More

    ಚಿಕಿತ್ಸೆ ನೀಡುತ್ತಾ ಕರೊನಾ ಸೋಂಕಿಗೆ ಒಳಗಾಗಿ ಚರ್ಮದ ಬಣ್ಣವೇ ಕಪ್ಪಾಗಿದ್ದ ಚೀನಾ ವೈದ್ಯ ಮೃತ

    ಬೀಜಿಂಗ್​: ಮಹಾಮಾರಿ ಕರೊನಾ ವೈರಸ್​ ರೋಗಿಗಳಿಗೆ​ ಚಿಕಿತ್ಸೆ ನೀಡುವಾಗಲೇ ಸೋಂಕಿಗೆ ಒಳಗಾಗಿ ಚರ್ಮದ ಬಣ್ಣವೇ ಕಪ್ಪಾಗುವಷ್ಟು ಗಂಭೀರತರವಾದ ರೋಗಕ್ಕೀಡಾಗಿದ್ದ ಚೀನಾ ವೈದ್ಯರೊಬ್ಬರು 5 ತಿಂಗಳ ನಿರಂತರ ಹೋರಾಟದ ಬಳಿಕ ಅಸುನೀಗಿದ್ದಾರೆ.

    ಡಾ. ಹು ವೈಫೆಂಗ್ (42)​ ಮೃತ ವೈದ್ಯ. ಕಾರ್ಯನಿರ್ವಹಿಸುತ್ತಿದ್ದಾಗಲೇ ಜನವರಿಯಲ್ಲಿ ವೈಫೆಂಗ್​ ಅವರಿಗೆ ಸೋಂಕು ತಗುಲಿತ್ತು. ಕರೊನಾ ಸ್ಪೋಟಗೊಂಡ ಚೀನಾದ ವುಹಾನ್​ ನಗರದ ಆಸ್ಪತ್ರೆಯಲ್ಲಿ ವೈಫೆಂಗ್ ನಿನ್ನೆ (ಮಂಗಳವಾರ)​ ಕೊನೆಯುಸಿರೆಳೆದಿದ್ದಾರೆ.

    ಇದನ್ನೂ ಓದಿ: 12 ಲಕ್ಷ ರೂಪಾಯಿ ಬೆಲೆಯ ಸೈಕಲ್!

    ಒಂದು ತಿಂಗಳಿಗೂ ಹೆಚ್ಚು ಕಾಲ ವೈಫೆಂಗ್​ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಆದರೆ, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯುರೋಲಜಿಸ್ಟ್ (​ಮೂತ್ರಶಾಸ್ತ್ರಜ್ಞ) ಆಗಿದ್ದ ವೈಫೆಂಗ್​, ವೈರಸ್​ ಹರಡುವ ಆರಂಭದಲ್ಲೇ ಎಚ್ಚರಿಕೆ ನೀಡಿ ಚೀನಾ ಸರ್ಕಾರದ ದುರಾಡಳಿತದಿಂದ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದ ಡಾ. ಲಿ ವೆನ್​ಲಿಯಾಂಗ್​ ಅವರ ಸಹೋದ್ಯೋಗಿಯಾಗಿದ್ದರು. ಇಬ್ಬರು ವುಹಾನ್​ ಕೇಂದ್ರ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಇದೇ ಆಸ್ಪತ್ರೆಯಲ್ಲಿ ಕರೊನಾದಿಂದಾಗಿ ಐವರು ಪ್ರಮುಖ ವೈದ್ಯರು ಮೃತಪಟ್ಟಿದ್ದಾರೆ. ವೈಫೆಂಗ್​ನ ಅವರ ಚರ್ಮದ ಬಣ್ಣ ದಿಢೀರನೇ ಕಪ್ಪು ಬಣ್ಣಕ್ಕೆ ತಿರುಗಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಈ ಬಗ್ಗೆ ಮಾತನಾಡಿದ್ದ ಆಸ್ಪತ್ರೆಯ ವಕ್ತಾರ ಚಿಕಿತ್ಸೆ ವೇಳೆ ನೀಡಲಾದ ಆ್ಯಂಟಿಬಯೋಟಿಕ್​ನಿಂದಾಗಿ ವೈಫೆಂಗ್​ ಚರ್ಮದ ಬಣ್ಣ ಬದಲಾಗಿದೆ ಎಂದು ಹೇಳಿದ್ದರು.

    ಇದನ್ನೂ ಓದಿ: ಮೊಬೈಲ್ ಕಳ್ಳನ ಹೊಡೆದು ಕೊಂದ ಜನ!

    ವೈಫೆಂಗ್​ ಅವರ ಮತ್ತೊಬ್ಬ ಸಹೋದ್ಯೋಗಿ ಡಾ. ಯಿ ಫ್ಯಾನ್​ ಅವರ ಚರ್ಮದ ಬಣ್ಣವು ಕಪ್ಪಾಗಿ ಬದಲಾಗಿದೆ. ಆದರೆ ಫ್ಯಾನ್​ ಪೂರ್ತಿಯಾಗಿ ಗುಣಮುಖರಾಗಿದ್ದಾರೆ. ಒಂದೇ ಸಮಯದಲ್ಲಿ ಇಬ್ಬರು ಅನಾರೋಗ್ಯಕ್ಕೀಡಾಗಿದ್ದರು. ವುಹಾನ್​ ಸೆಂಟ್ರಲ್​ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮಧ್ಯ ಜನವರಿಯಲ್ಲಿ ಇಬ್ಬರು ಸೋಂಕಿಗೆ ಒಳಗಾಗಿದ್ದರು. (ಏಜೆನ್ಸೀಸ್​)

    ಚೀನಾದಲ್ಲಿ ಉದ್ಯೋಗಿಗಳಿಗೆ ಜೀವಂತ ಹುಳು ತಿನ್ನುವ ಶಿಕ್ಷೆ: ಕಾರಣ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts