More

    ಆರೋಗ್ಯಕ್ಕೆ ಪೂರಕ ದಿನಚರಿ ಇರಲಿ

    ಕಾರವಾರ: ಪತಂಜಲಿ ಯೋಗ ಸಮಿತಿಯಿಂದ ನಗರದ ಹಲವು ಕಡೆಗೆ ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಳನ್ನು ಆಚರಿಸಲಾಯಿತು. ಸಾಮೂಹಿಕ ಯೋಗ ದಿನಾಚರಣೆ ನಡೆಸದೇ ಅಲ್ಲಲ್ಲಿ ನಡೆಯುವ ಯೋಗ ತರಗತಿಗಳಲ್ಲೇ ಸಾಧಕರು, ವಿದ್ಯಾರ್ಥಿಗಳು ಯೋಗ ದಿನಾಚರಣೆಯ ಈ ವರ್ಷದ ಶಿಷ್ಟಾಚಾರದಂತೆ ಆಸನಗಳನ್ನು ಮಾಡಿದರು. ಶ್ರೀನಾಥ ಜಿ., ಪ್ರಶಾಂತ ರೇವಣಕರ್, ವೆಂಕಟೇಶ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲ ಕಡೆ ನಡೆಯುವ ಯೋಗ ದಿನದ ನೇರ ಪ್ರಸಾರವನ್ನು ಜಾಲತಾಣದ ಮೂಲಕ ನಡೆಸಲಾಯಿತು.

    ಕುಮಟಾ: ಅಂತರಾಷ್ಟಿ್ರಯ ಯೋಗ ದಿನಾಚರಣೆ ಸಮಿತಿ, ಪತಂಜಲಿ ಯೋಗ ಸಮಿತಿ, ಸ್ವಾಭಿಮಾನ ಭಾರತ ಟ್ರಸ್ಟ್, ಆಯುಷ್ ಇಲಾಖೆ, ಆರ್ಟ್ ಆಫ್ ಲಿವಿಂಗ್ ಆಶ್ರಯದಲ್ಲಿ ಪಟ್ಟಣದ ಗಿಬ್ ಪ್ರೌಢಶಾಲೆ ರಾಜೇಂದ್ರ ಪ್ರಸಾದ ಸಭಾಭವನದಲ್ಲಿ ಭಾನುವಾರ ಯೋಗ ದಿನ ಆಚರಿಸಲಾಯಿತು.

    ಭಾರತಮಾತೆ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ತಹಸೀಲ್ದಾರ್ ಮೇಘರಾಜ ನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕರೊನಾಗೆ ಅನಗತ್ಯ ಹೆದರುವ ಅಗತ್ಯವಿಲ್ಲ. ಆರೋಗ್ಯಕ್ಕೆ ಪೂರಕ ದಿನಚರಿ ಎಲ್ಲರದಾಗಲಿ ಎಂದರು.

    ಡಾ. ಜಿ.ಜಿ.ಹೆಗಡೆ ಮಾತನಾಡಿ, ಸಹಜ ಆಹಾರ ಹಾಗೂ ಯೋಗದ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದರು.

    ಪತಂಜಲಿಯ ಯೋಗಗುರು ನಾಗೇಂದ್ರ ಭಟ್ ವಿವಿಧ ಯೋಗಾಸನ ಹಾಗೂ ಅದರ ಮಹತ್ವ ತಿಳಿಸಿ, ಕರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಯೋಗಾಸನಗಳಿಂದಾಗುವ ಪ್ರಯೋಜನ ತಿಳಿಸಿದರು.

    ಸಿಪಿಐ ಪರಮೇಶ್ವರ ಗುನಗಾ, ಯೋಗ ಸಮಿತಿಯ ಅಧ್ಯಕ್ಷ ಎಂ.ಟಿ.ಗೌಡ, ಹನುಮಂತ ಶಾನಭಾಗ, ಅಶೋಕ ಬಾಳೇರಿ, ಜಿ.ಎಸ್.ಹೆಗಡೆ, ಡಾ. ಸುರೇಶ ಹೆಗಡೆ, ವೆಂಕಟೇಶ ನಾಯಕ, ದಿನೇಶ ವೆರ್ಣೆಕರ ಇನ್ನಿತರರು ಇದ್ದರು. ಯೋಗ ಸಮಿತಿ ಕಾರ್ಯದರ್ಶಿ ಪ್ರೊ. ಆನಂದ ನಾಯ್ಕ ನಿರೂಪಿಸಿ, ವಂದಿಸಿದರು. ಕರೊನಾ ಪ್ರಯುಕ್ತ ಪರಸ್ಪರ ಅಂತರದೊಂದಿಗೆ ನಿಗದಿತ 20 ಮಂದಿ ಯೋಗ ಸಮಿತಿ ಸದಸ್ಯರು ಯೋಗದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸ್ವರ್ಣವಲ್ಲೀ ಶ್ರೀಗಳಿಂದ ಸೂರ್ಯ ನಮಸ್ಕಾರ

    ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಅರುಣ ಪ್ರಶ್ನೆಯ ಮಂತ್ರೋಚ್ಛಾರಣೆಯ ಮೂಲಕ ಸೂರ್ಯನಮಸ್ಕಾರ ಮಾಡಲಾಯಿತು. ವಿಶ್ವ ಯೋಗ ದಿನಾಚರಣೆಯ ದಿನದಂದು ಮಹಾಮಾರಿ ಕರೊನಾ ನಿವಾರಣೆಗಾಗಿ ಸಂಕಲ್ಪಿಸಿ ಸಕಲ ಜನರ ಒಳಿತನ್ನು ಬಯಸಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆದೇಶಾನುಸಾರ ಮಠದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಶ್ರೀಗಳು ಸೂರ್ಯನಮಸ್ಕಾರ ಮಾಡಿದರು. ವೇದಮೂರ್ತಿ ನಾಗರಾಜ ಭಟ್ಟ ಕೋಣೆಮನೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ವಿದ್ವಾನ್ ನರಸಿಂಹ ಭಟ್ಟ ತಾರಿಮಕ್ಕಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts