More

    ವನ್ಯಜೀವಿ ರಕ್ಷಣೆಯಲ್ಲಿ ವನಿತೆಯರು: ಕಾಡುಪ್ರಾಣಿಗಳನ್ನು ಹೀಗೂ ಸಂರಕ್ಷಿಸಬಹುದು ಎಂದು ತೋರಿಸಿಕೊಟ್ಟವರು…!

    ಇಂದು ವಿಶ್ವ ವನ್ಯಜೀವಿ ದಿನ

    ಕಿಡಿಗೇಡಿಗಳಿಂದಾಗಿ ಕಾಡುಗಳೆಲ್ಲ ಇಂದು ಬೆಂಕಿಗಾಹುತಿಯಾಗುತ್ತಿವೆ. ಇದರಿಂದಾಗಿ ಅಳಿದುಳಿದ ವನ್ಯಜೀವಿಗಳ ರಕ್ಷಣೆಗೂ ಹರಸಾಹಸ ಪಡುವಂಥ ಸ್ಥಿತಿ ಇದೆ. ಇದರ ನಡುವೆಯೂ, ಅವುಗಳ ಉಳಿವಿಗಾಗಿ ಹಲವರು ದುಡಿಯುತ್ತಿದ್ದಾರೆ.  ಅವರಲ್ಲಿ ಸುನೀತಾ ಧೈರ್ಯಂ ಅವರು ವಿಭಿನ್ನ ಮಾರ್ಗಗಳ ಮೂಲಕ ವನ್ಯಜೀವಿಗಳ ಪ್ರಾಣವನ್ನು ಉಳಿಸುತ್ತಿದ್ದಾರೆ. 

    ಚಾಮರಾಜನಗರದ ಗುಂಡ್ಲುಪೇಟೆಯಲ್ಲಿನ ಮಂಗಲಾ ಎಂಬ ಗ್ರಾಮದಲ್ಲಿ ‘ಮರಿಯಮ್ಮ ಚಾರಿಟೇಬಲ್ ಟ್ರಸ್ಟ್’ ತೆರೆಯುವ ಮೂಲಕ ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವವರು ಸುನೀತಾ ಧೈರ್ಯಂ.

    ಬಂಡೀಪುರ ಅಭಯಾರಣ್ಯದಲ್ಲಿನ ವನ್ಯಮೃಗಗಳ ಸಂರಕ್ಷಣೆಯಲ್ಲಿ ಇವರು ಅನೇಕ ವರ್ಷಗಳಿಂದ ತೊಡಗಿಕೊಂಡಿದ್ದಾರೆ. ವನ್ಯಜೀವಿಗಳ ಪ್ರಾಣವನ್ನು ಕಾಪಾಡಲು ಇವರು ವಿಭಿನ್ನವಾಗಿ ಕಾರ್ಯರೂಪಕ್ಕಿಳಿದಿದ್ದಾರೆ. ಅದೇನೆಂದರೆ ವನ್ಯಮೃಗಗಳಿಂದ ಯಾರಾದರೂ ದಾಳಿಗೊಳದಾದರೆ ಕೂಡಲೇ ಅವರಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸುವುದು ಹಾಗೂ ದಾಳಿಗೊಳಗಾದವರು ಮೃತರಾದರೆ ಅವರ ಕುಟುಂಬಕ್ಕೆ ಕೂಡಲೇ ಪರಿಹಾರ ಒದಗಿಸುವುದು. ಇದಕ್ಕೆ ಕಾರಣವೆಂದರೆ, ದಾಳಿಗೊಳಗಾದ ಕೂಡಲೇ ಸಿಟ್ಟಿನಿಂದ ಜನರು ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಉಂಟು ಮಾಡುವ ಸಾಧ್ಯತೆ ಇದೆ.

    ಆದ್ದರಿಂದ ಪರೋಕ್ಷವಾಗಿ ಅವರು ಈ ರೀತಿ ಪ್ರಾಣಿಗಳಿಗೆ ನೆರವಾಗುತ್ತಿದ್ದಾರೆ. ಇದಕ್ಕಾಗಿ ವೈದ್ಯಕೀಯ ದತ್ತಿಗಳ ಜತೆ ಅವರು ಕೆಲಸ ಮಾಡುತ್ತಿದ್ದಾರೆ. ನಾಯಿಗಳಿಂದ ರೇಬೀಸ್ ರೋಗ ಹರಡದಂತೆ, ಅವುಗಳಿಗೆ ರೋಗ ನಿರೋಧಕ ಲಸಿಕೆ ಹಾಕುತ್ತಿರುವಲ್ಲಿ ಇವರದ್ದು ಪ್ರಮುಖ ಪಾತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts