More

    ಬೇಕು ಅನಿಸಿದ್ರೆ ಮಂಚಕ್ಕೆ ಕರಿತೀನಿ.. ಸಹನಟನ ಹೇಳಿಕೆಗೆ ಕ್ಷಮೆಯಾಚಿಸಿದ ನಟಿ ನವ್ಯಾ ನಾಯರ್​!

    ಕೊಚ್ಚಿ: ಒರುಥಿ ಸಿನಿಮಾಗೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೀಟೂ ಚಳುವಳಿ ಬಗ್ಗೆ ನಟ ವಿನಾಯಕನ್ ನೀಡಿದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ನಟಿ ನವ್ಯಾ ನಾಯರ್​ ಸಹ ಕಲಾವಿದೆಯಾಗಿ ವಿನಾಯಕ್​ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಪುರುಷ ನೀಡಿದ ಹೇಳಿಕೆಗೆ ಮಹಿಳೆಯನ್ನು ದೂಷಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

    ತಮ್ಮ ಒರುಥಿ ಚಿತ್ರ ವೀಕ್ಷಿಸಲು ಥಿಯೇಟರ್‌ಗೆ ಆಗಮಿಸಿದ ನವ್ಯಾ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ವಿನಾಯಕನ್​ ಮೀಟೂ ಅಭಿಯಾನದ ಬಗ್ಗೆ ಕಾಮೆಂಟ್​ ಮಾಡುವಾಗ ವೇದಿಕೆ ಮೇಲೆ ಅನೇಕ ಪುರುಷರು ಇದ್ದರು. ಆದರೆ, ಅವರೆಲ್ಲರನ್ನು ಬಿಟ್ಟು ನನ್ನನ್ನೇ ಪ್ರಶ್ನಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ನಾನು ಮೈಕ್ ತೆಗೆದುಕೊಳ್ಳಲು ಪ್ರಯತ್ನಿಸಿದರೂ ನನಗೆ ಸಾಧ್ಯವಾಗಲಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡರು.

    ವಿನಾಯಕನ್​ ಅವರ ಹೇಳಿಕೆ ಸರಿಯಲ್ಲ. ಸಹೋದ್ಯೋಗಿಯಾಗಿ ಅವರ ಪರವಾಗಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ ಎನ್ನುವ ಮೂಲಕ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದರು.

    ಇದೇ ಸಂದರ್ಭದಲ್ಲಿ ಒರುಥಿ ಚಿತ್ರದ ಬಗ್ಗೆ ಮಾತನಾಡಿರುವ ನವ್ಯಾ, ಈ ಚಿತ್ರವು ಮಹಿಳೆಯ ಸಾಮರ್ಥ್ಯವನ್ನು ಚಿತ್ರೀಕರಿಸಿದೆ. ಮಹಿಳೆಯು ತನ್ನ ಜೀವನದಲ್ಲಿ ಎದುರಾಗುವ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಎದುರಿಸಿ ಹೇಗೆ ಅಧಿಕಾರವನ್ನು ಪಡೆಯುತ್ತಾಳೆ ಎಂಬುದನ್ನು ಇದು ತೋರಿಸುತ್ತದೆ ಎಂದರು.

    ಘಟನೆ ಹಿನ್ನೆಲೆ ಏನು?
    ನಟಿ ನವ್ಯಾ ನಾಯರ್​ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್​ ಮಾಡಿರುವ ವಿ.ಕೆ. ಪ್ರಕಾಶ್​ ನಿರ್ದೇಶನದ “ಒರುಥಿ” ಚಿತ್ರದ ಪ್ರಚಾರದ ವೇಳೆ ವಿನಾಯಕನ್​ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಮೀಟೂ ಚಳುವಳಿಯನ್ನು ನಾನು ಅರ್ಥಮಾಡಿಕೊಂಡಿಲ್ಲ, ಅದರ ಅರ್ಥ ಮಹಿಳೆಯರನ್ನು ದೈಹಿಕ ಸಂಬಂಧದ ಬಗ್ಗೆ ಕೇಳುವುದೇ ಎಂದು ಪ್ರಶ್ನಿಸುವ ಮೂಲಕ ಮಹಿಳೆಯರ ಕೆಂಗಣ್ಣಿಗೆ ವಿನಾಯಕನ್​ ಗುರಿಯಾಗಿದ್ದಾರೆ. ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಕೇಳುವುದು “ಮೀ ಟೂ” ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದು ಹೇಳುವ ಮೂಲಕ ವಿವಾದದ ಅಲೆ ಎಬ್ಬಿಸಿದ್ದಾರೆ.

    ವಿನಾಯಕನ್​ ವಿವಾದಾತ್ಮಕ ಹೇಳಿಕೆಯನ್ನು ನೀಡುವಾಗ ನಟಿ ನವ್ಯಾ ನಾಯರ್​ ಕೂಡ ಅದೇ ವೇದಿಕೆ ಮೇಲೆಯೇ ಇದ್ದರು. ಈ ವೇಳೆ ಅವರು ವಿನಾಯಕನ್​ ಅವರ ಮಾತನ್ನು ಖಂಡಿಸದೇ ಮೌನ ವಹಿಸಿದ್ದಕ್ಕೆ ಟೀಕೆಗೂ ಗುರಿಯಾಗಿದ್ದಾರೆ. ಆ ಕ್ಷಣದಲ್ಲಿ ನಾನೇನು ಮಾಡಲು ಸಾಧ್ಯವಾಗಲಿಲ್ಲ ಎಂದು ಸಮರ್ಥಿಸಿಕೊಂಡರು ಆದರೆ, ನಂತರದಲ್ಲಿ ಹೇಳಿಕೆಯನ್ನು ಖಂಡಿಸಿದರೂ ಕೂಡ ನವ್ಯಾ ನಡೆದುಕೊಂಡ ರೀತಿ ಹಲವರಿಗೆ ಬೇಸರ ತರಿಸಿದೆ.

    ಕ್ಷಮೆಯಾಚಿಸಿದ ವಿನಾಯಕನ್​
    ವಿನಾಯಕನ್​ ಮಾತಿಗೆ ಎಲ್ಲೆಡೆ ಆಕ್ರೋಶಗಳು ವ್ಯಕ್ತವಾಗಿ ವಿವಾದ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ವಿನಾಯಕನ್​ ತಮ್ಮ ಹೇಳಿಕೆಗೆ ಮಹಿಳೆಯರ ಬಳಿ ಕ್ಷಮೆಯಾಚನೆ ಮಾಡುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.

    ಅಂದಹಾಗೆ ವಿನಾಯಕನ್​ ತಮಿಳಿನಲ್ಲಿ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಮತ್ತು ಐಶ್ವರ್ಯಾ ರಾಜೇಶ್, ಸಿಮ್ರಾನ್ ಮತ್ತು ರಿತು ವರ್ಮಾ ನಟಿಸಿರುವ ವಿಕ್ರಮ್ ಅವರ ಮುಂಬರುವ ಚಿತ್ರ ‘ಧ್ರುವ ನಚ್ಚತಿರಂ’ ನಲ್ಲಿ ವಿನಾಯಕನ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್​)

    10 ಮಹಿಳೆಯರ ಜತೆ ದೈಹಿಕ ಸಂಬಂಧ ಹೊಂದಿದ್ದೇನೆ: ನಟನ ಹೇಳಿಕೆ ಖಂಡಿಸದೇ ಕೆಂಗಣ್ಣಿಗೆ ಗುರಿಯಾದ ನವ್ಯಾ!

    ನಾನು ಮಹಿಳೆಯರನ್ನ ಮಂಚಕ್ಕೆ ಕರಿತೀನಿ.. ನೇರವಾಗೇ ಕೇಳ್ತೀನಿ, ಒಪ್ಪದಿದ್ರೆ… ನಾಲಿಗೆ ಹರಿಬಿಟ್ಟ ಖ್ಯಾತ ನಟ

    ನನ್ಗೆ ಅನ್ಸಿದ್ರೆ ಸಂಭೋಗಕ್ಕೆ ಕರಿತೀನಿ… ನಟಿಯರಿಗೆ ತಿರುಗೇಟು ಕೊಡಲು ಹೋಗಿ ಮತ್ತೆ ವಿವಾದ ಸೃಷ್ಟಿಸಿದ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts