ್ರಾಮದ ಮೂಲಕ ದೆಹಲಿಯತ್ತ ತೆರಳುತ್ತಿದ್ದಾಗ ದೆಹಲಿ ಪ್ರವೇಶಿಸದಂತೆ ತಡೆ ಹಿಡಿಯಲಾಯಿತು. ಪಂಜಾಬ್ ಮೂಲಕ ಸಹಸ್ರಾರು ಮಂದಿ ರೈತರು ದೆಹಲಿಯತ್ತ ಮುನ್ನುಗ್ಗುವುದನ್ನು ತಡೆಗಟ್ಟುವ ಉದ್ದೇಶದಿಂದ ಹರಿಯಾಣದ ಎಲ್ಲಾ ಗಡಿ ಪ್ರದೇಶಗಳನ್ನು ಬಂದ್ ಮಾಡಲಾಗಿದೆ.

    ಪಂಜಾಬ್-ಹರ್ಯಾಣ ಗಡಿಯ ಶಂಭು ಎಂಬಲ್ಲಿ ರೈತರು ಗುಂಪು ಸೇರಿ ದೆಹಲಿ ಚಲೋ ಆರಂಭಿಸಿ ಪೊಲೀಸ್ ಬ್ಯಾರಿಕೇಡ್ ತೆಗೆದು ನುಗ್ಗಲು ಪ್ರಯತ್ನಿಸುತ್ತಿದ್ದರು. ಆಗ ಹರಿಯಾಣ ಪೊಲೀಸರು ಧ್ವನಿವರ್ಧಕ ಮೂಲಕ ಪ್ರತಿಭಟನಾಕಾರರಿಗೆ ಎಚ್ಚರಿಸುತ್ತಿದ್ದರು.

    ಈ ವೇಳೆ ಹರಿಯಾಣ ಪಂಜಾಬ್ ಶಂಭು ಅಂತಾರಾಜ್ಯ ಗಡಿಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪಂಜಾಬ್ ರೈತರು ಪೊಲೀಸ್ ಬ್ಯಾರಿಕೇಡ್ ಮುರಿದು ಹರಿಯಾಣ ರಾಜ್ಯ ಪ್ರವೇಶಿಸಲು ಮುಂದಾದ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.

    ಈ ಮಧ್ಯೆ ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡುವಂತೆ ದೆಹಲಿಯ ವಿವಿಧ ರೈತ ಸಂಘಟನೆಗಳು ಮಾಡಿಕೊಂಡ ಮನವಿಯನ್ನು ಕರೊನಾ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ತಳ್ಳಿ ಹಾಕಿದ್ದಾರೆ.

    ಕರೊನಾ ಸೋಂಕಿನ ಸಂದರ್ಭದಲ್ಲಿ ಯಾವುದೇ ಸಂಘಟನೆಗಳು ಗುಂಪುಗೂಡಲು ಅವಕಾಶವಿರುವುದಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

    ಮಗು ಸತ್ತು ಹೋಯಿತು ಎಂದು ಸುಳ್ಳು ಹೇಳಿದ ಈ ತಂದೆ ಮಾಡಿದ್ದು ಪಾಪದ ಕೆಲಸ…

    ಮಹಿಳೆಯರನ್ನು ಹೊಗಳುವ ಭರದಲ್ಲಿ ಪ್ರಾಣಿಗೆ ಹೋಲಿಸಿ ಪೇಚಿಗೆ ಸಿಲುಕಿರೋ ಇಸ್ರೇಲ್​ ಪ್ರಧಾನಿ!

    ಲಕ್ಷ್ಮಿ ಹೆಬ್ಬಾಳ್ಕರ್‌ ಇನ್ಮುಂದೆ ಅತ್ತೆ! ಗೋವಾದಲ್ಲಿ ಬೀಡುಬಿಟ್ಟಿರೋ ಕೈ ಮುಖಂಡರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts