More

    ಆಂಗ್ಲರ ವಿರುದ್ಧ ಸಿಡಿಲಬ್ಬರದ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್

    ರಾಜ್​ಕೋಟ್​: ಇಲ್ಲಿನ ನಿರಂಜನ್​ ಷಾ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್​ ದ್ವಿಶತಕ ಸಿಡಿಸಿದ್ದಾರೆ.

    213 ಎಸೆತಗಳಲ್ಲಿ ಎದುರಿಸಿದ ಜೈಸ್ವಾಲ್ 14 ಬೌಂಡರಿ, 12 ಸಿಕ್ಸರ್​ ಒಳಗೊಂಡಂತೆ 214 ರನ್​ ಗಳಿಸಿದ್ದಾರೆ. ಮತ್ತೊಂದು ಬದಿಯಲ್ಲಿ ಜೈಸ್ವಾಲ್​ಗೆ ಸರ್ಫರಾಜ್​ ಖಅನ್​ ಉತ್ತಮ ಸಾಥ್​ ನೀಡುತ್ತಿದ್ದು, ಟೀಂ ಇಂಡಿಯಾ ಬೃಹತ್​ ಮೊತ್ತದತ್ತ ದಾಪುಗಾಲಿರಿಸಿದೆ.

    ಇದನ್ನೂ ಓದಿ: ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ 10 ರೂ. ಮದುವೆಯಾದರೂ ಈ ನಟಿ ಸ್ಟಿಲ್​ ಸಿಂಗಲ್

    104 ರನ್​ಗಲೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಯಶಸ್ವಿ ಜೈಸ್ವಾಲ್​ ಸ್ಪೋಟಕ ಬ್ಯಾಟಿಂಗ್​ಗೆ ಒತ್ತು ನೀಡಿದರು. ಪರಿಣಾಮ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಯಾಯಿತು. ಈ ಮೂಲಕ ಇಂಗ್ಲೆಂಡ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಡಬಲ್ ಸೆಂಚುರಿ ಸಿಡಿಸಿದ ವಿಶೇಷ ಸಾಧನೆ ಮಾಡಿದರು.

    ಇದಕ್ಕೂ ಮುನ್ನ ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ 209 ರನ್​ ಬಾರಿಸಿದ್ದರು. ಇದೀಗ ಮತ್ತೊಮ್ಮೆ ದ್ವಿಶತಕ ಬಾರಿಸುವ ಮೂಲಕ ಯುವ ದಾಂಡಿಗ ಅಬ್ಬರಿಸಿರುವುದು ವಿಶೇಷ. 4 ವಿಕೆಟ್​ ನಷ್ಟಕ್ಕೆ ಟೀಂ ಇಂಡಿಯಾ 430 ರನ್​ ಗಳಿಸಿ ಡಿಕ್ಲೇರ್​ ಘೋಷಿಸಿದ್ದು, ಪ್ರವಾಸಿ ತಂಡಕ್ಕೆ 557 ರನ್​ಗಳ ಬೃಹತ್​ ಮೊತ್ತವನ್ನು ಗುರಿಯಾಗಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts