More

    ಕರೊನಾ ವಿರುದ್ಧ ಹೋರಾಡಲು ಯೋಗ ಪ್ರಮುಖ ಅಸ್ತ್ರ: ಪ್ರಧಾನಿ ಮೋದಿ

    ನವದೆಹಲಿ: ಇಂದು 6ನೇ ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾಮಾರಿ ಕರೊನಾ ವೈರಸ್​ ಬಿಕ್ಕಟ್ಟಿನ ಸಮಯದಲ್ಲಿ ಯೋಗದ ಪ್ರಾಮುಖ್ಯತೆ ಹೆಚ್ಚಿದೆ ಎಂದು ತಿಳಿಸಿದರು.

    ಪ್ರಾರಂಭದಲ್ಲಿ ಯೋಗ ದಿನದ ಶುಭಕೋರಿದ ಪ್ರಧಾನಿ ಮೋದಿ, ಕರೊನಾ ಸಂದರ್ಭದಲ್ಲಿ ಯೋಗದ ಪ್ರಾಮುಖ್ಯತೆ ಹೆಚ್ಚಿದೆ ದೇಹದ ಸದೃಢತೆಗೆ ಯೋಗವೇ ಪರಿಹಾರ. ಯೋಗದಿಂದ ದೇಹ ಹಾಗೂ ಮಾನಸಿಕ ಶಕ್ತಿ ಹೆಚ್ಚುತ್ತದೆ. ಕರೊನಾ ವೈರಸ್​ ಶ್ವಾಸಕೋಸದ ಮೇಲೆ ದಾಳಿ ಮಾಡುತ್ತದೆ. ಹೀಗಾಗಿ ಪ್ರತಿನಿತ್ಯ ಪ್ರಾಣಾಯಾಮ ಮಾಡಿ. ಪ್ರಾಣಾಯಾಮದಿಂದ ಉಸಿರಾಟದ ತೊಂದರೆ ನಿವಾರಿಸಬಹುದು ಎಂದು ಕರೆ ನೀಡಿದರು. ಇದನ್ನೂ ಓದಿ: ವಾರ ಭವಿಷ್ಯ: ಈ ರಾಶಿಯವರಿಗೆ ಗ್ರಹಣ ಉತ್ಸಾಹ, ಸಂತೋಷ, ಧನಾಭಿವೃದ್ಧಿ ತರುವುದು

    ಇಂದು ಜಗತ್ತಿಗೆ ಯೋಗದ ಅವಶ್ಯಕತೆ ಇದೆ. ರೋಗ ನಿರೋಧಕ ಶಕ್ತಿ ಹೆಚ್ಚಿಕೊಳ್ಳಲು ಯೋಗದಲ್ಲಿದೆ ಹಲವು ಆಸನಗಳಿವೆ. ಯೋಗದಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ. ದೇಹದಲ್ಲಿ ಧನಾತ್ಮಕ ಚಿಂತನೆ ಹೆಚ್ಚುತ್ತದೆ ಎಂದು ಆತ್ಮ ವಿಶ್ವಾಸ ಮೂಡಿಸಿದರು.

    ಕರೊನಾ ವಿರುದ್ಧ ಹೋರಾಡಲು ಯೋಗ ಒಂದು ಪ್ರಮುಖ ಅಸ್ತ್ರವಾಗಿದೆ. ಸಾಮೂಹಿಕ ಕಾರ್ಯಕ್ರಮದಿಂದ ದೂರವಿದ್ದು ಮನೆಯಲ್ಲೇ ಯೋಗ ಮಾಡಿ. ಮನೆಯಲ್ಲೇ ಉಳಿದುಕೊಂಡು ಕುಟುಂಬದೊಂದಿಗೆ ಯೋಗ ಮಾಡಿ. ಆದರೆ, ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ ಎಂದು ತಿಳಿಸಿದರು.

    ನಮ್ಮ ರೋಗನಿರೋಧಕ ಶಕ್ತಿ ಪ್ರಬಲವಾಗಿದ್ದರೆ ಅದು ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಚಯಾಪಚಯವನ್ನು ಸುಧಾರಿಸುವ ಯೋಗಾಭ್ಯಾಸಗಳಿವೆ ಅದನ್ನು ಅಭ್ಯಾಸ ಮಾಡಿ ಎಂದು ಹೇಳಿದರು. ಇದನ್ನೂ ಓದಿ: ಇಂದು ಅಂತಾರಾಷ್ಟ್ರೀಯ ಯೋಗ ದಿನ: ಯೋಗದಿಂದ ಆರೋಗ್ಯ, ಸಾಮರಸ್ಯ, ಶಾಂತಿ

    ಯೋಗವು ಏಕತೆಯ ಶಕ್ತಿಯಾಗಿ ಹೊರಹೊಮ್ಮಿದೆ ಮತ್ತು ಮಾನವೀಯತೆಯ ಬಂಧಗಳನ್ನು ಆಳವಾಗಿಸುತ್ತದೆ. ಯೋಗ ಎಂದಿಗೂ ತಾರತಮ್ಯ ಮಾಡುವುದಿಲ್ಲ. ಇದು ಜನಾಂಗ, ಬಣ್ಣ, ಲಿಂಗ, ನಂಬಿಕೆ ಮತ್ತು ಮೂಲವನ್ನು ಮೀರಿದೆ ಎಂದು ಮೋದಿ ತಿಳಿಸಿದರು. (ಏಜೆನ್ಸೀಸ್​)

    ಇಂದು ಅಂತಾರಾಷ್ಟ್ರೀಯ ಯೋಗದಿನ: ಆನ್​ಲೈನ್​ನಲ್ಲಿ ಯೋಗ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts