More

    ಹೌದು ನಾನು ಅಮ್ಮ-ಮಗಳನ್ನು ಮಂಚಕ್ಕೆ ಕರೆದಿದ್ದೆ! ಮಾಡೆಲ್​ ಆರೋಪವನ್ನು ಒಪ್ಪಿಕೊಂಡಿದ್ದ ವಿನಾಯಕನ್​​

    ಬೆಂಗಳೂರು: ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಜೈಲರ್​ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ಪ್ರತಿಯೊಂದು ಪಾತ್ರವು ಕೂಡ ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಅದರಲ್ಲೂ ಖಳನಾಯಕ ವಿನಾಯಕನ್​ ವಿಭಿನ್ನ ಮ್ಯಾನರಿಸಂ ಮೂಲಕ ಅಬ್ಬರಿಸಿ ಬೊಬ್ಬಿರಿದ್ದಾರೆ. ವಿನಾಯಕನ್​ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ನಡುವೆ ಅವರ ಹಳೆಯ ವಿವಾದಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ.

    ಒಮ್ಮೆ ವಿನಾಯಕನ್​ ಅವರು ಮಾಡೆಲ್​ ಮತ್ತು ಆಕೆಯ ತಾಯಿಯನ್ನು ಮಂಚಕ್ಕೆ ಕರೆದಿದ್ದರಂತೆ. ಇವರ ವಿರುದ್ಧ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಲೈಂಗಿಕ ಅಪರಾಧಗಳ ವರದಿಯು ಆಗಿವೆ.

    ಇದನ್ನೂ ಓದಿ: ಅತ್ಯಾಚಾರ ಎಸಗಿ ಕೊಲೆಗೈದ ಬಳಿಕ ಮಾಧ್ಯಮಗಳಿಗೆ ಬೈಟ್ ನೀಡಿದ್ದ ಆರೋಪಿ: ತನಿಖೆಯಿಂದ ಕಾಮುಕರ ಕಳ್ಳಾಟ ಬಯಲು

    4 ವರ್ಷಗಳ ಹಿಂದೆ ನಡೆದಿದ್ದ ಒಂದು ಪ್ರಕರಣ ಭಾರೀ ಚರ್ಚೆಯಾಗಿತ್ತು. ಮಾಡೆಲ್​ ಮೃದುಲಾ ದೇವಿ ಶಶಿಧರನ್​ ಎಂಬುದು ಮೀಟೂ ಆರೋಪದಡಿಯಲ್ಲಿ ವಿನಾಯಕನ್​ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರವನ್ನು ಪೊಲೀಸ್​ ಠಾಣೆಗೆ ದಾಖಲಿಸಿದ್ದರು. ಮಾಡೆಲ್​ ಮಾತ್ರವಲ್ಲದೆ, ಆಕೆಯ ತಾಯಿಯನ್ನೂ ವಿನಾಯಕನ್​ ಮಂಚಕ್ಕೆ ಕರೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.

    ದೂರಿನ ಆಧಾರದ ಮೇಲೆ ವಿನಾಯಕನ್​ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು. ತನಿಖೆ ನಡೆದ ಬಳಿಕ ನಟ ವಿನಾಯಕನ್​ ಅವರನ್ನು ಬಂಧಿಸಲಾಗಿತ್ತು. ತನಿಖೆಯ ಸಂದರ್ಭದಲ್ಲಿ ವಿನಾಯಕನ್​ ಅವರು ಮಾಡೆಲ್​ ಮತ್ತು ಆಕೆಯ ತಾಯಿಯನ್ನು ಮಂಚಕ್ಕೆ ಕರೆದಿದ್ದ ನಿಜ ಎಂದು ತಿಳಿದುಬಂದಿತ್ತು. ಅಲ್ಲದೆ, ಇದನ್ನು ವಿನಾಯಕನ್​ ಸಹ ಒಪ್ಪಿಕೊಂಡಿದ್ದರು.

    ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದ ಮೃದುಲಾದೇವಿ

    ನಟಿಯರ ಬೆಂಬಲಕ್ಕೆ ನಿಂತಿರುವ ವಿನಾಯಕನ್ ಬಗ್ಗೆ ನನಗೆ ಗೌರವವಿತ್ತು. ಆದರೆ, ನಿಜ ಜೀವನದಲ್ಲಿ ಅವರ ಸ್ತ್ರೀದ್ವೇಷವನ್ನು ಅನುಭವಿಸಿದ್ದೇನೆ. ಕಾರ್ಯಕ್ರಮವೊಂದಕ್ಕೆ ಬರುವಂತೆ ನಾನು ಆಹ್ವಾನ ನೀಡಿದ ಸಂದರ್ಭದಲ್ಲಿ ತನ್ನ ಜೊತೆ ಮಲಗುವಂತೆ ಕೇಳಿದ ವಿನಾಯಕನನ್ನು ನಾನು ಗೌರವಿಸುವುದಿಲ್ಲ. ನನ್ನ ತಾಯಿಯೂ ಬೇಕು ಎಂದು ಕೇಳಿದ್ದ. ಅವರು ಹೇಳಿದ್ದನ್ನೆಲ್ಲ ನಾನು ರೆಕಾರ್ಡ್ ಮಾಡಿದ್ದೇನೆ. ನಾನು ತೊಟ್ಟಪ್ಪನ್ ಸಿನಿಮಾವನ್ನು ನೋಡುತ್ತೇನೆ. ಅವರು ಎದುರಿಸುತ್ತಿರುವ ಜಾತಿ ನಿಂದನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಾನು ಯಾವಾಗಲೂ ಜಾತಿಪದ್ಧತಿ ಮತ್ತು ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡಿದವನು. ನಾನು ಜನಾಂಗೀಯ ದಾಳಿಗೆ ಒಳಗಾದ ವಿನಾಯಕನನ್ನು ಮಾತ್ರ ಬೆಂಬಲಿಸುತ್ತೇನೆ. ಆದರೆ ಮಹಿಳೆಯರನ್ನು ಆಕ್ಷೇಪಿಸಿದ ವಿನಾಯಕನ ಪರವಾಗಿ ನಾನು ನಿಲ್ಲುವುದಿಲ್ಲ ಎಂದು ಮೃದುಲಾದೇವಿ ಬರೆದುಕೊಂಡಿದ್ದರು.

    ಯಾರೂ ಈ ವಿನಾಯಕನ್​?

    ವಿನಾಯಕನ್​ ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಟ. ತಿಮಿರು ಮತ್ತು ಮಾರಿಯನ್​ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಪರಿಚಿತರಾದರು. ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಇದೀಗ ಜೈಲರ್​ ಸಿನಿಮಾದಲ್ಲಿ ನಟಿಸುವ ಎಲ್ಲ ಚಿತ್ರರಂಗದ ಗಮನ ಸೆಳೆದಿದ್ದಾರೆ. ಜೈಲರ್​ ಸಿನಿಮಾ ಬಿಡುಗಡೆಯಾಗುವವರೆಗೂ ಕಾವಲಯ್ಯ ಹಾಡಿನಿಂದಾಗಿ ತಮನ್ನಾ ಎಲ್ಲೆಡೆ ಸುದ್ದಿಯಾಗಿದ್ದರು. ಆದರೆ, ಸಿನಿಮಾ ಬಿಡುಗಡೆ ಬಳಿಕ ಇದೀಗ ವಿನಾಯಕನ್​ ಅವರ ವಿಲ್ಲನ್​ ಪಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದರ ನಡುವೆಯೇ ಅವರ ವಿವಾದಗಳು ಸಹ ಮತ್ತೆ ಚರ್ಚೆಯಾಗುತ್ತಿವೆ.

    ಇದನ್ನೂ ಓದಿ: ಪೊಟ್ಯಾಶಿಯಂ ಅಧಿಕವಾಗಿರುವ ಆರೋಗ್ಯಕರ ಆಹಾರಗಳಿವು… ಇವುಗಳ ಸೇವನೆಯಿಂದ ಸಿಗಲಿದೆ ಹಲವು ಲಾಭ

    10 ಮಹಿಳೆಯರ ಜತೆ ಮಲಗಿದ್ದೇನೆ

    ಕಳೆದ ವರ್ಷ (2022) ನಟಿ ನವ್ಯಾ ನಾಯರ್​ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್​ ಮಾಡಿದ ವಿ.ಕೆ. ಪ್ರಕಾಶ್​ ನಿರ್ದೇಶನದ “ಒರುಥಿ” ಚಿತ್ರದ ಪ್ರಚಾರದ ವೇಳೆ ವಿನಾಯಕನ್​ ವಿವಾದವನ್ನು ಸೃಷ್ಟಿ ಮಾಡಿಕೊಂಡಿದ್ದರು. ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಬಗ್ಗೆ ಕೇಳುವುದು “ಮೀ ಟೂ” ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದಿದ್ದರು. (ಏಜೆನ್ಸೀಸ್​)

    ಈವರೆಗೂ 10 ಮಹಿಳೆಯರ ಜತೆ ಮಲಗಿದ್ದೇನೆ! ಮತ್ತೆ ವೈರಲ್​ ಆಯ್ತು ಜೈಲರ್​ ವಿಲ್ಲನ್ ವಿವಾದಾತ್ಮಕ ಮಾತುಗಳು​ ​

    ನವ್ಯಾ ನಾಯರ್​ ಮುಂದೆಯೇ 10 ಮಹಿಳೆಯರ ಜತೆ ಮಲಗಿದ್ದೆ ಎಂದಿದ್ದ ಖ್ಯಾತ ನಟನ​ ದಾಂಪತ್ಯದಲ್ಲಿ ಬಿರುಗಾಳಿ!

    ಬೇಕು ಅನಿಸಿದ್ರೆ ಮಂಚಕ್ಕೆ ಕರಿತೀನಿ.. ಸಹನಟನ ಹೇಳಿಕೆಗೆ ಕ್ಷಮೆಯಾಚಿಸಿದ ನಟಿ ನವ್ಯಾ ನಾಯರ್​!

    ನನ್ಗೆ ಅನ್ಸಿದ್ರೆ ಸಂಭೋಗಕ್ಕೆ ಕರಿತೀನಿ… ನಟಿಯರಿಗೆ ತಿರುಗೇಟು ಕೊಡಲು ಹೋಗಿ ಮತ್ತೆ ವಿವಾದ ಸೃಷ್ಟಿಸಿದ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts