More

    ಆನ್​ಲೈನ್​ನಲ್ಲಿ ಮದ್ಯ ಆರ್ಡರ್​ ಮಾಡಿ 44 ಸಾವಿರ ಕಳೆದುಕೊಂಡ!

    ಬೆಂಗಳೂರು: ಕರೊನಾ ಸೋಂಕು ಭೀತಿಯಿಂದ ನಾಗರಿಕರು ದಿನ ಬಳಕೆ ವಸ್ತುಗಳನ್ನು ಆನ್​ಲೈನ್​ನಲ್ಲಿ ಬುಕ್​ ಮಾಡಿ ಮನೆಗೆ ತರಿಸಿಕೊಳ್ಳಲು ಮುಂದಾಗಿದ್ದಾರೆ. ಇದನ್ನೇ ಲಾಭ ಮಾಡಿಕೊಂಡ ಸೈಬರ್​ ಕಳ್ಳರು, ಗ್ರಾಹಕರನ್ನು ಯಾಮಾರಿಸಿ ಸಾವಿರಾರು ರೂಪಾಯಿ ವಂಚನೆ ಮಾಡುತ್ತಿದ್ದಾರೆ. ಇಲ್ಲೊಬ್ಬರು ಆನ್​ಲೈನ್​ನಲ್ಲಿ ಮದ್ಯದ ಬಾಟಲ್​ ಆರ್ಡರ್​ ಮಾಡಿದ್ದು, ಮುಂಗಡವಾಗಿ ಹಣ ಪಾವತಿ ಮಾಡಬೇಕೆಂದು ಹಂತ ಹಂತವಾಗಿ 44 ಸಾವಿರ ರೂ. ಕಳೆದುಕೊಂಡಿದ್ದಾರೆ.

    ಎಲೆಕ್ಟ್ರಾನಿಕ್​ ಸಿಟಿಯ ರಾಜಷಿರ್ ಜೈನ್​ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಆರೋಪಿ ಅಮನ್​ ದೀಪ್​ ಎಂಬಾತನ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಆಗ್ನೇಯ ವಿಭಾಗದ ಸಿಇಎನ್​ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಕರೊನಾ ಭೀತಿಯಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದ ರಾಜಷಿರ್ ಜೈನ್​, ಆನ್​ಲೈನ್​ ಸರ್ಚ್​ ಮಾಡುತ್ತಿದ್ದಾಗ ಮದ್ಯದ ಬಾಟಲ್​ನ್ನು ಮನೆಗೆ ತಲುಪಿಸುವುದಾಗಿ ಅಮನ್​ ದೀಪ್​ ಜಾಹೀರಾತು ನೀಡಿದ್ದ. ಇದನ್ನು ಗಮನಿಸಿದ ರಾಜಷಿರ್ ಜೈನ್​, ಆರ್ಡರ್​ ಮಾಡಿದ್ದರು. ಅದಕ್ಕೆ ಅಮನ್​ ದೀಪ್​, ಮುಂಗಡ ಹಣ ಪಾವತಿ ಮಾಡಬೇಕೆಂದು ಹಂತ ಹಂತವಾಗಿ 44,700 ರೂ. ಪಾವತಿ ಮಾಡಿಸಿಕೊಂಡಿದ್ದಾನೆ. ಮತ್ತೆ ಹಣ ಕೇಳಿದಾಗ ಅನುಮಾನ ಬಂದು ರಾಜಷಿರ್ ಜೈನ್​, ವಾಪಸ್​ ಹಣ ಕೇಳಿದ್ದಾರೆ. ಅಷ್ಟೊತ್ತಿಗೆ ಆರೋಪಿ ಮೊಬೈಲ್​ ನಂಬರ್​ ಸ್ವಿಚ್​ ಆಫ್​​ ಮಾಡಿಕೊಂಡಿದ್ದಾನೆ. ಕೊನೆಗೆ ವಂಚನೆಗೆ ಒಳಗಾಗಿರುವುದು ಖಚಿತವಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ಸಹ ಕರೊನಾ ಕ್ಯೂರ್ ಮತ್ತು ನಿಷೇಧಾಜ್ಞೆಯಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದರೇ ಅಂತವರು ಆನ್​ಲೈನ್​ ಶಾಪಿಂಗ್​ ಮಾಡುವಾಗ ಎಚ್ಚರಿಕೆ ವಹಿಸಿ. ಅಧಿಕೃತ ಆನ್​ಲೈನ್​ ಕಂಪನಿಗಳ ವೆಬ್​ಸೈಟ್​ಗಳನ್ನೇ ಬಳಸಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

    1 ರೂಪಾಯಿಗೆ ಆಕ್ಸಿಜನ್​ ಸಿಲಿಂಡರ್​! ಸಮಾಜ ಸೇವೆಗೆ ನಿಂತ ಉದ್ಯಮಿಯ ಹಿಂದಿದೆ ನೋವಿನ ಕಥೆ

    ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕರೊನಾ ಪ್ರಕರಣಗಳಿರುವುದು ಬೆಂಗಳೂರಿನಲ್ಲೇ! ನರಕವಾಗುತ್ತಿರುವ ಸಿಲಿಕಾನ್​ ಸಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts