More

    ಯುವ ಪೀಳಿಗೆಗೆ ತಿಳಿಸಿ ಶರಣರ ತತ್ವಾದರ್ಶ

    ಯಲಬುರ್ಗಾ: ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಸಿದ್ಧರಾಮೇಶ್ವರ ಅವರ ಆದರ್ಶವನ್ನು ಎಲ್ಲರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಭೋವಿ ಸಮಾಜದ ತಾಲೂಕು ಯುವ ಘಟಕ ಅಧ್ಯಕ್ಷ ಹುಲಗಪ್ಪ ಬಂಡಿವಡ್ಡರ್ ಹೇಳಿದರು.

    ವಜ್ರಬಂಡಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದ ಬಸವಾದಿ ಶರಣರ ಸಮಕಾಲಿನಲ್ಲಿ ಶಿವಯೋಗಿ ಸಿದ್ಧರಾಮೆಶ್ವರರು ಶ್ರೇಷ್ಠ ವಚನಕಾರರಾಗಿದ್ದರು. ಅಧ್ಯಾತ್ಮ ಪರಂಪರೆ ಹೊಂದಿರುವ ನಾಡಿನಲ್ಲಿ ಶರಣರು, ಸಂತರ ವಿಚಾರ, ಸಾಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸಲು ಮುಂದಾಗಬೇಕು ಎಂದರು.

    ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖರಾದ ರೇವಣಪ್ಪ ಮ್ಯಾಗೇರಿ, ಯಲ್ಲಪ್ಪ ಹಳ್ಳಿಗುಡಿ, ಶಂಕರಗೌಡ ಮಾಲಿಪಾಟೀಲ್, ರಾಮಣ್ಣ ಪೂಜಾರ, ಕನಕಪ್ಪ ಉಪ್ಪಾರ, ತಿರುಪತಿ ರಾಠೋಡ, ಶರಣಪ್ಪ ತಳವಾರ್, ಶೇಖಪ್ಪ ಚಿಕ್ಕಗೌಡ್ರ, ಬಸಯ್ಯ ಹಿರೇಮಠ, ಲಕ್ಷ್ಮಣ ಭಜಂತ್ರಿ, ನೀಲಪ್ಪ ಗ್ವಾಡಿ, ಶರಣಪ್ಪ ಹರಿಜನ, ದುರಗಪ್ಪ ವಣಗೇರಿ, ಮುದಕಪ್ಪ ವಡ್ಡರ, ಕೆಂಚಪ್ಪ ವಡ್ಡರ, ಮುತ್ತಪ್ಪ ವಡ್ಡರ, ದುರಗಪ್ಪ ವಡ್ಡರ, ಮಾರುತಿ ವಡ್ಡರ, ಮಂಜುನಾಥ ನರೇಗಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts