More

    ಜನರು ಆರೋಗ್ಯ ಸೇವೆ ಪಡೆಯಲಿ

    ಯಲಬುರ್ಗಾ: ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗ್ರಾಪಂ ಸದಸ್ಯ ಪ್ರಕಾಶ ಮಾಲಿಪಾಟೀಲ್ ಹೇಳಿದರು.

    ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಲಿ

    ತಾಲೂಕಿನ ತರಲಕಟ್ಟಿ ಗ್ರಾಮದ ಶರಣಬಸವೇಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿವಿಧ ಯೋಜನೆಗಳ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವ ಸದುದ್ದೇಶದಿಂದ ಜನಪದ ಕಲಾ ತಂಡಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರ ವಿಶೇಷವಾಗಿ ತಾಯಿ, ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಜಾರಿಗೆ ತಂದಿದೆ ಎಂದರು. ಕಲಾವಿದ ವೀರೇಶ ಹಾಲಗುಂಡಿ ಮಾತನಾಡಿದರು.

    ಇದನ್ನೂ ಓದಿ: VIDEO | ಸ್ಟಾರ್ ನಟನ ಮೇಲೆ ಚಪ್ಪಲಿ ಎಸೆದ ದುಷ್ಕರ್ಮಿಗಳು! ತೀವ್ರ ಆಕ್ರೋಶ ವ್ಯಕ್ತಪಡಿಸಿದ ಫ್ಯಾನ್ಸ್​..

    ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಸ್ನೇಹ ಕ್ಲಿನಿಕ್, ತಾಯಿ ಕಾರ್ಡ್ ಮಹತ್ವ, ಹೆರಿಗೆ, ಕ್ಷಯರೋಗ ನಿಯಂತ್ರಣ, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ಕಾಯಿಲೆ ನಿಯಂತ್ರಣ, ಆರೋಗ್ಯ ಸೇವೆಗಳ ಕುರಿತು ಅಳವಂಡಿಯ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘದ ಕಲಾವಿದರಿಂದ ಜನಪದ ಗೀತೆಗಳು ಹಾಗೂ ಬೀದಿ ನಾಟಕ ಪ್ರದರ್ಶನ ನಡೆಯಿತು.
    ಕಲಾವಿದರಾದ ಸಿದ್ದಲಿಂಗಯ್ಯ ಗೋರ್ಲೆಕೊಪ್ಪ, ದಾವಲ್‌ಸಾಬ್ ಅತ್ತಾರ, ನಾಗರಾಜ ಕಂಕಿ, ಗ್ಯಾನೇಶ, ಮಹಾದೇವಪ್ಪ ನೀರಲಗಿ, ಗ್ಯಾನೇಶ ಬಡಿಗೇರ, ಸಿದ್ದಲಿಂಗಮ್ಮ ಹಾಲಗುಂಡಿ, ಶಿವಲಿಂಗಮ್ಮ ಹಲಗಿ, ಶರಣಪ್ಪ ಬಡಿಗೇರ, ಆರೋಗ್ಯ ಸೇವೆಗಳ ಕುರಿತು ಜಾಗೃತಿ ಮೂಡಿಸಿದರು.
    ಪ್ರಮುಖರಾದ ಪ್ರಭುಗೌಡ ಪಾಟೀಲ್, ಮುದಿಯಪ್ಪ ಮೇಟಿ, ನಿಂಗಪ್ಪ ಮೇಟಿ, ಅಂಗನವಾಡಿ ಕಾರ್ಯಕರ್ತೆ ಬಸಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts