More

    ಬರಹಗಾರ ಅತ್ಯುತ್ತಮ ಓದುಗನಾಗಿರಬೇಕು: ಲೇಖಕ ಲೋಕೇಶ್ ಅಗಸನಕಟ್ಟೆ

    ದಾವಣಗೆರೆ: ಬರಹಗಾರ ಅತ್ಯುತ್ತಮ ಓದುಗನಾಗಿರಬೇಕು. ಆಗ ಬರಹವನ್ನು ಕಾಲಕ್ಕೆ ತಕ್ಕ ಹಾಗೆ ರೂಪಿಸಲು ಸಾಧ್ಯವಾಗಲಿದೆ. ಹೊಸದನ್ನು ತೆರೆದುಕೊಳ್ಳಲು ನೆರವಾಗುತ್ತದೆ ಎಂದು ಲೇಖಕ ಡಾ.ಲೋಕೇಶ್ ಅಗಸನಕಟ್ಟೆ ಹೇಳಿದರು.

    ನಗರದ ಕುವೆಂಪು ಕನ್ನಡ ಭವನದಲ್ಲಿ ಚಿತ್ರದುರ್ಗದ ಸೃಷ್ಟಿ ಗ್ರಂಥಮಾಲೆ, ಎಸ್‌ಆರ್‌ಪಿ ಸಮೂಹ ಸಂಸ್ಥೆ ಹಮ್ಮಿಕೊಂಡಿದ್ದ ‘ಅಂತಃಕರಣದೊಡೆಯ ಅಪ್ಪು-ಗೆ’ (ಕವನ ಸಂಕಲನ), ‘ವೃಷ್ಟಿ ವೃತ್ತಾಂತ’ (ವೈಜ್ಞಾನಿಕ ಸಂಶೋಧನಾ ಕೃತಿ) ಹಾಗೂ ‘ಬೇಲಿಯ ಹೂವು’ (ಕಾದಂಬರಿ) ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಮಾಜದಿಂದ ಪರಿತ್ಯಕ್ತವಾದ ಹೆಣ್ಣಿನ ಬದುಕನ್ನು ಕಟ್ಟಿ ಕೊಡುವ ಅನೇಕ ಕಾದಂಬರಿ ಬಂದಿವೆ. ಮಸಣದ ಹೂವು, ಕೆಸರಿನ ಕಮಲ, ಮೈಮನಗಳ ಸುಳಿಯಲ್ಲಿ, ಗೆಜ್ಜೆ ಪೂಜೆ ಈ ವಿಚಾರದ ಕಾದಂಬರಿಗಳಾಗಿದ್ದು, ಬೇಲಿಯ ಹೂವು ಈ ಸಾಲಿಗೆ ಸೇರಿದೆ. ಪೂಜೆಗೆ ಸಲ್ಲದು ಎಂಬ ನಿರ್ದಿಷ್ಟ ಗ್ರಹಿಕೆ ಇಟ್ಟುಕೊಂಡು ಬರೆದ ಕಾದಂಬರಿ ಇದಾಗಿದೆ ಎಂದರು.

    ಲೇಖಕ ಬಿ.ಎನ್.ಮಲ್ಲೇಶ್ ಮಾತನಾಡಿ, ಹಂಶಿ ಸಂಪಾದಕೀಯ ಕೃತಿ ‘ಅಂತಃಕರಣದೊಡೆಯ ಅಪ್ಪು-ಗೆ’ ಕವನ ಸಂಕಲನ ಉತ್ತಮವಾಗಿ ಮೂಡಿಬಂದಿದೆ. ಪುನೀತ್ ಹಣ, ಐಶಾರಾಮಿ ಬದುಕಿಗಾಗಿ ನಟನೆ ಮಾಡಲಿಲ್ಲ. ನೊಂದಿರುವವರಿಗೆ ಪ್ರಚಾರವಿಲ್ಲದೆ ಸ್ಪಂದಿಸಿದರು. ಅಪ್ಪುವನ್ನು ಕಳೆದುಕೊಂಡ ನೋವೇ ಪದಗಳಾಗಿ ಇಲ್ಲಿ ಕವಿತೆಗಳಾಗಿವೆ ಎಂದು ಹೇಳಿದರು.

    ಸಿನಿಮಾಸಿರಿ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಸಾವಿನ ನಂತರವೂ ಜನರ ಮನಸ್ಸಿನಲ್ಲಿ ಉಳಿದವರು ಪುನೀತ್ ರಾಜ್‌ಕುಮಾರ್ ಮಾತ್ರ. ಹಾಗಾಗಿ ಅವರ ಕೊನೇ ಚಿತ್ರ ಜೇಮ್ಸ್ ಬಿಡುಗಡೆಯಾಗುವ ದಿನ ರಾಜ್ಯದ ಎಲ್ಲ ಚಿತ್ರಮಂದಿರಗಳು ಒಂದು ದಿನದ ಮಟ್ಟಿಗೆ ಬೇರೆ ಯಾವ ಚಿತ್ರಗಳನ್ನೂ ಪ್ರದರ್ಶಿಸದೇ ಜೇಮ್ಸ್ ಚಿತ್ರವನ್ನು ಮಾತ್ರ ಪ್ರದರ್ಶಿಸಲು ನಿರ್ಣಯ ಕೈಗೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts