More

    ಮತಗಟ್ಟೆಗಳಿಗೆ ವರ್ಲಿ ಪೇಂಟಿಂಗ್

    ವಿಜಯವಾಣಿ ವಿಶೇಷ ಸಿಂಧನೂರು
    ಈ ಹಿಂದೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಾಲೆಗೆ ರೈಲು ಮಾದರಿಯ ಚಿತ್ರದ ಕೊಠಡಿ, ವಿವಿಧ ಚಿತ್ರಗಳನ್ನು ಬಿಡಿಸಿ ಆಕರ್ಷಿಸಲಾಗುತ್ತಿತ್ತು. ಈಗ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ಎಲ್ಲ ಶಾಲಾ ಮತಗಟ್ಟೆ ಕೇಂದ್ರಗಳಿಗೆ ವರ್ಲಿ ಪೇಂಟಿಂಗ್ ಮಾಡಿಸುತ್ತಿದ್ದು, ಮತದಾರರ ಗಮನ ಸೆಳೆಯುವಂತೆ ಸಿಂಗಾರಗೊಂಡಿವೆ.

    2,36,946 ಮತದಾರರು

    ತಾಲೂಕಿನಲ್ಲಿ 2,36,946 ಮತದಾರರಿದ್ದು, 1,15,810 ಪುರುಷ, 1,21,115 ಮಹಿಳಾ ಮತದಾರರು, 21 ಇತರೆ ಸೇರಿದ್ದಾರೆ. 269 ಬೂತ್‌ಗಳನ್ನು ಗುರುತಿಸಲಾಗಿದೆ. ಆ ಮತಗಟ್ಟೆಗಳಿಗೆ ಯಾವುದೇ ಪಕ್ಷದ ಚಿಹ್ನೆ, ಗುರುತು, ವ್ಯಕ್ತಿಯಾಧರಿತ ಚಿತ್ರಗಳನ್ನು ಬಿಡಿಸದೆ, ಮತಗಟ್ಟೆ ಚಿತ್ರ, ಮತದಾನ ಮಾಡುವ ಸಂದರ್ಭ ಅನುಸರಿಸಬೇಕಾದ ನಿಯಮ, ಮತದಾನ ಮಾಡುವುದರಿಂದ ಆಗುವ ಅನಕೂಲ, ಪರಿಸರ ಪ್ರಜ್ಞೆ, ನಮ್ಮ ಮತ-ದೇಶಕ್ಕೆ ಹಿತ, ಜಾನಪದ ಸೊಗಡಿನ ಚಿತ್ರಗಳು, ಮತಯಂತ್ರ, ನಿತ್ಯದ ಹಳ್ಳಿ ಬದುಕು, ಮತದಾನದಲ್ಲಿ ಕಡ್ಡಾಯವಾಗಿ ಮತ ಚಲಾಯಿಸಿ, ಅಭಿವೃದ್ಧಿಗೆ ಮುನ್ನಡಿ ಬರೆಯಿರಿ ಸೇರಿದಂತೆ ನಾನಾ ಬರಹಗಳನ್ನು ಚುನಾವಣೆ ಆಯೋಗ ನೀಡಿದ್ದು, ಅದನ್ನೇ ಚಿತ್ರ ಕಲಾವಿದರು ತಮ್ಮ ಕಲಾ ಕುಂಚದಲ್ಲಿ ಅರಳಿಸಿದ್ದಾರೆ.

    ಇದನ್ನೂ ಓದಿ: ತೆಲಂಗಾಣದ ಅಭಿವೃದ್ಧಿಗೆ ತೊಡಕಾಗಬೇಡಿ; ಕೆಸಿಆರ್​ಗೆ​ ಕುಟುಕಿದ ಪ್ರಧಾನಿ ಮೋದಿ

    ಕಲಾವಿದನ ಕೈಚಳಕ

    ಕಲಾವಿದನ ಕೈಚಳಕದಿಂದ ಅಂದಗೆಟ್ಟಿದ್ದ ಬಹುತೇಕ ಮತಗಟ್ಟೆ ಇರುವ ಶಾಲೆಗಳೆಲ್ಲ ಚೆಂದವಾಗಿ ಆಕರ್ಷಿಸುತ್ತಿವೆ. ಮತದಾನ ಮಾಡಲು ಎಲ್ಲರು ಬರಬೇಕು. ಅವರನ್ನು ಮತದಾನ ಕೇಂದ್ರಕ್ಕೆ ಬರುವಂತೆ ಪ್ರೇರೇಪಿಸುವ ಕೆಲಸವಾಗಬೇಕೆಂಬ ಹಿನ್ನೆಲೆಯಲ್ಲಿ ಈ ವರ್ಲಿ ಚಿತ್ರಗಳ ಅನಾವರಣಗೊಳಿಸಲಾಗಿದೆ. ಈಗಾಗಲೇ ಸಿಂಧನೂರು ತಾಲೂಕಿನ 269 ಮತದಾನ ಕೇಂದ್ರ ಪೈಕಿ 202 ಮತದಾನ ಕೇಂದ್ರಗಳಿಗೆ ವರ್ಲಿ ಪೇಂಟಿಂಗ್ ಮಾಡಲಾಗಿದ್ದು ಉಳಿದವು ಕೂಡ ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿವೆ.

    ತಾಲೂಕು ಆಡಳಿತ ಸೂಚನೆ ಮೇರೆಗೆ ಸಿಂಧನೂರು ವಿಧಾನಸಭೆ ಕ್ಷೇತ್ರದ 269 ಮತಗಟ್ಟೆ ಕೇಂದ್ರಗಳಿಗೆ ವರ್ಲಿ ಪೇಂಟಿಂಗ್ ಮಾಡಲಾಗುತ್ತಿದೆ. ಇನ್ನೂ 20 ಮತಗಟ್ಟೆ ಕೇಂದ್ರ ಬಾಕಿ ಇದ್ದು ಇನ್ನೊಂದು ಸಂಪೂರ್ಣವಾಗಲಿವೆ. ಮತದಾರರನ್ನು ಆಕರ್ಷಿಸುವಂತೆ 23 ಜನ ಚಿತ್ರ ಕಲಾವಿದರ ತಂಡ ಚಿತ್ರ ಬಿಡಿಸುವ ಕೆಲಸ ಮಾಡಿದೆ.
    ಶಿವನಂದ ಸಾತಿಹಾಳ, ಅಧ್ಯಕ್ಷ, ತಾಲೂಕು ಚಿತ್ರಕಲಾ ಸಂಘ, ಸಿಂಧನೂರು.

    ಸಿಂಧನೂರು ವಿಧಾನಸಭೆ ಕ್ಷೇತ್ರದಲ್ಲಿ 269 ಮತಗಟ್ಟೆ ಕೇಂದ್ರಗಳಲ್ಲಿ ಶೇ.80 ವರ್ಲಿ ಪೇಂಟಿಂಗ್ ಮುಗಿಸಲಾಗಿದೆ. ಶಾಲಾ ಅನುದಾನದಲ್ಲಿ ಒಂದು ಬೂತ್‌ಗೆ ಮಾತ್ರ ಪೇಂಟಿಂಗ್ ಮಾಡಲು ಹಣ ನೀಡಲಾಗಿದ್ದು, ಹೆಚ್ಚುವರಿ ಬೂತ್‌ಗೆ ತಾಲೂಕು ಆಡಳಿತ ಕ್ರಮವಹಿಸಿದೆ. ಸಿಇಒ ಆದೇಶ ಮೇರೆಗೆ ನಮ್ಮ ಚಿತ್ರ ಕಲಾವಿದರಿಂದ ಚಿತ್ರ ಬಿಡಿಸಲಾಗಿದ್ದು ಏ.18 ವರೆಗೆ ಪೇಂಟಿಂಗ್ ಮಾಡಲು ದಿನಾಂಕ ವಿಸ್ತರಿಸಲಾಗಿದೆ.
    ಶರಣಪ್ಪ ವಟಗಲ್, ಕ್ಷೇತ್ರ ಶಿಕ್ಷಣಾಧಿಕಾರಿ, ಸಿಂಧನೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts