More

    ಬಿಜೆಪಿ ಸಚಿವರಿಗೆ ಆಡಳಿತ-ಕಾನೂನು ಗೊತ್ತಿಲ್ಲ: ಹಿರೇಅರಳಿಹಳ್ಳಿಯಲ್ಲಿ ಮಾಜಿ ಸಚಿವ ಬಸರರಾಜ ರಾಯರಡ್ಡಿ ಆರೋಪ

    ಯಲಬುರ್ಗಾ: ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ಭಾವನಾತ್ಮಕ ವಿಚಾರಗಳಿಂದ ಜನರನ್ನು ಪ್ರಚೋದನೆಗೊಳಿಸಿ ಮತ ಪಡೆದರೆ ಅಭಿವೃದ್ಧಿ ಸಾಧ್ಯವೇ? ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಪ್ರಶ್ನಿಸಿದರು.

    ಹಿರೇಅರಳಿಹಳ್ಳಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡಿದ್ದ ಅಭಿವೃದ್ಧಿ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ಯೋಜನೆ ಮತ್ತು ಕೆಲಸಗಳನ್ನು ಬಿಜೆಪಿಗರು ಮುಂದುವರಿಸಿಕೊಂಡು ಹೋಗುತ್ತಿದ್ದು ನಾವೇ ಮಾಡಿದ್ದೇವೆಂದು ಬೀಗುತ್ತಿದ್ದಾರೆ. ಬಿಜೆಪಿ ಸರ್ಕಾರದಿಂದ ಹೇಳಿಕೊಳ್ಳುವಂಥ ಕೆಲಸಗಳಾಗಿಲ್ಲ. ಬಹುತೇಕ ಸಚಿವರಿಗೆ ಆಡಳಿತ ಮತ್ತು ಕಾನೂನು ಗೊತ್ತಿಲ್ಲ. ಗೂಂಡಾವರ್ತನೆ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ದೂರಿದ ಅವರು, ವಂಶಪಾರಂಪರ್ಯ ರಾಜಕಾರಣ ಅಭಿವೃದ್ಧಿಗೆ ಮಾರಕವಾಗಿದ್ದು, ಇದು ಎಲ್ಲ ಪಕ್ಷಗಳ ಹಣೆಬರಹ ಎಂದರು. ಹಿರೇಅರಳಿಹಳ್ಳಿ ಹಾಗೂ ಮಾಟರಂಗಿ ಗ್ರಾಮದ ಪ್ರಮುಖರು ಕಾಂಗ್ರೆಸ್ ಸೇರ್ಪಡೆಗೊಂಡರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ರಾಮಣ್ಣ ಸಾಲಬಾವಿ, ರೇವಣಪ್ಪ ಸಂಗಟಿ, ಫಕೀರಪ್ಪ ತಳವಾರ್, ಹನುಮಂತಪ್ಪ ಕಲಭಾವಿ, ನಾಗರಾಜ ಉಚ್ಚಲಕುಂಟಾ, ಶ್ರೀಶೈಲ ವಾದಿ, ಪ್ರಭುರಾಜ ಹವಾಲ್ದಾರ್, ತೀರ್ಥಪ್ಪ ಭಜಂತ್ರಿ, ನಬೀಸಾಬ್, ಶರಣಪ್ಪ ಗಾಂಜಿ, ಶಿವನಗೌಡ ದಾನರಡ್ಡಿ, ಸುಧೀರ್ ಕೊರ್ಲಳ್ಳಿ, ಹುಲಗಪ್ಪ ಬಂಡಿವಡ್ಡರ್, ಬಸವರಾಜ ಈಳಿಗೇರ್, ಮಲ್ಲಿಕಾರ್ಜುನ ಜಕ್ಕಲಿ, ರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts