More

    ಬದಲಿ ರಸ್ತೆಯಲ್ಲಿ ತೆರಳಿದ ಮುಖ್ಯಮಂತ್ರಿ

    ಯಳಂದೂರು: ಚಾಮರಾಜನಗರಕ್ಕೆ ಮಂಗಳವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಸ್ತೆ ಮೂಲಕ ಯಳಂದೂರು ಮಾರ್ಗವಾಗಿ ಹನೂರಿಗೆ ತೆರಳಲು ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಸಂತೆಮರಹಳ್ಳಿ ಮಾರ್ಗವಾಗಿ ಮೂಗೂರು ರಸ್ತೆಯ ಮೂಲಕ ತೆರಳಿದಿದ್ದರಿಂದ ಈ ಭಾಗದ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


    ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ 209 ಸಂಪೂರ್ಣ ಹದಗೆಟ್ಟಿದೆ. ರಸ್ತೆ ತುಂಬೆಲ್ಲ ಹಳ್ಳಗಳು ಬಿದ್ದಿವೆ. ಅಲ್ಲದೆ ಈ ಮಾರ್ಗವಾಗಿ ಮದ್ದೂರು, ಅಗರ, ಮಾಂಬಳ್ಳಿ ಗ್ರಾಮಗಳಲ್ಲಿ ರಸ್ತೆ ಕಿರಿದಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಬೈಪಾಸ್ ರಸ್ತೆ ಕಾಮಗಾರಿ ನಿಂತು ವರ್ಷಗಳೇ ಉರುಳಿವೆ. ಈ ಎಲ್ಲ ಸಮಸ್ಯೆಗಳನ್ನು ಮರೆಮಾಚಲು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಬದಲಿ ಮಾರ್ಗದ ವ್ಯವಸ್ಥೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.


    ಮುಖ್ಯಮಂತ್ರಿ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವುದು ಸಂತಸದ ವಿಚಾರ. ಆದರೆ ಬದಲಿ ರಸ್ತೆಯಲ್ಲಿ ಏಕೆ ಹನೂರಿಗೆ ತೆರಳಿದರು ಎಂಬುದು ತಿಳಿಯುತ್ತಿಲ್ಲ. ಇವರ ಬರುವಿಕೆಗಾಗಿ ಕಾದಿದ್ದ ಜನರಿಗೆ ನಿರಾಶೆಯಾಗಿದೆ. ಯಳಂದೂರು ಸೇರಿದಂತೆ ಹಲವೆಡೆ ರಸ್ತೆ ಹಳ್ಳ ಬಿದ್ದಿದೆ. ಮುಖ್ಯಮಂತ್ರಿ ಬರುವಿಕೆ ನೆಪದಲ್ಲಿ ರಸ್ತೆಯ ದುರಸ್ತಿ ಆಗಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಇಲ್ಲಿನ ಸಮಸ್ಯೆಗಳ ನಿಜ ದರ್ಶನ ಬಯಲಾಗುತ್ತದೆ ಎಂಬ ನೆಪವೊಡ್ಡಿ ಬೇಕೆಂತಲೇ ಮಾರ್ಗ ಬದಲಿಸಲಾಗಿದೆ ಎಂಬ ಅನುಮಾನ ಕಾಡಿದೆ ಎಂದು ಸ್ಥಳೀಯರಾದ ಕಂದಹಳ್ಳಿ ಮಹೇಶ್, ಮಂಜುನಾಥ, ಕುಮಾರ, ಗಣೇಶ ಸೇರಿದಂತೆ ಅನೇಕರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts