More

    ದತ್ತಪೀಠದಲ್ಲಿ ಹಿಂದು ಅರ್ಚಕರನ್ನು ನೇಮಿಸಿ

    ಚಿಕ್ಕಮಗಳೂರು: ದತ್ತಪೀಠದಲ್ಲಿ ಡಿ.29ರಂದು ನಡೆಯಲಿರುವ ದತ್ತಜಯಂತಿ ಉತ್ಸವದ ಒಳಗೆ ಗುಹಾಂತರ ದೇವಾಲಯದಲ್ಲಿ ಹಿಂದು ಅರ್ಚಕರ ನೇಮಕ ಹಾಗೂ ತ್ರಿಕಾಲ ಪೂಜೆಗೆ ಅವಕಾಶ ಕಲ್ಪಿಸಲು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಜಾಗರ ಹೋಬಳಿ ಸರ್ವೆ ನಂ195ರಲ್ಲಿ ಇನಾಂ ದತ್ತಾತ್ರೇಯ ಪೀಠ ಕ್ಷೇತ್ರದಲ್ಲಿರುವ ಶ್ರೀಗುರು ದತ್ತಾತ್ರೇಯರ ಪಾದುಕೆಯುಳ್ಳ ಗುಹಾಂತರ ದೇವಾಲಯ ಇತಿಹಾಸ ಪ್ರಸಿದ್ಧ ಹಾಗೂ ಪೌರಾಣಿಕ ಹಿನ್ನೆಲೆಯಿರುವ ಹಿಂದು ಸಮಾಜದ ಶ್ರದ್ಧಾಭಕ್ತಿ ಕೇಂದ್ರವಾಗಿದೆ. ಈ ದೇವಾಲಯ ಮುಜುರಾಯಿ ಇಲಾಖೆ ವ್ಯವಸ್ಥೆಗೆ ಒಳಪಟ್ಟು ಸರ್ಕಾರಿ ದಾಖಲೆಗಳಲ್ಲೂ ಗುರು ದತ್ತಾತ್ರೇಯ ಪೀಠವೆಂದು ಉಲ್ಲೇಖವಿದೆ. ಆದರೆ ಹಿಂದು ಪೂಜಾ ಪದ್ಧತಿ ಒಪ್ಪದ ಮುಜಾವರ್​ರನ್ನು ಗುಹಾಂತರ ದೇವಾಲಯದಲ್ಲಿ ನೇಮಿಸಿರುವುದು ಹಿಂದುಗಳ ಶ್ರದ್ಧೆ-ಭಕ್ತಿ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts