More

    ಕಲಿತ ವಿದ್ಯೆ ನೆನಪಿಟ್ಟುಕೊಳ್ಳೋದಕ್ಕೂ ಯೋಗದಲ್ಲಿದೆ ಮದ್ದು!

    ಕಲಿತ ವಿದ್ಯೆ ನೆನಪಿಟ್ಟುಕೊಳ್ಳೋದಕ್ಕೂ ಯೋಗದಲ್ಲಿದೆ ಮದ್ದು!

    ಚಿಕ್ಕ ಮಕ್ಕಳಿಗೆ ಯಾವ ಯೋಗವನ್ನು ಅಭ್ಯಾಸ ಮಾಡಬಹುದು?
    | ರೇವತಿ 26 ವರ್ಷ, ರಾಯಚೂರು
    ಚಿಕ್ಕ ವಯಸ್ಸಿನಲ್ಲಿಯೇ (ಸುಮಾರು ಏಳು ವರ್ಷಗಳ ನಂತರ) ಮಕ್ಕಳನ್ನು ಯೋಗಕ್ಕೆ ಪರಿಚಯಿಸುವುದು ಉತ್ತಮ. ಇದು ಆರೋಗ್ಯಕರ ಜೀವನಶೈಲಿಯ ಅಭ್ಯಾಸವನ್ನು ಕಲಿಯಲು ಸಹಾಯ ಮಾಡುತ್ತದೆ ಮತ್ತು ಸೂಕ್ತ ಭವಿಷ್ಯಕ್ಕಾಗಿ ಅಡಿಪಾಯವನ್ನು ಹಾಕುತ್ತದೆ. ಆರಂಭದಲ್ಲಿ ಮಕ್ಕಳಿಗೆ ಆಟದ ರೂಪದಲ್ಲಿ ಯೋಗವನ್ನು ಕಲಿಸಿ.

    ಸೂಚಿತ ಆಸನಗಳು: ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧಚಕ್ರಾಸನ, ಉತ್ಥಿತ ಪದ್ಮಾಸನ, ವಜ್ರಾಸನ, ಶಶಾಂಕಾಸನ, ಉಷ್ಟ್ರಾಸನ, ಉತ್ಥಿತ ಏಕಪಾದಾಸನ, ಮಕರಾಸನ, ಭುಜಂಗಾಸನ, ಗೋಮುಖಾಸನ, ಧನುರಾಸನ, ಚಕ್ರಾಸನ ಇತ್ಯಾದಿಗಳು. ಸಾಮಾನ್ಯ ಉಸಿರಾಟವನ್ನು ಗಮನಿಸಿಕೊಂಡು ಒಂದರಿಂದ ಐವತ್ತರ ತನಕ ಸಾಮಾನ್ಯ ಉಸಿರನ್ನು ಲೆಕ್ಕಹಾಕುವ ಸರಳ ಧ್ಯಾನವನ್ನು ಅಭ್ಯಾಸ ಮಾಡಿದರೆ ಬಲು ಬೇಗನೆ ಧ್ಯಾನಕ್ಕೆ ಹೋಗಲು ಸುಲಭವಾಗುತ್ತದೆ.

    ಅಧ್ಯಯನ ಮಾಡಿದ್ದನ್ನು ನೆನಪಿಟ್ಟುಕೊಳ್ಳಲು, ಏಕಾಗ್ರತೆಯನ್ನು ಹೆಚ್ಚಿಸಲು ನೆರವಾಗುವ ಯೋಗಾಸನ ಮತ್ತು ಮುದ್ರೆಗಳನ್ನು ತಿಳಿಸಿ.
    | ಆನಂದ, 23 ವರ್ಷ, ಬೆಂಗಳೂರು

    ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳಿಗೆ ಸಿದ್ಧಪಡಿಸುವಾಗ ವಿದ್ಯಾರ್ಥಿಗಳು ಎದುರಿಸುತ್ತಿರುವ ಅತ್ಯಂತ ಸಾಮಾನ್ಯವಾದ ಸಮಸ್ಯೆಗಳೆಂದರೆ, ಅಧ್ಯಯನ ಮಾಡಿದ್ದನ್ನು ನೆನಪಿಟ್ಟುಕೊಳ್ಳಲು ಮತ್ತು ಉಳಿಸಿಕೊಳ್ಳಲು ಕಷ್ಟವಾಗುವುದು. ನಿದ್ರೆಯ ಕೊರತೆ, ಕಡಿಮೆ ಏಕಾಗ್ರತೆ, ದಣಿವು ಸೇರಿದಂತೆ ಹಲವು ಕಾರಣಗಳಿಂದ ಈ ಸಮಸ್ಯೆ ಎದುರಾಗುತ್ತದೆ. ಆಧುನಿಕ ಜೀವನಶೈಲಿ ಮತ್ತು ಕೆಲಸದ ವೇಳಾಪಟ್ಟಿಗಳ ಪರಿಣಾಮವಾಗಿ ಹೆಚ್ಚುತ್ತಿರುವ ಒತ್ತಡ ಮತ್ತು ಆತಂಕದಿಂದಾಗಿ ಏಕಾಗ್ರತೆಗೆ ಭಂಗವುಂಟಾಗುತ್ತದೆ. ಯೋಗವು ಏಕಾಗ್ರತೆಯ ಸುಧಾರಣೆಗೆ ಸಹಕಾರಿಯಾಗುತ್ತದೆ. ನಮ್ಮ ಮನಸ್ಸಿಗೆ ವಿಶ್ರಾಂತಿ ನೀಡುವುದರ ಮೂಲಕ, ರಕ್ತದ ಹರಿವನ್ನು ಸುಧಾರಿಸುವ ಮೂಲಕ ಮತ್ತು ಸಮತೋಲನವನ್ನು ಹೆಚ್ಚಿಸುವ ಮೂಲಕ ನಮ್ಮ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    ಸೂಚಿತ ಆಸನಗಳು: ತಾಡಾಸನವು ಉಸಿರಾಟವನ್ನು ಸಮತೋಲನಗೊಳಿಸಿ, ನಿಲುವನ್ನು ಸರಿಪಡಿಸಿ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವೃಕ್ಷಾಸನವು ನರಮಂಡಲವನ್ನು ಶಾಂತಗೊಳಿಸಲು ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪದ್ಮಾಸನ, ವಜ್ರಾಸನ, ಶಶಾಂಕಾಸನ, ಅಧೋಮುಖ ಶ್ವಾನಾಸನಗಳು ಏಕಾಗ್ರತೆಗೆ ಸಹಕಾರಿ. ವಿಶೇಷ ಆಸನವಾದ ಬಕಾಸನವು ಮನಸ್ಸು-ದೇಹದ ಸಮನ್ವಯವನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಉತ್ತಮ ಏಕಾಗ್ರತೆಗಾಗಿ ಪ್ರತಿದಿನ ಶವಾಸನವನ್ನು ಅಭ್ಯಾಸ ಮಾಡಿ. ಮುಂಜಾನೆ ಹಾಗೂ ಸಂಜೆ ತಲಾ ಹತ್ತು ನಿಮಿಷ ನಾಡೀಶುದ್ಧಿ ಪ್ರಾಣಾಯಾಮ, ಧ್ಯಾನ ಮಾಡಿ.

    ಮುದ್ರೆಗಳು: ‘ಓಂ ಸರಸ್ವತ್ಯೈ ನಮಃ’ ಎಂದು 108 ಬಾರಿ ಪಠಿಸಿ ಅಥವಾ ಇಷ್ಟದೇವರನ್ನು ನೆನೆಸಿ ಮೂವತ್ತು ನಿಮಿಷ ಚಿನ್ಮುದ್ರೆ, ಹತ್ತು ನಿಮಿಷ ಹಾಕಿನಿ ಮುದ್ರೆ ಹಾಗೂ ಹತ್ತು ನಿಮಿಷ ಪ್ರಾಣ ಮುದ್ರೆ ಅಭ್ಯಾಸ ಮಾಡಿ.

    ಬಾಡಿಗೆ ಪಾವತಿ ವಿಚಾರ: ಕೇಂದ್ರ ಸಚಿವ ಪೋಖ್ರಿಯಾಲ್​ ವಿರುದ್ಧದ ನ್ಯಾಯಾಂಗ ನಿಂದನೆಗೆ ಸುಪ್ರೀಂ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts