More

    Success Story; ಮಾತೃಭಾಷೆಯನ್ನೇ ಅಸ್ತ್ರವನ್ನಾಗಿಸಿ ಸ್ಪರ್ಧಾ ಪರೀಕ್ಷೆ ಬರೆದ ವಿಜಯಪುರದ ಯಲಗೂರೇಶ್​ ನಾಯಕ

    ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವುದು ಕಷ್ಟ, ಕಡಿಮೆ ಅಂಕ ಬರುತ್ತದೆ ಎಂದೆಲ್ಲ ಯೋಚನೆ ಮಾಡುತ್ತಾರೆ. ಆದರೆ ಸತತ ಪ್ರಯತ್ನ ಹಾಗೂ ಪರಿಶ್ರಮಕ್ಕೆ ಭಾಷೆ ಯಾವುದಾದರೆ ಏನು? ಒಳ್ಳೆ ಅಂಕ ಪಡೆಯಬಹುದು ಎನ್ನುತ್ತ ತಮ್ಮ ಜರ್ನಿ ಬಗ್ಗೆ ಮಾತು ಆರಂಭಿಸಿದ, ಭಾರತೀಯ ರೈಲ್ವೆ ನಿರ್ವಹಣಾ ಸೇವೆಯಲ್ಲಿ ತರಬೇತಿ ಪಡೆಯುತ್ತಿರುವ ಯಲಗೂರೇಶ್​ ನಾಯಕ​.

    ಯಲಗೂರೇಶ್​ ನಾಯಕ (890ನೇ ರ‍್ಯಾಂಕ್​ ಹೋಲ್ಡರ್​, ಭಾರತೀಯ ರೈಲ್ವೆ ನಿರ್ವಹಣಾ ಸೇವೆಯಲ್ಲಿ ಟ್ರೇನಿ): ಯಲಗೂರೇಶ್​ ನಾಯಕ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ತಂಡಾದವರಾಗಿದ್ದು, ತಂದೆ ಅರ್ಜುನ್​, ತಾಯಿ ಉಮಾಬಾಯಿ. ಎಸ್​ಎಸ್​ಎಲ್​ಸಿ, ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಮುದ್ದೇಬಿಹಾಳದ ಸ್ಥಳೀಯ ಶಾಲಾ & ಕಾಲೇಜ್​ನಲ್ಲಿ ಪೂರ್ಣಗೊಳಿಸಿದ್ದು, ಬಿಕಾಂ ಓದುತ್ತೀರುವಾಗಲೇ ಅಣ್ಣನಿಂದ ಸ್ಫೂರ್ತಿ ಪಡೆದು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದರು.

    ಯಾವೆಲ್ಲ ಪರೀಕ್ಷೆಗಳು? ಯುಪಿಎಸ್ಸಿ ಪರೀಕ್ಷೆ ಬರೆಯುವ ಮುನ್ನ 2017ರಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ ಪರೀಕ್ಷೆ, ಎಸ್​ಡಿಎ, ಎಕ್ಸೈಸ್​​​ ಗಾರ್ಡ್​ ಪರೀಕ್ಷೆ ಬರೆದಿದ್ದಾರೆ. 2019ರಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿ, 2019, 2020, 2021ರಲ್ಲಿ ಪರೀಕ್ಷೆ ಬರೆದಿದ್ದರು. 2022ರಲ್ಲಿ 890ನೇ ರ‍್ಯಾಂಕ್ ಪಡೆದುಕೊಂಡಿದ್ದು, ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು.

    ಪರೀಕ್ಷೆತಯಾರಿ ಹೇಗೆ?: ಯಲಗೂರೇಶ್​ ನಾಯಕ ಮಾತನಾಡಿ, 2019ರಲ್ಲಿ ದೆಹಲಿಗೆ ಕೋಚಿಂಗ್​ಗೆ ಹೋಗಿದ್ದು, 4 ತಿಂಗಳು ಕೋಚಿಂಗ್​ ಪಡೆದ ನಂತರ ಸ್ವಯಂ ತಯಾರಿ ನಡೆಸಲು ಪ್ರಾರಂಭಿಸಿದ್ದೇನು. ಕನ್ನಡದಲ್ಲೇ ಪರೀಕ್ಷೆ ಬರೆಯಲು ನಿರ್ಧರಿಸಿದ್ದರಿಂದ ಇಂಗ್ಲಿಷ್​ನಲ್ಲಿ ದೊರೆಯುವ ಮೇಟಿರಿಯಲ್ಸ್​ಅನ್ನು ಕನ್ನಡಕ್ಕೆ ಅನುವಾದ ಮಾಡಿಕೊಂಡು ನೋಟ್ಸ್​ ಮಾಡಿಕೊಳ್ಳುತ್ತಿದ್ದೆ. ಕೋಚಿಂಗ್​ ಪಡೆದುಕೊಳ್ಳುವುದಕ್ಕಿಂತ ಈ ಮೊದಲು ಪರೀಕ್ಷೆ ಬರೆದು ಪಾಸ್​ ಆದವರಲ್ಲಿ ಮಾರ್ಗದರ್ಶನ ಪಡೆದುಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ.

    ಸ್ಪರ್ಧಾಕಾಂಗಳಿಗೆ ಕಿವಿಮಾತು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೊದಲು ಪರೀಕ್ಷೆಗಳ ಕುರಿತು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ಪರೀಕ್ಷೆಯ ಬೇಡಿಕೆ ಏನು ಎನ್ನುವುದರ ಬಗ್ಗೆ ಅರಿತುಕೊಳ್ಳಬೇಕು. ನಂತರ ಸಿಲೆಬಸ್​ಗಳ ಪ್ರಕಾರ ಯಾವ ವಿಷಯವನ್ನು ಎಷ್ಟು ಪ್ರಮಾಣದಲ್ಲಿ ಓದಬೇಕು ಎನ್ನುವುದನ್ನು ನಿರ್ಧರಿಸಿಕೊಳ್ಳಬೇಕು. ಮುಖ್ಯವಾಗಿ ಹಳೇ ಪಶ್ನೆ ಪತ್ರಿಕೆಯನ್ನು ಬಿಡಸಬೇಕು. ಮಾಹಿತಿಗಳನ್ನು ಅರ್ಥಮಾಡಿಕೊಳ್ಳುವ ಕಡೆ ಹೆಚ್ಚಿನ ಗಮನ ನೀಡಬೇಕು. ಯಾವುದೇ ವಿಷಯವನ್ನು ಕಂಠಪಾಠ ಮಾಡಬಾರದು. ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಅರಿವುಹೊಂದಿರಬೇಕು. ಇನ್ನೂ ಪರೀಕ್ಷೆ ಬರೆಯುವಾಗ ಮೊದಲು ಪ್ರಶ್ನೆ ಪತ್ರಿಕೆಯಲ್ಲಿ ಇರುವ ಎಲ್ಲ ಪ್ರಶ್ನೆ ಓದಿಕೊಳ್ಳಬೇಕು. ನಮಗೆ ತಿಳಿದಿರುವ ವಿಷಯವನ್ನು ಮೊದಲು ಆಯ್ಕೆ ಮಾಡಿಕೊಂಡು ಬರೆಯಬೇಕು. ನಂತರ ಬೇರೆ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದಿದ್ದಾರೆ.

    ವಕ್ತಿತ್ವ ಪರೀಕ್ಷೆ : ವ್ಯಕ್ತಿತ್ವ ಪರೀಕ್ಷೆಯನ್ನು 23 ಭಾಷೆಯಲ್ಲಿ ಕೊಡಬಹುದಿದ್ದು, ಯಲಗೂರೇಶ್​ ಅವರು ಹಿಂದಿಯಲ್ಲಿ ಸಂದರ್ಶನ ನೀಡಿದ್ದರು. ನಾಗರೀಕ ಸೇವಕರಾಗಿ ಆಯ್ಕೆಗೊಳ್ಳುವವರು ಆ ಹುದ್ದೆಗೆ ಅರ್ಹರೇ ಎಂದು ಪರೀಕ್ಷಿಸಲು ಪ್ರಶ್ನೆ ಕೇಳಲಾಗುತ್ತದೆ. ಧೈರ್ಯವಾಗಿ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.

    ಮೇನ್ಸ್​ ಬರೆದಿದ್ದು ಕನ್ನಡದಲ್ಲಿ : ಮೇನ್ಸ್​ ಪರೀಕ್ಷೆ ಬರೆಯುವಾಗ ಸಾಮಾನ್ಯವಾಗಿ ಪ್ರಶ್ನೆ ಪತ್ರಿಕೆ ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಇರುತ್ತದೆ. ಆದರೆ ಪರೀಕ್ಷಾ ರ್ಥಿಗಳಿಗೆ 23 ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಾಕಾಶ ಇರುತ್ತದೆ. ಕನ್ನಡದಲ್ಲಿ ಪರೀಕ್ಷೆ ಬರೆಯುವ ಮೊದಲು ಪ್ರಾಯೋಗಿಕ ಅಭ್ಯಾಸ ನಡೆಸಬೇಕು. ಆದರೆ ಕನ್ನಡದಲ್ಲಿ ಪರೀಕ್ಷೆ ಬರೆಯುವವರಿಗೆ ಇಂಗ್ಲಿಷ್​ ಜ್ಞಾನ ಬೇಕೇಬೇಕು. ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ನಮಗೆ ಇಂಗ್ಲಿಷ್​ನಲ್ಲಿ ದೊರೆಯುತ್ತದೆ. ಹಾಗಾಗಿ ನಾವು ಇಂಗ್ಲಿಷ್​ನಿಂದ ಕನ್ನಡಕ್ಕೆ ಅನುವಾದ ಮಾಡಿಕೊಂಡು ನೋಟ್ಸ್​ ಮಾಡಿಕೊಳ್ಳಬೇಕು. ನಮಗೆ ಅರ್ಥವಾಗದ ವಿಷಯಗಳನ್ನು ಯುಟ್ಯೂಬ್​ನಲ್ಲಿ ನೋಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಯುವಕರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.

    ತೆಲಂಗಾಣದಲ್ಲಿ ಮತ ಬೇಟೆ ಶುರು; ಮತದಾರರಿಗೆ ನಗದು, ಉಡುಗೊರೆ, ಹಣ, ಕುಕ್ಕರ್ ಹಂಚಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts