More

    ಜೆಜೆಎಂ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ; ಅಧಿಕಾರಿಗಳಿಗೆ ಜಿಪಂ ಸಿಇಒ ಫೌಜಿಯಾ ತರನ್ನುಮ್ ಸೂಚನೆ

    ಯಲಬುರ್ಗಾ: ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ದ್ರವ ತ್ಯಾಜ್ಯ ಘಟಕ, ಜೆಜೆಎಂ ಕಾಮಗಾರಿ ಮತ್ತು ಶಾಲಾ ತಡೆಗೋಡೆ ಕಾಮಗಾರಿಯನ್ನು ಜಿಪಂ ಸಿಇಒ ಫೌಜಿಯಾ ತರನ್ನುಮ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

    ಶಾಲಾ ಕಾಂಪೌಂಡ್, ದ್ರವ ತ್ಯಾಜ್ಯ ಘಟಕ ಗುಣಮಟ್ಟದಿಂದ ಕೂಡಿರಬೇಕು. ಜೆಜೆಎಂ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಇದೇ ವೇಳೆ ಬೇವೂರಿನ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಯೋಗಕ್ಷೆಮದ ಬಗ್ಗೆ ಮಾಹಿತಿ ಪಡೆದರು. ಗುಣಮಟ್ಟದ ಆಹಾರ ಕೊಡುವಂತೆ ಕೇಂದ್ರದ ಸಿಬ್ಬಂದಿ ಸೂಚಿಸಿದರು. ಬಳಿಕ ಮಲಕಸಮುದ್ರ, ಮ್ಯಾದನೇರಿ, ನೆಲಜೇರಿ, ಬೇವೂರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪರಿಶೀಲನೆ ನಡೆಸಿದರು.

    ಗ್ರಾಪಂ ಅಧ್ಯಕ್ಷೆ ಕೆಂಚವ್ವ ರಾಮಣ್ಣ ಹೊಸಮನಿ, ಸದಸ್ಯ ಉಮೇಶ ವಡ್ಡರ್, ಜಿಪಂ ಇಇ ಬಸನಗೌಡ ಪಾಟೀಲ್, ತಾಪಂ ಇಒ ಸಂತೋಷ ಪಾಟೀಲ್, ಸಹಾಯಕ ನಿರ್ದೇಶಕ ಎಫ್.ಡಿ.ಕಟ್ಟಿಮನಿ, ತಾಂತ್ರಿಕ ಸಂಯೋಜಕ ಯಮನೂರ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಪಿಡಿಒ ವೆಂಕಟೇಶ ನಾಯಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts