More

    VIDEO| ಯಶ್​ -ರಾಧಿಕಾ ಪುತ್ರಿ ಐರಾ ಇದೀಗ ಟೀಚರ್​; ತಮ್ಮನಿಗೆ ಹೇಗೆ ಪಾಠ ಮಾಡ್ತಾಳೆ ನೋಡಿ

    ಬೆಂಗಳೂರು: ನಟ ಯಶ್ ಮತ್ತು ರಾಧಿಕಾ ದಂಪತಿ ಇಬ್ಬರು ಮುದ್ದಾದ ಮಕ್ಕಳ ಜತೆ ಸಮಯ ಕಳೆಯುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋಗದೇ ಪುಟಾಣಿಗಳಿಗಾಗಿಯೇ ಸಮಯ ಮೀಸಲಿಟ್ಟಿದ್ದರು ಈ ಸ್ಟಾರ್ ಜೋಡಿ. ಇದೀಗ ಮಗಳು ಐರಾ ತಮ್ಮನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಳೆ.

    ಇದನ್ನೂ ಓದಿ: ಬ್ಯಾಂಕ್​ನಲ್ಲಿ ಸಾಲ​ ಪಡೆದು ‘ಜಾಗ್ವಾರ್​’ ಸಿನಿಮಾ ನಿರ್ಮಾಣ; ಹಳೇ ದಿನಗಳ ನೆನಪಲ್ಲಿ ನಿಖಿಲ್​ ಕುಮಾರ್​

    ಹೌದು, ಯಥರ್ವನ ಜತೆಗೆ ಇದ್ದು, ಅವನ ಬೇಕು ಬೇಡಗಳನ್ನು ಐರಾ ವಿಚಾರಿಸುತ್ತಿದ್ದಾಳೆ. ಅಷ್ಟೇ ಅಲ್ಲ ಒಂದರ್ಥದಲ್ಲಿ ಎಲ್ಲವನ್ನು ಹೇಳಿಕೊಡುವ ಟೀಚರ್​ ಸಹ ಆಗಿದ್ದಾಳೆ. ಅದಕ್ಕೆ ಬೇಕಾದ ಸಾಕ್ಷ್ಯವನ್ನು ರಾಧಿಕಾ ಪಂಡಿತ್​ ವಿಡಿಯೋ ಸಮೇತ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಯಶ್​ ಮತ್ತು ರಾಧಿಕಾ ಜತೆಗಿರುವ ಫೋಟೋದಲ್ಲಿ ಯಥರ್ವ ಅಪ್ಪ ಮತ್ತು ಅಮ್ಮನನ್ನು ಗುರುತಿಸುತ್ತಿದ್ದಾನೆ. ಹಾಗೇ ಗುರುತಿಸುವುದನ್ನು ಹೇಳಿಕೊಡುತ್ತಿರುವುದು ಅಕ್ಕ ಐರಾ. ಈ ವಿಡಿಯೋಕ್ಕೆ ಅಷ್ಟೇ ಚಂದದ ಕ್ಯಾಪ್ಶನ್​ ನೀಡಿದ್ದಾರೆ ರಾಧಿಕಾ. ‘ವಿದ್ಯಾರ್ಥಿ ಇದೀಗ ಟೀಚರ್ ಆಗಿ ಬದಲಾಗಿದ್ದಾರೆ. ನನ್ನ ಕೆಲಸ ಮುಗಿಯಿತು’ ಎಂದಿದ್ದಾರೆ.

    ಇದನ್ನೂ ಓದಿ: ‘ಪೊಗರು’ ಚಿತ್ರದ ಇಂಟ್ರೊಡಕ್ಷನ್​ ಹಾಡಿನ ಬಜೆಟ್​ ಎಷ್ಟು ಗೊತ್ತೆ?

    ಕಳೆದ ವರ್ಷದ ಅಕ್ಟೋಬರ್​ನಲ್ಲಿ ಐರಾಳ ವಿಡಿಯೋವನ್ನು ರಾಧಿಕಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಫೋಟೋದಲ್ಲಿ ಅಪ್ಪ ಮತ್ತು ಅಮ್ಮನನ್ನು ಐರಾ ಗುರುತಿಸಿದ್ದಳು. ಇದೀಗ ಯಥರ್ವನ ಸರದಿ. ಸದ್ಯ ಈ ವಿಡಿಯೋಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಶೇರ್​ ಸಹ ಮಾಡುತ್ತಿದ್ದಾರೆ.

    ಅಲ್ಲು ಅರ್ಜುನ್​ ಭೇಟಿ ಸಲುವಾಗಿ ಅಭಿಮಾನಿಯ ಪಾದಯಾತ್ರೆ!; ಆತ ನಡೆದ ಹಾದಿ ಎಷ್ಟಿರಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts