More

    ವಾರ ಭವಿಷ್ಯ: ಈ ರಾಶಿಯವರಿಗೆ ಗ್ರಹಣ ಉತ್ಸಾಹ, ಸಂತೋಷ, ಧನಾಭಿವೃದ್ಧಿ ತರುವುದು

    21-06-2020ರಿಂದ 27-06-2020

    ಮೇಷ: ಸೂರ್ಯನು ಮಿಥುನ ರಾಶಿಯಲ್ಲಿ ತನ್ನ ಮಿತ್ರನ ಮನೆಯಲ್ಲಿ ಸೇರಿ ರಾಹು ಸಂಯುಕ್ತನಾಗಿರುತ್ತಾನೆ. ನಿಂತುಹೋಗಿರುವ ಕಾರ್ಯಗಳನ್ನು ಸಾಧಿಸಬೇಕಾದ ಸಮಯ. ಮೇಷಾಧಿಪತಿ ಕುಜನು ದ್ವಾದಶದಲ್ಲಿದ್ದು, ಅರ್ಥಿಕ ಸ್ಥಿತಿ ಮಂದಗತಿಯಲ್ಲಿ ಸಾಗುತ್ತದೆ. 21 ಮತ್ತು 22ನೇ ತಾರೀಕು ನಿಮ್ಮ ಕಾರ್ಯಗಳನ್ನು ಬಹಳವಾಗಿ ಯೋಚಿಸಿ ಮಾಡಿ. ಗ್ರಹಣದಿಂದ ಆರಂಭವಾಗುವ ವಾರ ಸೂರ್ಯನ ಪ್ರಾರ್ಥನೆ ಅತ್ಯಗತ್ಯ. ಸೂರ್ಯಗ್ರಹಣ ನಿಮಗೆ ಶುಭ ತರುವುದರಲ್ಲಿ ಸಂದೇಹವಿಲ್ಲ.

    ವೃಷಭ: ಶುಕ್ರನು ಸ್ವಕ್ಷೇತ್ರದಲ್ಲಿ ಇದ್ದು, ಕೆಲಸ ಕಾರ್ಯಗಳನ್ನು ಶುಭದಿಂದ ನಡೆಸುವನು. ದ್ವಿತೀಯದಲ್ಲಿ ರಾಹು-ಬುಧರು ಸ್ವಲ್ಪ ಮಟ್ಟಿಗೆ ಕೆಲಸ ಮಾಡಿದ ತೃಪ್ತಿಯನ್ನು ತರುವರು. ‘ಅನ್ಯತಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ’. ದುರ್ಗೆ, ಗಣಪತಿ ಹಾಗೂ ಗುರುವಿನ ಉಪಾಸನೆಯಿಂದ ಒಳ್ಳೆಯ ಫಲಗಳನ್ನು ಪಡೆಯುವಿರಿ. ಗ್ರಹಣ ಕಾಲದಲ್ಲಿ ಮಿಶ್ರಫಲವಿರುವುದರಿಂದ ಎಲ್ಲಿಗೂ ಹೋಗದಿರಿ. ಇಷ್ಟದೇವರನ್ನು ಪೂಜಿಸಿ-ಆರಾಧಿಸಿ.

    ಮಿಥುನ: ಕಂಕಣ ಸೂರ್ಯಗ್ರಹಣವು ಮಿಥುನ ರಾಶಿಯಲ್ಲಿ ಸಂಭವಿಸುವುದರಿಂದ ಎಷ್ಟು ಎಚ್ಚರವಿದ್ದರೂ ಸಾಲದು. ಈ ಗ್ರಹಣದಿಂದ ಉಂಟಾಗುವ ಅಗೋಚರ ಫಲವನ್ನು ತಡೆಯಲು ನಿಮ್ಮ ದೃಢವಾದ ಗುರುಭಕ್ತಿ ಹಾಗೂ ಶ್ರೀಮನ್ನಾರಾಯಣನಿಗೆ ಸಲ್ಲಿಸುವ ಪೂಜೆ ಕೈಗೂಡುತ್ತದೆ. ಶ್ರೀರಾಮನು ಪುನರ್ವಸು ನಕ್ಷತ್ರ- ಮಿಥುನ ರಾಶಿಯಲ್ಲಿ ಜನಿಸಿದವನು. ‘ಓಂ ಶ್ರೀಂ ರಾಮ ರಾಮ ರಾಮನಮಃ’ ಮಂತ್ರವನ್ನು ಪಠಿಸಿ. ಶುಭವಾಗಲಿ.

    ಕಟಕ: ಮಿಥುನ ರಾಶಿಯಲ್ಲಿ ಸಂಭವಿಸುವ ಗ್ರಹಣವು ನಿಮ್ಮನ್ನು ಬಾಧಿಸದಿದ್ದರೂ ರಾಶಿಗೆ ಅಂತರವು ಕಡಿಮೆಯಿರುವುದರಿಂದ, ನೀವು ತ್ರಯಂಬಕೇಶ್ವರನನ್ನು ಪೂಜಿಸಿ ಮನಸಾ ಭೀಮಾಶಂಕರನನ್ನು ಆರಾಧಿಸಿ. ಛಲವಿರಲಿ. ಅಚಲವಾದ ಭಕ್ತಿ ನಿಮ್ಮನ್ನು ದಡ ಸೇರಿಸುತ್ತದೆ. ಸೂರ್ಯಾಷ್ಟೋತ್ತರವನ್ನು ಪಠಿಸಿ. ಇಡಗುಂಜಿ ಗಣೇಶನನ್ನು ಪ್ರಾರ್ಥಿಸಿ. ಆರೋಗ್ಯವನ್ನು ಕಾಪಾಡಿಕೊಳ್ಳಿ.

    ಸಿಂಹ: ಸೂರ್ಯಗ್ರಹಣವು ಮಿಥುನ ರಾಶಿಯಲ್ಲಿ ಸಂಭವಿಸಿ, ರಾಶ್ಯಾಧಿಪತಿಯು ರಾಹು ಸಂಯುಕ್ತನಾಗಿರುತ್ತಾನೆ. ಸಿಂಹದಂತೆ ಘರ್ಜಿಸಿ, ಒಳ್ಳೆಯವರನ್ನು ನೆನೆಸಿ, ಒಳ್ಳೆಯದನ್ನೇ ಮಾಡಿ. ಗ್ರಹಣ ಅತ್ಯಂತ ಶುಭಫಲವನ್ನು, ಉತ್ಸಾಹವನ್ನು, ಸಂತೋಷವನ್ನು, ಧನಾಭಿವೃದ್ಧಿ ಮಾಡುವುದರಲ್ಲಿ ಸಂದೇಹವಿಲ್ಲ. ರಾಶ್ಯಾಧಿಪತಿ ರವಿಯನ್ನು ಬಿಟ್ಟರೆ ಕೆಟ್ಟಿರಿ. ಸೂರ್ಯ ಪ್ರಾರ್ಥನೆ ‘ಓಂ ನಮೋ ಭಗವತೇ ವಾಸುದೇವಾಯ’ ಮಂತ್ರವನ್ನು ಗ್ರಹಣ ಕಾಲದಲ್ಲಿ ಜಪಿಸಿರಿ. ಶುಭದ ನಿರೀಕ್ಷೆಯಿರಲಿ.

    ಕನ್ಯಾ: ಗ್ರಹಣದ ನಂತರ ಕಾಲದಲ್ಲಿ ಗುರುವು ಸ್ವಕ್ಷೇತ್ರಕ್ಕೆ ಬರುವುದರಿಂದ ಶುಭಫಲಕ್ಕೆ ಸ್ವಾಗತಿಸಿ, ಪಂಚಮ ಶನಿಯ ಪ್ರಭಾವವು, ತೀಕ್ಷ್ಣವೂ, ತಾಪವೂ ಇರುತ್ತದೆ. ಶನಿಯ ಅಷ್ಟೋತ್ತರ ಪಠಿಸಿ, ಮಾತೃವಂದನೆ ಮರೆಯದಿರಿ. ಜಗದ್ಗುರುಗಳಿಂದ ಪೂಜಿತನಾದ ಶೃಂಗೇರಿಯ ತೋರಣ ಗಣಪತಿಯನ್ನು ಆರಾಧಿಸಿ. ಸಂಯಮ, ಸಂತೋಷವಿರುತ್ತದೆ.

    ತುಲಾ: ದೇವರ ಅಪ್ಪಣೆ ಇಲ್ಲದೆ ಗಿಡ-ಮರಗಳ ಎಲೆಗಳು ಕೂಡ ಅಲ್ಲಾಡುವುದಿಲ್ಲ. ನಿಮ್ಮ ದೈವಭಕ್ತಿ ಭಗವಂತನಿಗೆ ಮುಟ್ಟಿ ನಿಧಾನವಾದ ಕೆಲಸ ಕಾರ್ಯಗಳು, ನಿಮ್ಮ ಆತ್ಮೀಯರೊಂದಿಗಿನ ಸಂಬಂಧಗಳು, ಕೆಲಸಗಳಲ್ಲಿ ಪ್ರಗತಿ ಸಂತೋಷ ತರಲಿದೆ. ರಾಶ್ಯಾಧಿಪತಿ ಶುಕ್ರನಾದ್ದರಿಂದ ತಪ್ಪದೇ ದುರ್ಗೆಯನ್ನು ಪ್ರಾರ್ಥಿಸಿ. ಶೃಂಗೇರಿ ಶಾರದೆಯನ್ನು ಮನಸಾರೆ ಭಜಿಸಿ. ಪೂಜಿಸಿ.

    ವೃಶ್ಚಿಕ: ವೃಶ್ಚಿಕದ ಅಧಿಪತಿಯು ಗುರುವಿನ ಮನೆಯಲ್ಲಿದ್ದು (ಪಂಚಮ ಸ್ಥಾನ) ಗ್ರಹಣ ಕಾಲದಲ್ಲಿ ಆಗುವ ಕೆಲವು ಏರುಪೇರುಗಳಿಂದ ದೈವವು ನಿಮ್ಮನ್ನು ಪರೀಕ್ಷಿಸಬಹುದು. ನಿರಾಸೆ ಬೇಡ. ಆಶಾದಾಯಕ ಸಮಯವು ಬಂದು ಒದಗಲಿದೆ. ಜನಕ ಜನನಿಯನ್ನು ಪೂಜಿಸಿ ಆಶೀರ್ವಾದ ಪಡೆದುಕೊಳ್ಳಿ. ಶುಭವಾಗುವುದು. ನವಗ್ರಹ ಸ್ತೋತ್ರವನ್ನು ಪಠಿಸಿ ಗ್ರಹಣದೋಷವನ್ನು ಕಳೆದುಕೊಳ್ಳಿ.

    ಧನಸ್ಸು: ರಾಶ್ಯಾಧಿಪತಿ ಗುರುವು ಮಕರದಲ್ಲಿ ವಕ್ರನಾಗಿದ್ದರೂ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ದು ಉತ್ಸಾಹ, ಧೈರ್ಯ, ಶುಭ ಉಂಟುಮಾಡುತ್ತಾನೆ. ಆದರೆ ಗ್ರಹಣದ ಕಾಲದಲ್ಲಿ ಶಿವ ಸಹಸ್ರನಾಮ, ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ, ನಿಮ್ಮ ಭವಿಷ್ಯವನ್ನು ಭದ್ರಮಾಡಿಕೊಳ್ಳಿ. ಮಾಡಬೇಕಾದ ಕೆಲಸ ಬಹಳಷ್ಟಿದ್ದು, ಸಮಯ ಅಭಾವವಿರುತ್ತದೆ. ಮಿಥುನ ರಾಶಿಯ ಶ್ರೀರಾಮನು ಶಿವಧನಸ್ಸನ್ನು ಮುರಿದದ್ದು ದಶರಥನ ಆಶೀರ್ವಾದದಿಂದ. ಮರೆಯದಿರಿ ನಿಮ್ಮ ಜನ್ಮದಾತೆಯನ್ನು. ನಿಮ್ಮ ಜೀವನವು ಹಂಸತೂಲಿಕಾ ಕಲ್ಪವಾಗಬೇಕಾದರೆ ಇವರ ಆಶೀರ್ವಾದ ಅತ್ಯಗತ್ಯ.

    ಮಕರ: ಜನ್ಮಶನಿಯಿಂದ ಅಸಮಾಧಾನವನ್ನು ಕಂಡ ನಿಮಗೆ ಈ ಕಂಕಣಾಕಾರದ ಸೂರ್ಯಗ್ರಹಣವು ಶುಭಫಲ ತರುವುದು. ಗ್ರಹಬಲವಿಲ್ಲದಿದ್ದರೂ, ದೈವಬಲ ಹಾಗೂ ಗ್ರಹಣದ ಶುಭಾ-ಶುಭ ಫಲಗಳಿಂದ ತಕ್ಕಮಟ್ಟಿಗೆ ನೆಮ್ಮದಿ, ಸಂತೋಷವನ್ನು ಕಾಣುತ್ತೀರ. ಪರಿವರ್ತನೆಯ ಗ್ರಹ ಶನಿಯನ್ನು ಮರೆಯದಿರಿ. ಶಿವತ್ರಿಷತಿ ನಾಮವನ್ನು ಪಠಿಸಿ. ನಿಮ್ಮ ಗುರುಗಳ ಪಾದಗಳನ್ನು ಮನಸಾ ರ್ಸ³ಸಿ ವಿಶೇಷ ಆನಂದ ಹೊಂದಿರಿ. ನೀತಿಯಿರಲಿ, ನಡತೆಯಿರಲಿ. ನುಡಿದಂತೆ ನಡೆದಲ್ಲಿ ಶನಿಯು ನಿಮ್ಮನ್ನು ಕಾಪಾಡುವನು.

    ಕುಂಭ: ಕುಂಭ ರಾಶಿಗೆ ಗ್ರಹಣ ಸ್ಪರ್ಶವಿಲ್ಲದಿದ್ದರೂ, ಗ್ರಹಣ ಕಾಲದ ಫಲಗಳು ಸಮಭಾಗದಲ್ಲಿರುತ್ತದೆ. ಹನ್ನೆರಡರ ಶನಿಯು ನಿಮ್ಮನ್ನು ಬಾಧಿಸದಿರಲು ವಿಶೇಷವಾಗಿ ರವಿ, ಬುಧ, ಕೇತು ಅಷ್ಟೋತ್ತರವನ್ನು ಹೇಳಿ ಹಾಗು ವರಸಿದ್ಧಿ ವಿನಾಯಕನನ್ನು ಪೂಜಿಸಿ ವಿಶೇಷವಾದ ಫಲವನ್ನು ಪಡೆದುಕೊಳ್ಳಿ. ಕಮಲ ಪುಷ್ಪದಿಂದ ಕೊಲ್ಹಾಪುರದ ಮಹಾಲಕ್ಷಿ್ಮಯನ್ನು ಮನಸಾ ರ್ಸ³ಸಿ ಅರ್ಪಿಸಿ. ಮನಸ್ಸಿನ ಉದ್ವೇಗ ಕಡಿಮೆಯಾಗುವುದು. ದೇವರನ್ನು ದೊಡ್ಡವರನ್ನು ದೂರಮಾಡದೆ ನಿಮ್ಮ ಹೃದಯ ಮಂದಿರದಲ್ಲಿ ಸ್ಥಾಪಿಸಿ ಪೂಜಿಸಿ.

    ಮೀನ: ನಿಮಗೆ ಈಗಾಗಲೇ ಸಮಯ ಚೆನ್ನಾಗಿದ್ದು, ಗ್ರಹಗಳ ಸ್ಥಾನಗಳು ಶುಭವನ್ನು ಕೊಡುವುದರಲ್ಲಿ ಸಂದೇಹವಿಲ್ಲ. ಆದರೆ ಸೂರ್ಯಗ್ರಹಣವು ಜಗತ್ತಿಗೇ ಕತ್ತಲೆಯನ್ನು ತರುವಾಗ ನಾನು-ನೀವು ಎಷ್ಟರ ಮಟ್ಟಿಗಿದ್ದೇವು? ಈ ವಾರದಲ್ಲಿ ಅತ್ಯಂತ ವೇಗವಾದ ಕೆಲಸಗಳು ಬೇಡ. ನಿಮ್ಮ ಸಮಯ ದೇವರ ಧ್ಯಾನಕ್ಕೆ ಮೀಸಲಿರಲಿ. ಗುರು ದತ್ತಾತ್ರೇಯ ಸಹಸ್ರನಾಮವನ್ನು ಪಠಿಸಿ. ಗುರುವಾಸುದೇವಾನಂದ ಸರಸ್ವತಿಗಳ ದತ್ತಾತ್ರೇಯ ಅಷ್ಟಕವನ್ನು ಪಠಿಸಿ. ನಿಮ್ಮ ಮನಸ್ಸಿನಲ್ಲಿ ಕುಲಗುರುಗಳನ್ನು ಭಜಿಸಿ ಪೂಜಿಸಿ ಆರಾಧಿಸಿ. ಹನ್ನೊಂದರ ಶುಭಕಾಲವು ನಡೆಯುವಾಗ ಅಲ್ಪದ್ದನ್ನು ಚಿಂತಿಸಬಾರದು. ಆನಂದಸಾಗರದಲ್ಲಿ ಮುಳುಗಿ ತೇಲಿ. ದಡ ಸೇರಿ. ಮತ್ತೊಬ್ಬರನ್ನೂ ಸಂತೋಷದಿಂದಿರಿಸಿ. ಅಮಿತಾನಂದವೇ ನಿಮ್ಮ ಧ್ಯೇಯವಾಗಿರಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts