More

    ಎಲ್ಲ ವಾಹನಗಳ ತಪಾಸಣೆ ಕಡ್ಡಾಯ; ಚುನಾವಣಾಧಿಕಾರಿ ಕೆ.ವಿ.ಕಾವ್ಯಾರಾಣಿ ಸೂಚನೆ


    ಯಲಬುರ್ಗಾ: ತಾಲೂಕಿನ ಸಂಕನೂರು ಕ್ರಾಸ್, ಬಂಡಿ ಚೆಕ್‌ಪೋಸ್ಟ್‌ಗೆ ಚುನಾವಣಾಧಿಕಾರಿ ಕೆ.ವಿ.ಕಾವ್ಯಾರಾಣಿ ಸೋಮವಾರ ತಡರಾತ್ರಿ ಭೇಟಿ ನೀಡಿ ಪರಿಶೀಲಿಸಿದರು.

    ನೆರೆ ಜಿಲ್ಲೆಯ ಟಿಪ್ಪರ್, ಗೂಡ್ಸ್, ಕಾರು, ಟಾಟಾ ಏಸ್ ಮುಂತಾದ ಪ್ಯಾಸೆಂಜರ್ ವಾಹನಗಳ ತಪಾಸಣೆ ಕಡ್ಡಾಯ. ತೀವ್ರ ನಿಗಾವಹಿಸಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸಬೇಕು. ಪ್ರವಾಸಿಗರು ಹಾಗೂ ಪ್ರಯಾಣಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಬ್ಬಂದಿಗೆ ಕಾವ್ಯಾರಾಣಿ ಸೂಚಿಸಿದರು.

    ಇದನ್ನೂ ಓದಿ : ಗೊಂದಲ ಸೃಷ್ಟಿ ಬೇಡ, ಚನ್ನಪಟ್ಟಣದಲ್ಲಿ ಸಮರ್ಥ ಅಭ್ಯರ್ಥಿ ಇದ್ದಿದ್ದರೆ ಮಂಡ್ಯದಿಂದ ಸ್ಪರ್ಧಿಸುತ್ತಿದ್ದೆ; ಎಚ್​ಡಿಕೆ

    ಹಣ, ಸಾಮಗ್ರಿ, ಚಿನ್ನಾಭರಣ, ವಸ್ತುಗಳು, ಬಟ್ಟೆ, ಗೃಹ ಉಪಯೋಗಿ ವಸ್ತುಗಳ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಅನುಮಾನಾಸ್ಪದ ವಸ್ತು ಸಾಗಣೆ ಕಂಡುಬಂದರೆ ತಕ್ಷಣ ತಡೆದು ಪರಿಶೀಲಿಸಬೇಕು. ದಾಖಲೆ ಇಲ್ಲದ ವಸ್ತುಗಳು, ನಗದು ಕಂಡುಬಂದಲ್ಲಿ ಕೂಡಲೇ ವಶಕ್ಕೆ ಪಡೆಯಬೇಕೆಂದರು.

    ಇದನ್ನೂ ಓದಿ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕೋರ್ಟ್​ ಶಾಕ್​: ಧಾರವಾಡಕ್ಕೆ ನೋ ಎಂಟ್ರಿ, ಅರ್ಜಿ ವಜಾ

    ಚುನಾವಣಾಧಿಕಾರಿಗಳು ಖುದ್ದು ವಾಹನ ತಪಾಸಣೆ ನಡೆಸಿದರು. ಬಳಿಕ ಅಲ್ಲಿನ ಸಿಸಿಟಿವಿ ಕಾರ್ಯನಿರ್ವಹಣೆ, ವಾಹನಗಳ ಓಡಾಟದ ಮಾಹಿತಿ ಪುಸ್ತಕ ಹಾಗೂ ಸಿಬ್ಬಂದಿ ಕೆಲಸ ಪರಿಶೀಲಿಸಿದರು. ಎಫ್‌ಎಸ್‌ಟಿ ತಂಡದ ವಿ.ಕೆ.ಬಡಿಗೇರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts