More

    ಭಾರತದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತ್ಯಂತ ದೊಡ್ಡ ನ್ಯೂಕ್ಲಿಯರ್ ಪವರ್ ಪ್ಲಾಂಟ್

    ಮುಂಬೈ: ಭಾರತದಲ್ಲಿ ವಿಶ್ವದ ದೊಡ್ಡ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಿರ್ಮಾಣ  ಮಾಡುವ ಯೋಜನೆಗೆ ಫ್ರೆಂಚ್ ನ ಇಡಿಎಫ್ ಸಂಸ್ಥೆ ಮುನ್ನುಡಿ ಬರೆದಿದೆ. ಮಹಾರಾಷ್ಟ್ರದ ಜೈತಾಪುರದಲ್ಲಿ ಪವರ್ ಪ್ಲಾಂಟ್ ನಿರ್ಮಾಣವಾಗಲಿದೆ.

    ಜೈತಾಪುರದಲ್ಲಿ ಆರು ಥರ್ಡ್ ಜನರೇಷನ್ ಇಪಿಆರ್ ರಿಯಾಕ್ಟರ್ಗಳನ್ನು ನಿರ್ಮಿಸಲು ಇಡಿಎಫ್ ಸಂಸ್ಥೆ ಸಾಮಾಗ್ರಿಗಳನ್ನು ಮತ್ತು ಇಂಜಿನಿಯರಿಂಗ್ ಸಹಾಯ ಮಾಡಲಿದೆ. ಮುಂದಿನ 15ವರ್ಷಗಳಲ್ಲಿ ಪವರ್ ಪ್ಲಾಂಟ್ ಕಾಮಗಾರಿ ಮುಗಿಯಲಿದೆ. ಈ ಪವರ್ ಪ್ಲಾಂಟ್ನಿಂದ ಒಟ್ಟು 7 ಕೋಟಿ ಜನಸಂಖ್ಯೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದು. ಸಂಪೂರ್ಣ ಕಾಮಗಾರಿ ಮುಗಿಯುವುದಕ್ಕೆ ಮುನ್ನವೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುವುದು.

    ಸುಮಾರು 20 ವರ್ಷಗಳ ಹಿಂದಿನ ಯೋಜನೆಗೆ ರಾಜ್ಯ ಸರ್ಕಾರದಿಂದ ವಿರೋಧವಿದ್ದ ಕಾರಣ 2011ರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಅದರ ಪ್ರಗತಿ ಕಂಡುಬರುತ್ತಿದೆ. ಕಾಮಗಾರಿಯಲ್ಲಿ 25 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಹಾಗೆಯೇ 2700 ಜನರಿಗೆ ಪರ್ಮನೆಂಟ್ ಕೆಲಸ ಸಿಗಲಿದೆ ಎನ್ನಲಾಗಿದೆ.

    ಯೋಜನೆಯ ಸಂಪೂರ್ಣ ಒಪ್ಪಂದದ ಕಾಮಗಾರಿಯನ್ನು ಮುಂಬರುವ ತಿಂಗಳುಗಳಲ್ಲಿ ಮಾಡಲಾಗುವುದು. ಕಾಮಗಾರಿಗೆ ಆಗುವ ಖರ್ಚಿನ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. (ಏಜೆನ್ಸೀಸ್)

    ಬಿಗ್​ಬಾಸ್​ ಮನೆಯಲ್ಲಿ ಈ ಇಬ್ಬರು ಸಕತ್​ ಸ್ಟ್ರಾಟರ್ಜಿ ಮಾಡ್ತಾರೆ ಅಂದ ವಿಶ್ವನಾಥ

    ಆನ್​ಲೈನ್​ನಲ್ಲಿ ಮದ್ಯ ಆರ್ಡರ್​ ಮಾಡಿ 44 ಸಾವಿರ ಕಳೆದುಕೊಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts