More

    ಬೆನ್ನುಮೂಳೆಯ ಆರೋಗ್ಯಕ್ಕೆ ಯೋಗ

    ನನಗೆ ಡಿಸ್ಕ್ (ಹರ್ನಿಯೇಟೆಡ್) ಸಮಸ್ಯೆ ಇದೆ. ಯೋಗದ ಪರಿಹಾರ ತಿಳಿಸಿ.

    | ವನಿತಾ 34 ವರ್ಷ, ಕಾಸರಗೋಡು

    ಬೆನ್ನುಮೂಳೆಯ ಆರೋಗ್ಯಕ್ಕೆ ಯೋಗಹರ್ನಿಯೇಟೆಡ್ ಡಿಸ್ಕ್ ತುಂಬ ನೋವಿನ ಸ್ಥಿತಿಯಾಗಿದೆ. ಡಿಸ್ಕ್​ನ ಪಕ್ಕದ ನರಗಳಿಗೆ ಒತ್ತಡವನ್ನುಂಟುಮಾಡುತ್ತದೆ. ನೋವಿನ ಸ್ಥಿತಿಯಿಂದ ಬಳಲುತ್ತಿರುವಾಗ ಕಾಲುಗಳು ಮತ್ತು ಬೆನ್ನು ಎರಡರ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ವೈದ್ಯರು ಸೂಚಿಸುವ ಹಲವಾರು ಚಿಕಿತ್ಸಾ ಆಯ್ಕೆಗಳಿವೆ. ಶಸ್ತ್ರಚಿಕಿತ್ಸೆಯಿಲ್ಲದ ಕಾರ್ಯವಿಧಾನಗಳನ್ನು ಮೊದಲು ಪ್ರಯತ್ನಿಸಲಾಗುತ್ತದೆ. ನೋವು ನಿವಾರಣ ಔಷಧ ಮತ್ತು ಯೋಗ ಭಂಗಿಗಳು ನೋವಿನಿಂದ ಗಮನಾರ್ಹ ಪರಿಹಾರವನ್ನು ನೀಡುತ್ತದೆ. (ವೈದ್ಯರು, ಯೋಗಚಿಕಿತ್ಸಕರು ಸೂಚಿಸಿದ) ಶಸ್ತ್ರಚಿಕಿತ್ಸೆಯನ್ನು ಕೊನೆಯ ಆಯ್ಕೆಯಾಗಿ ಪ್ರಯತ್ನಿಸಲಾಗುತ್ತದೆ. ಮೂಳೆಗಳ ವಿಸ್ತರಣೆಗೆ ಒತ್ತು ನೀಡುವ ಸರಳ ಚಲನೆಗಳಿಂದ ಹೆಚ್ಚು ಪ್ರಯೋಜನ ಪಡೆಯಬಹುದು ಎಂದು (ಯೋಗ ಪ್ರದೀಪಿಕಾ – ಬಿ.ಕೆ.ಎಸ್. ಅಯ್ಯಂಗಾರ್) ಅಧ್ಯಯನಗಳು ಸೂಚಿಸುತ್ತವೆ. ಯೋಗವು ಹಿಂಭಾಗದ ಅಸ್ಥಿರಜ್ಜುಗಳನ್ನು ಬಲಪಡಿಸಲು ಸಹಾಯಮಾಡುತ್ತದೆ.

    ಬೆನ್ನನ್ನು ಬಲಪಡಿಸುವ ಆಸನಗಳು: ಕಟಿ ಚಕ್ರಾಸನ, ಉತ್ಥಿತ ಏಕಪಾದಾಸನ, ಸೇತುಬಂಧ, ಮಕರಾಸನ, ಅರ್ಧ ಉಷ್ಟ್ರಾಸನ, ಮಾರ್ಜಾಲಾಸನ, ವಕ್ರಾಸನ, ಸರಳ ಭುಜಂಗಾಸನ, ಶಲಭಾಸನ, ಶಲಭಾಸನ ವಿನ್ಯಾಸ, ತಿರುಚುವಿಕೆಯ ಆಯ್ದ ವ್ಯಾಯಾಮಗಳು ಹಾಗೂ ಶವಾಸನ ಸಹಕಾರಿಯಾಗುತ್ತದೆ. ಮಕರಾಸನ, ಏಕಪಾದ ಶಲಭಾಸನ ಇತ್ಯಾದಿ ಆಸನಗಳು ಹಾನಿಗೊಳಗಾದ ನರಬೇರುಗಳ ಮೇಲಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತವೆ. ಆರಂಭದಲ್ಲಿ ಯೋಗ ಚಿಕಿತ್ಸಕರ ಸಮ್ಮುಖದಲ್ಲಿ ತೀರ ಸರಳ ಆಸನಗಳನ್ನು ಅಭ್ಯಾಸ ಮಾಡಿ. ಬೆನ್ನುಮೂಳೆಯ ಸುತ್ತಮುತ್ತಲಿನ ಮಾಂಸಖಂಡಗಳಿಗೆ ಒತ್ತಡ ನೀಡುವ ಕೆಲಸಗಳನ್ನು ಮಾಡಬೇಡಿ.

    ಇದನ್ನೂ ಓದಿ   ಸಾಂಕ್ರಾಮಿಕ ರೋಗಗಳ ಭೀತಿ

    ನನಗೆ ಯೋಗ ಕಲಿಯಬೇಕೆಂದಿದೆ. ಎಲ್ಲ ಆಸನಗಳನ್ನು ಹಂತಹಂತವಾಗಿ ಕಲಿಯಲು ಬಯಸುತ್ತೇನೆ. ಹೇಗೆ ಯಾವ ರೀತಿ ಕಲಿಯಬಹುದೆಂದು ತಿಳಿಸಿ.

    | ಶರಣಪ್ಪ ಕೊಪ್ಪಳ

    ಯೋಗವನ್ನು ಗುರುಮುಖೇನವೇ ಶಿಸ್ತುಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಕಲಿಯಬೇಕು. ಗುರುಗಳ ಸಮ್ಮುಖದಲ್ಲಿ ಕನಿಷ್ಠ ಆರು ತಿಂಗಳು ಅಭ್ಯಾಸ ಮಾಡಿ ಹಾಗೂ ಯೋಗದ ಬಗ್ಗೆಯ ಮಾಹಿತಿ ಅರಿತುಕೊಳ್ಳಿ. ಯೋಗ ಸಾಧನೆಯ ಮೂರನೆಯ ಮೆಟ್ಟಿಲು ಆಸನ. ‘ಸ್ಥಿರಂ, ಸುಖಂ, ಆಸನಂ’ ಅಂದರೆ ಸ್ಥಿರವಾದ, ಸುಖಕರವಾದ, ಶರೀರದ ವಿವಿಧ ಭಂಗಿಗಳು ಯಾ ಸ್ಥಿತಿಗಳು ಯೋಗಾಸನಗಳೆನಿಸಿವೆ. ಇಲ್ಲಿ ದೇಹವನ್ನು ಶಿಸ್ತುಬದ್ಧವಾಗಿ, ಕ್ರಮವತ್ತಾಗಿ, ನಿಧಾನವಾಗಿ, ಉಸಿರಿನ ಗತಿಯೊಂದಿಗೆ ಬೇಕಾದ ರೀತಿಯಲ್ಲಿ ಬಾಗಿಸುವುದು, ತಿರುಗಿಸುವುದು, ಚಲಿಸುವಿಕೆ ಇತ್ಯಾದಿ ಮಾಡುವುದರಿಂದ ದೇಹದ ಒಳಗಿನ ಅಂಗಗಳಿಗೂ ವಿಶ್ರಾಂತಿ ದೊರಕಿ ರಕ್ತಪರಿಚಲನೆ, ಪಚನಕ್ರಿಯೆ ಇತ್ಯಾದಿ ಸಮರ್ಪಕವಾಗಿ ನಡೆಯುವುದಲ್ಲದೆ ನರಮಂಡಲವೂ ಮಾಂಸಖಂಡಗಳೂ ಪೆಡಸಾಗಿರದೆ ಶಕ್ತಿಯುತವಾಗುವವು ಮತ್ತು ಚೈತನ್ಯಭರಿತವಾಗುವುವು. ಆಸನವನ್ನು ಅಭ್ಯಾಸ ಮಾಡಲು ಸರಿಯಾದ ಸಿದ್ಧತೆಯೊಂದಿಗೆ ಸಮರ್ಪಕ ವಿಧಾನದಲ್ಲಿ ಮಾಡಿದಾಗ ಹೆಚ್ಚು ಪ್ರಯೋಜನ ದೊರಕುತ್ತದೆ.

    ಡ್ರಾಪ್ ಕೊಡುವ ನೆಪದಲ್ಲಿ ಚಾಲಕನಿಂದ ಲೈಂಗಿಕ ಕಿರುಕುಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts