More

    ವಿಶ್ವ ವನ್ಯಜೀವಿ ದಿನ: ಸಂರಕ್ಷಣೆಯಲ್ಲಿ ಸ್ಥಳೀಯರ ಪಾತ್ರ

    ವಿಶ್ವ ವನ್ಯಜೀವಿ ದಿನವನ್ನು ಇಂದು ಎಲ್ಲೆಡೆ ಆಚರಿಸಲಾಗುತ್ತಿದೆ. ‘ವನ್ಯಜೀವಿ ಸಂರಕ್ಷಣೆಗೆ ಪಾಲುದಾರಿಕೆ’ ಎಂಬುದು ಈ ಬಾರಿಯ ಘೋಷವಾಕ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೇಗೆ ಕೊಡುಗೆ ನೀಡಬಹುದು ಎಂಬುದರತ್ತ ಗಮನ ಸೆಳೆಯುವ ಅಭಿಪ್ರಾಯಗಳನ್ನು ತಜ್ಞರೊಬ್ಬರು ಇಲ್ಲಿ ಹಂಚಿಕೊಂಡಿದ್ದಾರೆ.

    | ಸುನೀಲ್ ಬಾರ್ಕೂರ್​, ಪಕ್ಷಿತಜ್ಞ

    Sunil Barkurಕಳೆದ ವರ್ಷ ಏಪ್ರಿಲ್ ತಿಂಗಳ ಕೊನೆಯ ಶನಿವಾರ ಕುಂದಾಪುರದ ಕೋಡಿ ತೀರದಲ್ಲಿ ಜನರ ದೊಡ್ಡ ಗುಂಪು ಸೇರಿತ್ತು. ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೂ ಆಸಕ್ತಿಯಿಂದ ಭಾಗವಹಿಸಿ ಸ್ಥಳೀಯರನ್ನು ಹುರಿದುಂಬಿಸುತ್ತ ಅವರ ಜೊತೆ ಆ ಕಡಲ ತೀರವನ್ನು ಸ್ವಚ್ಛಗೊಳಿಸುತ್ತಿದ್ದರು. ಅಷ್ಟಕ್ಕೂ ಅವರೆಲ್ಲ ಅಲ್ಲಿ ಸೇರುವುದಕ್ಕೆ ಕಾರಣ ‘ಆಮೆ ಹಬ್ಬ’. ಕಡಲ ತೀರ ಮಾನವನ ಚಟುವಟಿಕೆಗಳಿಂದ ಕಲುಷಿತವಾಗಿ ಅಲ್ಲಿಗೆ ಮೊಟ್ಟೆಯಿಡಲು ಬರುತ್ತಿದ್ದ ಆಲೀವ್ ರಿಡ್ಲೇ ಆಮೆಗಳು ಕಾಲುಕೀಳುತ್ತಿರುವುದನ್ನು ಜನರಿಗೆ ವಿವರಿಸಿ ಅಮೆಗಳ ಕುರಿತು ಜಾಗೃತಿ ಮೂಡಿಸಲು ನಡೆಸಿದ್ದ ವಿನೂತನ ಪ್ರಯತ್ನವದು. ಇಂಥದೇ ಪ್ರಯತ್ನಗಳು ಕರ್ನಾಟಕದ ಕರಾವಳಿ ತೀರದ ಕಾರವಾರ, ಅಂಕೋಲೆಯಲ್ಲಿಯೂ ನಡೆದು ಈ ಆಮೆಗಳನ್ನು ಕಂಡು ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದವರಿಗೆ ಬಹುಮಾನ ಕೊಟ್ಟು ಹುರಿದುಂಬಿಸಿ, ಆಮೆಗಳು ಮೊಟ್ಟೆಯಿಟ್ಟ ನಂತರ ಅದರ ಸುತ್ತಲೂ ಬೇಲಿ ಹಾಕಿ ಮರಿಗಳು ಬರುವವರೆಗೂ ನಿಗಾ ಇಡುವಂತಹ ಕಾರ್ಯಕ್ರಮಗಳನ್ನು ರೂಪಿಸಿದ ಪರಿಣಾಮ ಇಂದು ಈ ಆಮೆಗಳು ಮತ್ತೆ ನಮ್ಮ ಪಶ್ಚಿಮದ ಕಡಲ ತೀರಗಳನ್ನು ಹುಡುಕಿಕೊಂಡು ಬರುತ್ತಿವೆ.

    ಇದನ್ನೂ ಓದಿ: ಫುಟ್​​​ಬಾಲ್​ ತಂಡದ ಮುಖ್ಯಸ್ಥೆ ಜತೆ ಇಂಗ್ಲೆಂಡ್ ಮಹಿಳಾ ತಂಡದ​ ಸ್ಟಾರ್​ ಕ್ರಿಕೆಟರ್ ನಿಶ್ಚಿತಾರ್ಥ!

    ರಾಮ್ಕಿ ಶ್ರೀನಿವಾಸನ್ ಬೆಂಗಳೂರು ಮೂಲದ ಟೆಕ್ಕಿ. ಕಾಲೇಜು ಮುಗಿಸಿ ಗೆಳೆಯರೊಂದಿಗೆ ಸ್ಟಾರ್ಟಪ್ ಆರಂಭಿಸಿ ಯಶಸ್ವಿ ಉದ್ಯಮಿಯೂ ಆದ ಅವರಿಗೆ ಹವ್ಯಾಸವಾದ ಪಕ್ಷಿವೀಕ್ಷಣೆಯ ಸೆಳೆತ ಜಾಸ್ತಿಯಾಗುತ್ತಿದ್ದಂತೆಯೇ ಉದ್ಯಮವನ್ನು ತ್ಯಜಿಸಿ ಸಂಪೂರ್ಣವಾಗಿ ಹವ್ಯಾಸವನ್ನೇ ಅಪ್ಪಿಕೊಂಡರು. ಪಕ್ಷಿಗಳ ಮೇಲೆ ಮಾನವನ ದಬ್ಬಾಳಿಕೆಯ ಬಗ್ಗೆ ಹೆಚ್ಚೆಚ್ಚು ತಿಳಿಯುತ್ತ ಹೋದಂತೆ ತಾನೂ ಅವುಗಳ ನೆರವಿಗೆ ಬರಬೇಕೆಂಬ ತುಡಿತ ಜಾಸ್ತಿಯಾಯಿತು. ಇದರ ಪರಿಣಾಮವೇ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ‘ಕನ್ಸರ್ವೆಷನ್ ಇಂಡಿಯಾ’ ಎಂಬ ಸಂಸ್ಥೆ ಸ್ಥಾಪಿಸಿದರು. ಪಕ್ಷಿಗಳ ಗಣತಿ, ಅವುಗಳ ಕುರಿತು ಜಾಗೃತಿ ಮೂಡಿಸಲೆಂದೇ ಸ್ಥಾಪಿತವಾದ ಸಂಸ್ಥೆಯದು. 2011 ರಲ್ಲಿ ನಾಗಾಲ್ಯಾಂಡಿನಲ್ಲಿ ಅವರ ತಂಡ ವನ್ಯಜೀವಿ ಗಣತಿಯೊಂದರಲ್ಲಿ ಪಾಲ್ಗೊಂಡಿದ್ದಾಗ, ಸ್ಥಳೀಯರು ಚಳಿಗಾಲಕ್ಕೆ ರಾಜ್ಯಕ್ಕೆ ವಲಸೆ ಬರುತ್ತಿದ್ದ ಕೆಂಪು ಕಾಲಿನ ಚಾಣ ಪಕ್ಷಿಯ ಹತ್ಯೆ ನಡೆಸುತ್ತಿದ್ದುದು ಅವರ ಗಮನಕ್ಕೆ ಬಂತು. ಇದರ ಮುಂದಿನ ವರ್ಷ ಮತ್ತೆ ಆ ರಾಜ್ಯದ ದೊಯಾಂಗ್ ಜಲಾಶಯಕ್ಕೆ ಭೇಟಿ ನೀಡಿದ ಆ ತಂಡ ಆ ಪಕ್ಷಿಯ ಹತ್ಯಾಕಾಂಡ ಮುಂದುವರಿದುದನ್ನು ನೋಡಿ ಅದರ ವಿರುದ್ಧ ದೊಡ್ಡ ಅಭಿಯಾನವನ್ನೇ ಆರಂಭಿಸಿದರು. ರಾಮ್ಕಿ ತಂಡವು ಗಮನಿಸಿದಂತೆ ಪ್ರತಿವರ್ಷ ನಾಗಾಲ್ಯಾಂಡಿನಲ್ಲಿ 1.40 ಲಕ್ಷ ಚಾಣಗಳ ಹತ್ಯೆಯಾಗುತ್ತಿತ್ತು. ಇದನ್ನು ಪುರಾವೆ ಸಮೇತ ಸಾಬೀತು ಪಡಿಸಿ ಸ್ಥಳೀಯ ಆಡಳಿತದ ಮೇಲೆ ಒತ್ತಡ ತಂದ ಪರಿಣಾಮ 2012 ರಲ್ಲಿ ನಾಗಾಲ್ಯಾಂಡಿನಲ್ಲಿ ಕೆಂಪು ಕಾಲಿನ ಚಾಣಗಳ ಹತ್ಯೆಯನ್ನು ನಿಷೇಧಿಸಲಾಯಿತು. ಅಷ್ಟಕ್ಕೇ ಸುಮ್ಮನಾಗದ ತಂಡ ಈ ಕೃತ್ಯದ ಪ್ರಮುಖ ಪಾಲುದಾರರಾಗಿದ್ದ ಅಲ್ಲಿನ ಮೀನುಗಾರ ಕುಟುಂಬಗಳಿಗೆ ಹಕ್ಕಿಗಳ ಹತ್ಯೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಹೇಳಿತು. ಅವರ ಮಕ್ಕಳು ಓದುತ್ತಿದ್ದ ಶಾಲೆಗಳಲ್ಲಿ ಈ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಾಯಿತು. ಇವೆಲ್ಲದರ ಪರಿಣಾಮ ಹತ್ಯೆ ಮಾಡುತ್ತಿದ್ದ ಕೈಗಳೇ ಆ ಪಕ್ಷಿಗಳ ರಕ್ಷಣೆಗೆ ಮುಂದಾದವು. ಈಗ ಅಲ್ಲಿ ಚಾಣಗಳ ಹತ್ಯೆ ಸಂಪೂರ್ಣವೆನ್ನುವಷ್ಟರ ಮಟ್ಟಿಗೆ ನಿಂತಿದೆ. ಈ ಯಶಸ್ಸಿನ ರೂವಾರಿ ರಾಮ್ಕಿ ಕಳೆದ ಡಿಸೆಂಬರ್​ನಲ್ಲಿ ಇಹಲೋಕ ತ್ಯಜಿಸಿದರೂ ಅವರು ಹೇಳಿಕೊಟ್ಟ ಪಾಠವನ್ನು ನಾಗಾಲ್ಯಾಂಡಿನ ಜನತೆ ನೆನಪಿನಲ್ಲಿಟ್ಟುಕೊಂಡಿದೆ.

    ವನ್ಯಜೀವಿ ಸಂರಕ್ಷಣೆಯ ದಾರಿಯಲ್ಲಿ ಸ್ಥಳಿಯರನ್ನು ಒಗ್ಗೂಡಿಸಿ ಹೋದರಷ್ಟೇ ಯಶಸ್ಸು ಸಾಧ್ಯವೆನ್ನಲು ಈ ಉದಾಹರಣೆಗಳೇ ಸಾಕು. ಅದಿಲ್ಲವಾದಲ್ಲಿ ಅದು ಅಪ್ಪಟ ಸರ್ಕಾರಿ ಕಾರ್ಯಕ್ರಮವಾಗಿ ಆ ದಿನ ಸೆಲ್ಪಿ ತೆಗೆದುಕೊಳ್ಳುವವರ ಸಂಭ್ರಮಕ್ಕೆ ಸೀಮಿತವಾಗಬಹುದು.

    ಪಾಬ್ಲೊ ಎಸ್ಕೋಬಾರ್ ಮನೆ ಪಕ್ಕದಲ್ಲಿದ್ದ ಹಿಪ್ಪೊಗಳು ಭಾರತಕ್ಕೆ?!

    ಪ್ರಶಾಂತ್ ಮಾಡಾಳ್​ ಬಂಧನ: ಇದಕ್ಕೇ ನಾವು ಲೋಕಾಯುಕ್ತ ಪುನರ್​ಸ್ಥಾಪಿಸಿದ್ದು ಎಂದ ಸಿಎಂ

    ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts