More

    ವನ್ಯಜೀವಿ ರಕ್ಷಣೆಯಲ್ಲಿ ವನಿತೆಯರು: ಸಂಘರ್ಷ ಕೇಂದ್ರದ ಮೂಲಕ ಜೀವಿಗಳ ಸಂರಕ್ಷಣೆ ಮಾಡುತ್ತಿರುವ ಶಿವರಾಮ್​ ಕಾರಂತರ ಮೊಮ್ಮಗಳು

    ಇಂದು ವಿಶ್ವ ವನ್ಯಜೀವಿ ದಿನ

    ಕಿಡಿಗೇಡಿಗಳಿಂದಾಗಿ ಕಾಡುಗಳೆಲ್ಲ ಇಂದು ಬೆಂಕಿಗಾಹುತಿಯಾಗುತ್ತಿವೆ. ಇದರಿಂದಾಗಿ ಅಳಿದುಳಿದ ವನ್ಯಜೀವಿಗಳ ರಕ್ಷಣೆಗೂ ಹರಸಾಹಸ ಪಡುವಂಥ ಸ್ಥಿತಿ ಇದೆ. ಇದರ ನಡುವೆಯೂ, ಅವುಗಳ ಉಳಿವಿಗಾಗಿ ಹಲವರು ದುಡಿಯುತ್ತಿದ್ದಾರೆ. ಅವರಲ್ಲಿ ಶಿವರಾಮ್​ ಕಾರಂತರ ಮೊಮ್ಮಗಳು ಕೃತಿ ಕಾರಂತ ಕೂಡ ಒಬ್ಬರು. 

    ಶಿವರಾಮ್ ಕಾರಂತ ಅವರ ಮೊಮ್ಮಗಳೂ, ಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಅವರ ಮಗಳೂ ಆಗಿರುವ ಕೃತಿ ಕಾರಂತ್, ವನ್ಯಜೀವಿಗಳ ರಕ್ಷಣೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ತಂದೆ, ಅಜ್ಜನಂತೆಯೇ ಪರಿಸರ ಕ್ಷೇತ್ರವನ್ನೇ ಅಧ್ಯಯನ ವಿಷಯವನ್ನಾಗಿ ಆರಿಸಿಕೊಂಡು ಫ್ಲೊರಿಡಾ ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನದಲ್ಲಿ ಪದವಿ, ಯೇಲ್ ವಿವಿಯಿಂದ ಸ್ನಾತಕೋತ್ತರ ಪದವಿ ಹಾಗೂ ಡ್ಯೂಕ್ ವಿವಿಯಿಂದ ಪರಿಸರ ವಿಜ್ಞಾನದಲ್ಲಿ ಪಿಎಚ್​ಡಿ ಪಡೆದರು.

    ವನ್ಯಜೀವಿಗಳ ಅಧ್ಯಯನದಲ್ಲಿ ಅವರು ತೊಡಗಿಸಿಕೊಂಡಾಗ ಅವರಿಗೆ ತಿಳಿದುಬಂದದ್ದು, ಅರಣ್ಯ ಪ್ರದೇಶಗಳ ಒತ್ತುವರಿಯ ಕುರಿತು. ಇದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿರುವುದು ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಈ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾದರು. ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳಲ್ಲಿ ಈ ಸಮಸ್ಯೆ ಹೆಚ್ಚಾಗಿರುವುದು ಅವರ ಅರಿವಿಗೆ ಬಂದು ಅದನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡರು.

    ಈ ನಿಟ್ಟಿನಲ್ಲಿ 2015ರಲ್ಲಿ ‘ವೈಲ್ಡ್ ಸೇವೆ’ಯನ್ನು ಪ್ರಾರಂಭಿಸಿದರು. ಅದರ ಭಾಗವಾಗಿ ಈಗ ಬಂಡಿಪುರ ಮತ್ತು ನಾಗರಹೊಳೆ ಅಭಯಾರಣ್ಯ ಭಾಗದಲ್ಲಿ ವನ್ಯಜೀವಿ-ಮಾನವ ನಡುವಿನ ಸಂಘರ್ಷ ಕೇಂದ್ರವನ್ನು ಸುಮಾರು 600 ಗ್ರಾಮಗಳಲ್ಲಿ ಪ್ರಾರಂಭಿಸಿದ್ದಾರೆ. ಈಗ ಅದನ್ನು ಅವರು 1000 ಗ್ರಾಮಗಳಿಗೆ ವಿಸ್ತರಿಸುವ ಗುರಿಯನ್ನು ಹಮ್ಮಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts