More

    ವನ್ಯಜೀವಿ ರಕ್ಷಣೆಯಲ್ಲಿ ವನಿತೆಯರು; ಆನೆಗಳ ಒಡತಿ ಪ್ರಜ್ಞಾ

    ಇಂದು ವಿಶ್ವ ವನ್ಯಜೀವಿ ದಿನ

    ಕಿಡಿಗೇಡಿಗಳಿಂದಾಗಿ ಕಾಡುಗಳೆಲ್ಲ ಇಂದು ಬೆಂಕಿಗಾಹುತಿಯಾಗುತ್ತಿವೆ. ಇದರಿಂದಾಗಿ ಅಳಿದುಳಿದ ವನ್ಯಜೀವಿಗಳ ರಕ್ಷಣೆಗೂ ಹರಸಾಹಸ ಪಡುವಂಥ ಸ್ಥಿತಿ ಇದೆ. ಇದರ ನಡುವೆಯೂ, ಅವುಗಳ ಉಳಿವಿಗಾಗಿ ಹಲವರು ದುಡಿಯುತ್ತಿದ್ದಾರೆ.  ಅವರಲ್ಲಿ ಆನೆಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಪ್ರಜ್ಞಾ ಅವರ ಬಗ್ಗೆ ಒಂದಷ್ಟು ಮಾಹಿತಿ…

    ಓದಿದ್ದು ಲಂಡನ್​ನಲ್ಲಿ. ಆದರೆ ಎರಡು ದಶಕಗಳಿಂದ ವಾಸವಿರುವುದು ಕೊಡಗಿನ ಕಾಡಿನ ನಡುವೆ. ಇವರ ಸುತ್ತಲೂ ಆನೆಗಳ ಓಡಾಟ. ಇಂಥ ಒಬ್ಬ ಅಪರೂಪದ ವನ್ಯಜೀವಿ ತಜ್ಞೆ ಪ್ರಜ್ಞಾ ಚೌಟ. ಕೊಡಗು ಜಿಲ್ಲೆಯಲ್ಲಿರುವ ಪ್ರವಾಸಿ ಕೇಂದ್ರ, ಸಾಕಾನೆಗಳ ಬೀಡು ಎಂದೆನಿಸಿರುವ ದುಬಾರೆಯ ‘ಆನೆಮನೆ’ಯ ಒಡತಿ ಇವರು.

    ಸದ್ಯ ಏಳು ಸಾಕಾನೆಗಳ ಮಾತೆ. ಆದಿವಾಸಿಗಳ ಸಂಸ್ಕೃತಿಯ ಕುರಿತು ಮೊದಲಿನಿಂದಲೂ ಆಕರ್ಷಿತರಾಗಿದ್ದ ಪ್ರಜ್ಞಾ ಕರ್ನಾಟಕ ಮಾತ್ರವಲ್ಲದೇ, ಬಿಹಾರ, ಅಸ್ಸಾಂ, ಕೇರಳಗಳ ಕಾಡುಗಳಲ್ಲಿ ಅಧ್ಯಯನ ಕೈಗೊಂಡರು. ಖಾಸಗಿ ಒಡೆತನದವರು ಲಾಭಕ್ಕಾಗಿ ಆನೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಕಣ್ಣಾರೆ ಕಂಡ ಇವರು, ಅಂದೇ ಅವುಗಳ ರಕ್ಷಣೆಗೆ ಪಣತೊಟ್ಟರು. ಇದಕ್ಕಾಗಿ 2002ರಲ್ಲಿ ‘ಆನೆಮನೆ ಫೌಂಡೇಷನ್’ ಸ್ಥಾಪಿಸಿದರು. ದೇಶ- ವಿದೇಶಗಳಲ್ಲಿ ಸಂಚರಿಸಿ ಆನೆಗಳ ಅಧ್ಯಯನ ನಡೆಸಿದರು. ನಂತರ ಆನೆ ಸಾಕಲು ಸರ್ಕಾರದ ಅನುಮತಿ ಪಡೆದು, ದುಬಾರೆಯ ದಟ್ಟ ಅರಣ್ಯದ ಮಧ್ಯೆಯೇ ಎರಡು ಎಕರೆ ಭೂಮಿ ಖರೀದಿಸಿ, ಅಲ್ಲಿ ಆನೆಮನೆ ನಿರ್ವಿುಸಿದರು. ಇವರಿಗೆ ಸಾಥ್ ಆದವರು ಅವರದ್ದೇ ಮನಸ್ಥಿತಿಯುಳ್ಳ, ಅವರ ಪತಿ ಫ್ರೆಂಚ್ ಚಿತ್ರ ನಿರ್ವಪಕ ಫಿಲಿಪ್ ಗೌಟಿಯಾರ್. ಇದೀಗ ಈ ದಂಪತಿ ತಮ್ಮ 12 ವರ್ಷದ ಮಗಳೊಂದಿಗೆ ಇಲ್ಲೇ ವಾಸವಾಗಿದ್ದಾರೆ. ‘ಆನೆ ಮತ್ತು ಮಾನವ ಸಂಘರ್ಷ ಇಂದು ಮಾಮೂಲಾಗಿದೆ. ಇದರಲ್ಲಿ ಆನೆಯ ತಪ್ಪಿಲ್ಲ, ಬದಲಿಗೆ ಅವುಗಳ ಜಾಗಗಳನ್ನು ಮನುಷ್ಯರು ಕಬಳಿಸಿಕೊಂಡಿರುವುದೇ ಕಾರಣ. ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡ ಮೇಲೆ ಆನೆಗಳು ಏನು ಮಾಡಿಯಾವು? ಆಹಾರ ಕೊರತೆಯಿಂದ ಅವು ನಾಡಿಗೆ ಲಗ್ಗೆ ಹಾಕುತ್ತಿವೆ’ ಎನ್ನುತ್ತಾರೆ ಪ್ರಜ್ಞಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts