More

    ಮೊಬೈಲ್ ಕಳ್ಳನ ಹೊಡೆದು ಕೊಂದ ಜನ!

    ಬೆಂಗಳೂರು: ಮೊಬೈಲ್ ಕದ್ದು ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಆತ ಚಿಕಿತ್ಸೆ ಫಲಿಸದೆ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾನೆ.

    ಸಲ್ಮಾನ್ (28) ಮೃತ ಕಳ್ಳ. ಪಾಲಕರಿಂದ ದೂರ ವಾಗಿದ್ದ ಈತ ಮನೆ, ನೆಲೆ ಹೊಂದಿರಲಿಲ್ಲ. ಇಬ್ಬರು ಸಹಚರರ ಜೊತೆ ಸೇರಿ ಜನರ ಮೊಬೈಲ್, ಪರ್ಸ್ ಮತ್ತು ಮನೆ ಕಳ್ಳತನ ಮಾಡುತ್ತಿದ್ದ. ಎಚ್​ಎಎಲ್, ಬನಶಂಕರಿ ಮತ್ತು ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳಿದ್ದವು. ಈತನ ಜತೆಗಿದ್ದ ಇಬ್ಬರ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಕೆನಡಾದಲ್ಲಿ ಲಾಕ್​ಡೌನ್ ಜತೆಗೆ ಗಡಿಪ್ರದೇಶಗಳು ಬಂದ್​ ಕರೊನಾ ಪ್ರಕರಣ ಇಳಿಕೆ

    ಮೇ 31ರಂದು ಸಲ್ಮಾನ್ ಸೇರಿ ಮೂವರು ಸಂಜೆ 6 ಗಂಟೆಯಲ್ಲಿ ಬೈಕ್​ನಲ್ಲಿ ಬಂದು ದೊಡ್ಡಗುಬ್ಬಿ ರಸ್ತೆಯಲ್ಲಿ ಮೊಬೈಲ್ ಕಳ್ಳತನಕ್ಕೆ ಕೈ ಹಾಕಿದ್ದರು. ಮೊಬೈಲ್ ಮಾಲೀಕ, ಕಳ್ಳ..ಕಳ್ಳ.. ಎಂದು ಕೂಗಿಕೊಂಡಾಗ ಸಾರ್ವಜನಿಕರು ಬೈಕ್ ಬೆನ್ನಟ್ಟಿ ಸುತ್ತುವರಿ ದಿದ್ದರು. ಕೆಳಗೆ ಬಿದ್ದ ಮೂವರ ಪೈಕಿ ಇಬ್ಬರು ಪರಾರಿಯಾಗಿದ್ದಾರೆ. ಸಲ್ಮಾನ್ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದು, ಆತನನ್ನು ಸಮೀಪದ ಗವಿಗುಡಿ ದೇವಸ್ಥಾನ ಬಳಿ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದರು. ಅಷ್ಟೊತ್ತಿಗೆ ನಮ್ಮ-100ಗೆ ಬಂದ ಮಾಹಿತಿ ಮೇರೆಗೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ.

    ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದ ಸಲ್ಮಾನ್​ನನ್ನು ಪೊಲೀಸರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರು ಪರಿಶೀಲನೆ ನಡೆಸಿ ಕೆ.ಸಿ. ಜನರಲ್ ಆಸ್ಪತ್ರೆಗೆ ಕಳುಹಿಸಿದ್ದರು. ಇಲ್ಲಿಗೆ ಕರೆತಂದಾಗ ಚಿಕಿತ್ಸೆ ಫಲಿಸದೆ ಸಲ್ಮಾನ್ ಅಸುನೀಗಿದ್ದಾನೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಸಲ್ಮಾನ್ ಮೇಲೆ ಹಲ್ಲೆ ನಡೆಸಿದವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

    ಇದನ್ನೂ ಓದಿ: 12 ಲಕ್ಷ ರೂಪಾಯಿ ಬೆಲೆಯ ಸೈಕಲ್!

    ಕದ್ದ ಬೈಕ್ ಏರಿ ಬಂದಿದ್ದ

    ಮನೆ ಬಿಟ್ಟು ಕಳ್ಳತನವನ್ನೇ ಕಸುಬು ಮಾಡಿ ಕೊಂಡಿದ್ದ ಸಲ್ಮಾನ್, ತನ್ನ ಸಹಚರರ ಜತೆ ಸೇರಿ ಮೇ 28ರಂದು ಹೆಣ್ಣೂರು ಬಳಿ ಬೈಕ್ ಕಳವು ಮಾಡಿದ್ದ. ಅದೇ ಬೈಕ್​ನಲ್ಲಿ ಮೇ 31ರಂದು ಕೊತ್ತನೂರಿಗೆ ಬಂದು ಮೊಬೈಲ್ ಕದಿಯಲು ಕೈ ಹಾಕಿದಾಗ ಸಿಕ್ಕಿಬಿದ್ದಿದ್ದಾನೆ.

    ಸರ್ಕಾರಕ್ಕೆ ಸವಾಲಾದ ನೌಕರರ ನಿಯಂತ್ರಣ ನಿಯಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts