More

    ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ

    ಯಲಬುರ್ಗಾ: ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದಿರಿ ಎಂದು ಸೀಡ್ಸ್ ವರ್ಕ್ ಇಂಟರ್‌ನ್ಯಾಷನಲ್ ಪ್ರವೈಟ್ ಲಿ.
    ಡೆಪ್ಯುಟಿ ಜನರಲ್ ಮ್ಯಾನೇಜರ್ ಹರ್ಷ ಹೇಳಿದರು.

    ತಾಲೂಕಿನ ಮದ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡೆಸ್ಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.
    ಗ್ರಾಮದ ಪಾಲಕರ ಹಾಗೂ ಶಿಕ್ಷಣ ಪ್ರೇಮಿಗಳ ಆಸೆಯಂತೆ ಸಂಸ್ಥೆಯಿಂದ 3 ಲಕ್ಷ ರೂ. ವೆಚ್ಚದಲ್ಲಿ 50 ಡೆಸ್ಕ್ ಶಾಲೆಗೆ ವಿತರಿಸಲಾಗಿದೆ. ಶಾಲೆಗೆ ಅಗತ್ಯ ಸೌಲಭ್ಯ ನೀಡಲು ಸಂಸ್ಥೆ ಮುಂದಾಗಿದೆ. ಒದಗಿಸಲಾದ ಸಾಮಗ್ರಿ ಉಪಯೋಗಿಸಿಕೊಳ್ಳುವುದರ ಜತೆಗೆ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು. ಖಾಸಗಿಗಿಂತ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳೇ ಹೆಚ್ಚು ಸಾಧನೆ ಮಾಡಿರುವುದನ್ನು ನಾವೆಲ್ಲರೂ ಕಂಡಿದ್ದೇವೆ. ಗ್ರಾಮಸ್ಥರು ಶಾಲಾ ವಾತಾವರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು. ಶಿಕ್ಷಣ ಪ್ರೇಮಿ ಬಸವರಾಜ ಮ್ಯಾಗೇರಿ ಮಾತನಾಡಿದರು.

    ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು. ಕಳಕಯ್ಯಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭ ಸೀಡ್ಸ್ ವರ್ಕ್ ಇಂಟರ್‌ನ್ಯಾಷನಲ್ ಪ್ರವೈಟ್ ಲಿ. ಪ್ರೊಡಕ್ಷನ್ ವ್ಯವಸ್ಥಾಪಕ ಎಂ.ಸಿ.ಪುನೀತ, ಆರ್ಗನೈಸರ್ ಖಾದರ್‌ಸಾಬ್ ಗೊರಳ್ಳಿ, ಮೌಲಸಾಬ್ ನಧಾಪ್, ಉಮೇಶ ಹಡಪದ, ಗ್ರಾಪಂ ಉಪಾಧ್ಯಕ್ಷ ಬಾಳನಗೌಡ ಸಣ್ಣಗೌಡ್ರ, ಸದಸ್ಯ ಯಮನಗೌಡ ಪೊ.ಪಾಟೀಲ್, ಮುಖ್ಯಶಿಕ್ಷಕ ಹುಚ್ಚೀರಪ್ಪ ಅಡವಳ್ಳಿ, ಶಿಕ್ಷಕರಾದ ಶ್ರೀನಿವಾಸ ದೇಸಾಯಿ, ನಿಂಗಪ್ಪ ತೋಪಲಕಟ್ಟಿ, ಸುನೀಲ್ ಕುಮಾರ್ ದೇಸಾಯಿ, ದಳಪತಿ ವೀರನಗೌಡ ಹಿರೇಗೌಡ್ರ, ಮುಖಂಡರಾದ ಕರೆಹನಮಪ್ಪ ಸಣ್ಣಗೌಡ್ರ, ಯಮನೂರಪ್ಪ ಕುದ್ರಿಕೊಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts