More

    ರಾಕಿ ಜತೆ ರಾಕಿಂಗ್; ಕೆಜಿಎಫ್​ಗೆ ಯಶ್ ಡಬ್ಬಿಂಗ್

    ‘ಕೆಜಿಎಫ್ ಚಾಪ್ಟರ್ 2’ ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ಆ ಸಿನಿಮಾ ತಂಡದಿಂದ ಏನೇ ಸಣ್ಣ ಸುದ್ದಿ ಬಂದರೂ ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಅದರಂತೆ ಇದೀಗ ಚಿತ್ರದ ಡಬ್ಬಿಂಗ್ ವಿಚಾರದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಡಬ್ಬಿಂಗ್ ಸ್ಟುಡಿಯೋದಲ್ಲಿ ಯಶ್ ಅಲಿಯಾಸ್ ರಾಕಿ ಭಾಯ್ ತಮ್ಮ ಪಾತ್ರಕ್ಕೆ ಡಬ್ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ, ಚಿತ್ರದ ಮೊದಲ ಭಾಗಕ್ಕೆ ಹಿಂದಿ ಪ್ರೇಕ್ಷಕರಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡದ ಜತೆಗೆ ಹಿಂದಿ ಅವತರಣಿಕೆಗೂ ಸ್ವತಃ ಯಶ್ ಧ್ವನಿ ನೀಡುತ್ತಿದ್ದಾರಂತೆ. ಯಶ್ ಜತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್, ‘ರಾಕಿ ಜತೆ ಡಬ್ಬಿಂಗ್ ಮಾಡುವುದು ಯಾವತ್ತಿದ್ದರೂ ರಾಕಿಂಗ್ …’ ಎಂದಿದ್ದಾರೆ. ಈ ಚಿತ್ರ ಜುಲೈ 16ಕ್ಕೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

    ಮತ್ತೆ ಕನ್ನಡಕ್ಕೆ ಸನ್ನಿ ಲಿಯೋನ್…

    ‘ಅದ್ಧೂರಿ ಲವರ್’ ಚಿತ್ರಕ್ಕಾಗಿ ಜಗಳಗಂಟಿಯಾದ ಸಂಜನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts