More

    ವ್ಯಾಪಾರಕ್ಕೆ ಹೆಚ್ಚಿನ ಸಮಯ ನೀಡಲು ಬೀದಿ ಬದಿ ವರ್ತಕರ ಸಂಘಟನೆಗಳ ಒಕ್ಕೂಟದಿಂದ ಆಗ್ರಹ

    ಯಲಬುರ್ಗಾ: ಜನತಾ ಕರ್ಫ್ಯೂ ಅವಧಿಯಲ್ಲಿ ವ್ಯಾಪಾರಕ್ಕೆ ನೀಡಿರುವ ಸಮಯವನ್ನು ವಿಸ್ತರಿಸಬೇಕೆಂದು ಒತ್ತಾಯಿಸಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಶನಿವಾರ ತಹಸೀಲ್ದಾರ್ ಶ್ರೀಶೈಲ ತಳವಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

    ಜನತಾ ಕರ್ಫ್ಯೂದಿಂದಾಗಿ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟವಾಗದೆ ಉಳಿಯುತ್ತಿವೆ. ಬೀದಿ ಬದಿ ಹೋಟೆಲ್‌ಗಳಿಗೆ ನಿರೀಕ್ಷೆಯಂತೆ ಗ್ರಾಹಕರು ಬರುತ್ತಿಲ್ಲ. ಇದರಿಂದ ಸಾಕಷ್ಟು ನಷ್ಟಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಈಗ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಸಮಯ ನೀಡಬೇಕೆಂದು ಒತ್ತಾಯಿಸಿದರು.

    ಪ್ರಧಾನಮಂತ್ರಿ ಸ್ವನಿಧಿ ಮತ್ತು ಆತ್ಮನಿರ್ಭರ ಯೋಜನೆಯಡಿ ಪಡೆದಿರುವ 10 ಸಾವಿರ ಸಾಲದ ಕಂತು ಪಾವತಿಗೂ ಕಷ್ಟವಾಗುತ್ತಿದೆ. ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಹಾರದ ಕಿಟ್ ನೀಡುವುದು ಸೇರಿ ಇತರ ರೀತಿಯಲ್ಲಿ ನೆರವಿಗೆ ಬರಬೇಕೆಂದು ಒತ್ತಾಯಿಸಲಾಯಿತು. ಒಕ್ಕೂಟದ ತಾಲೂಕು ಅಧ್ಯಕ್ಷ ಮಹಮ್ಮದ್ ಗೌಸ್ ಮಕಾಂದಾರ್, ಪದಾಧಿಕಾರಿಗಳಾದ ಮಹಾದೇವಪ್ಪ ಹೂಗಾರ್, ಸಿದ್ರಾಮೇಶ ಬೇಲೇರಿ, ಬಸವರಾಜ ಹೂಗಾರ್, ದೇವೇಂದ್ರಪ್ಪ, ಹಸನ್‌ಸಾಬ್ ದೋಟಿಹಾಳ, ಶೇಖರ್ ಚವ್ಹಾಣ್, ಮಾರುತಿ ಚೆನ್ನದಾಸರ್, ಅಬ್ಬಾಸ್ ಕೊತ್ವಾಲ್, ಯಮನೂರಸಾಬ್ ಮುಜಾವರ್ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts