More

    ವನ್ಯಜೀವಿ ರಕ್ಷಣೆಯಲ್ಲಿ ವನಿತೆಯರು: ಲಂಟಾನಾ ನಿರ್ಮೂಲನೆಯತ್ತ ಆಯೇಷಾ

    ಇಂದು ವಿಶ್ವ ವನ್ಯಜೀವಿ ದಿನ

    ಕಿಡಿಗೇಡಿಗಳಿಂದಾಗಿ ಕಾಡುಗಳೆಲ್ಲ ಇಂದು ಬೆಂಕಿಗಾಹುತಿಯಾಗುತ್ತಿವೆ. ಇದರಿಂದಾಗಿ ಅಳಿದುಳಿದ ವನ್ಯಜೀವಿಗಳ ರಕ್ಷಣೆಗೂ ಹರಸಾಹಸ ಪಡುವಂಥ ಸ್ಥಿತಿ ಇದೆ. ಇದರ ನಡುವೆಯೂ, ಅವುಗಳ ಉಳಿವಿಗಾಗಿ ಹಲವರು ದುಡಿಯುತ್ತಿದ್ದಾರೆ. ಅವರಲ್ಲಿ ಆಯೇಷಾ ಪ್ರಸಾದ್ ಕೂಡ ಒಬ್ಬರು. 

    ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಬೆಳೆಯುತ್ತಿರುವ ಲಂಟಾನಾನಿಂದ (ಚದರಂಗಿ ಗಿಡ) ವನ್ಯಮೃಗಗಳಿಗೆ ಆಗುತ್ತಿರುವ ಆಪತ್ತುಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ ಆಯೇಷಾ ಪ್ರಸಾದ್.

    ಅರಣ್ಯ ಪರಿಸರ ವಿಜ್ಞಾನಿಯಾಗಿರುವ ಆಯೇಷಾ ನೀಲಗಿರಿ ಕಾಡುಗಳಲ್ಲಿ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಅವರ ಅಧ್ಯಯನದ ವೇಳೆ, ವನ್ಯಜೀವಿಗಳ ರಕ್ಷಣೆಗೆ ಅಡ್ಡಿಯಾಗುತ್ತಿರುವ ಹಲವಾರು ಅಂಶಗಳ ಪೈಕಿ ಲಂಟಾನಾದಿಂದ ಆಗುತ್ತಿರುವ ತೊಂದರೆಯ ಅರಿವಾಯಿತು. ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು, ಅವರು ವಿಜ್ಞಾನವನ್ನು ಆಧರಿಸಿದ ನಿರ್ವಹಣಾ ಪ್ರೊಟೋಕಾಲ್ ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

    ಅಲ್ಪ ಕಾಲದಲ್ಲಿಯೇ ವಿಪರೀತವಾಗಿ ಬೆಳೆಯುವ ಲಂಟಾನಾವನ್ನು ಸಂಪೂರ್ಣವಾಗಿ ನಾಶಪಡಿಸುವ ಬದಲು ಅದರಿಂದಲೇ ಇಂಧನವನ್ನು ತಯಾರಿಸುವ ಬಗ್ಗೆಯೂ ಇವರು ಕಾರ್ಯಶೀಲರಾಗಿದ್ದಾರೆ. ಇದರಿಂದಾಗಿ ವನ್ಯಮೃಗಗಳ ರಕ್ಷಣೆಯ ಜತೆಜತೆಗೇ ಕಾಡು ವಾಸಿಗಳ ಜೀವನೋಪಾಯಕ್ಕೆ ಉದ್ಯೋಗವನ್ನೂ ದೊರಕಿಸಿಕೊಡುವ ಯೋಚನೆ ಅವರದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts