More

    ‘ಕಾಶ್ಮೀರದಲ್ಲಾದ ಗಾಯಗಳಿಗೆ ಚಿಕಿತ್ಸೆ ಅಗತ್ಯ’: ನ್ಯಾಯಮೂರ್ತಿ ಎಸ್‌.ಕೆ. ಕೌಲ್ ಹೀಗೆಂದಿದ್ದೇಕೆ?

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸುವ ವಿಚಾರಣೆಯ ಸಂದರ್ಭದಲ್ಲಿ ಪ್ರತ್ಯೇಕ ತೀರ್ಪಿನಲ್ಲಿ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು 1980 ರ ದಶಕದಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಕರೆ ನೀಡಿದರು.

    ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ತೀರ್ಪಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಕೈ’ ನಾಯಕ ಕರಣ್​ಸಿಂಗ್​ ಸ್ವಾಗತ
    ಕನಿಷ್ಠ 1980 ರ ದಶಕದಿಂದ ರಾಜ್ಯದ ಒಳಗಿನ ಮತ್ತು ಗಡಿಯಾಚೆಗಿನ ಶಕ್ತಿಗಳಿಂದ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ತನಿಖೆ ನಡೆಸಿ ವರದಿ ಮಾಡಲು ನಿಷ್ಪಕ್ಷಪಾತ ಸತ್ಯ ಮತ್ತು ಸಮನ್ವಯ ಸಮಿತಿಯನ್ನು ಸ್ಥಾಪಿಸಲು ನಾನು ಶಿಫಾರಸು ಮಾಡುತ್ತೇವೆ ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.

    ಆಂತರಿಕ ಮತ್ತು ಗಡಿಯಾಚೆಗಿನ ಶಕ್ತಿಗಳು ಮುಂದುವರಿಯಲು ಬಿಡಬಾರದು. ಈಗಾಗಲೇ ಅವರು ಸಮಾಜದ ಮೇಲೆ ಉಂಟು ಮಾಡಿರುವ ಗಾಯಗಳಿಗೆ ಮುಲಾಮು ಹಚ್ಚಿ ವಾಸಿಮಾಡುವ ಅಗತ್ಯವಿದೆ. ಇಲ್ಲವಾದರೆ ಮುಂದಿನ ಪೀಳಿಗೆ ಆಘಾತ ಅನುಭವಿಸುತ್ತಾರೆ. ಗಾಯಗಳನ್ನು ಗುಣಪಡಿಸುವ ಮೊದಲ ಹೆಜ್ಜೆ ಎಂದರೆ ಈ ಶಕ್ತಿಗಳು ಮಾಡಿದ ಕೃತ್ಯಗಳನ್ನು ಒಪ್ಪಿಕೊಂಡು ಮುಂದೆ ಹಾಗಾಗದಂತೆ ಎಚ್ಚರಿಕೆ ವಹಿಸುವುದಾಗಿದೆ ಎಂದು ಅವರು ಹೇಳಿದರು.

    ಜಸ್ಟಿಸ್ ಕೌಲ್ ಅವರು ಆರ್ಟಿಕಲ್ 370 ರ ಮೂಲ ಉದ್ದೇಶವನ್ನು ಒತ್ತಿಹೇಳಿದರು, ಜಮ್ಮು ಮತ್ತು ಕಾಶ್ಮೀರವನ್ನು ಕ್ರಮೇಣ ಭಾರತಕ್ಕೆ ಸಂಯೋಜಿಸುವುದು ಅದರ ಗುರಿಯಾಗಿತ್ತು. ಅಷ್ಟೇ ಅಲ್ಲ, ನಿಧಾನವಾಗಿ ಇತರ ರಾಜ್ಯಗಳಿಗೆ ಸಮನಾಗಿ ತರುವುದಾಗಿತ್ತು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಶಿಫಾರಸಿನ ಅಗತ್ಯವನ್ನು ಅನಗತ್ಯವಾಗಿ ದೊಡ್ಡದು ಮಾಡುವ ರೀತಿಯಲ್ಲಿ ತೀರ್ಪುನೀಡಲಾಗದು ಎಂದು ಅವರು ಹೇಳಿದರು.

    ಕ್ರಮೇಣ ಏಕೀಕರಣದ ಅಗತ್ಯವನ್ನು ಅಂಗೀಕರಿಸುವಾಗ, ನ್ಯಾಯಮೂರ್ತಿ ಕೌಲ್ ಅವರು ಸ್ಥಾಪಿತ ಕಾರ್ಯವಿಧಾನಗಳನ್ನು ಬೈಪಾಸ್ ಮಾಡಲು “ಹಿಂಬಾಗಿಲ ತಿದ್ದುಪಡಿಗಳ” ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. 367 ನೇ ವಿಧಿಯಲ್ಲಿ ವಿವರಿಸಿರುವಂತಹ ತಿದ್ದುಪಡಿಗೆ ನಿರ್ದಿಷ್ಟ ವಿಧಾನವನ್ನು ಸೂಚಿಸಿದಾಗ, ಅದನ್ನು ಅನುಸರಿಸಬೇಕು ಎಂದು ಅವರು ಒತ್ತಿ ಹೇಳಿದರು.

    ಆರ್ಟಿಕಲ್ 370 ರದ್ದು ಎತ್ತಿಹಿಡಿದ ಸುಪ್ರೀಂಕೋರ್ಟ್​ ತೀರ್ಪಿಗೆ ಕಾಶ್ಮೀರ ನಾಯಕರ ಬೇಸರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts