More

    ನೊಂದವರಿಗೆ ಬದುಕಿನಲ್ಲಿ ಭರವಸೆ ಮೂಡಿಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಕಿವಿಮಾತು

    ಮಂಡ್ಯ: ಜೀವನದಲ್ಲಿ ಹಲವು ವಿಷಯಗಳಿಂದ ನೊಂದು ಮಾನಸಿಕ ಖಿನ್ನತೆಗೊಳಗಾದವರಿಗೆ ಬದುಕಿನಲ್ಲಿ ಭರವಸೆ ಮೂಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಕಿವಿಮಾತು ಹೇಳಿದರು.
    ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಶುಕ್ರವಾರ ಮನೋವೈದ್ಯಶಾಸ್ತ್ರ ಹಾಗೂ ಸಮುದಾಯ ವೈದ್ಯಶಾಸ್ತ್ರ ವಿಭಾಗದಿಂದ ವಿಶ್ವ ಆತ್ಮಹತ್ಯೆ ತಡಗಟ್ಟುವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ವಾತಾವರಣವನ್ನು ಸೃಷ್ಟಿ ಮಾಡುವುದರ ಜತೆಗೆ ಖಿನ್ನತೆಯಿಂದ ಬಳಲುತ್ತಿರುವವರಿಗೆ ಆತ್ಮಸ್ಥೈರ್ಯ ತುಂಬಬೇಕು. ಜೀವನ ಶೈಲಿ, ಕುಟುಂಬದವರ ಸಹಕಾರ ಸರಿಯಾದ ಸಮಯಕ್ಕೆ ಸಿಗದೇ ಇರುವುದು ಆತ್ಮಹತ್ಯೆಗೆ ಕಾರಣವಾಗಿರಬಹುದು. ಆದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದವರನ್ನು ರಕ್ಷಣೆ ಮಾಡುವುದರ ಜತೆಗೆ ಚಿಕಿತ್ಸೆ ಕೊಡಿಸಬೇಕು ಎಂದರು.
    ಮಿಮ್ಸ್‌ನ ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಬಿಂದಿಯಾ ಮಾತನಾಡಿ, ಆತ್ಮಹತ್ಯೆ ತಡೆಯಬಹುದಾದ ಒಂದು ರೋಗ. ಖಿನ್ನತೆಯಿಂದ ಬಳಲುತ್ತಿರುವವರು ಆತ್ಮಹತ್ಯೆಯ ಬಗ್ಗೆ ಆಲೋಚನೆ ಮಾಡದಂತೆ ಯಾವ ರೀತಿ ಧನಾತ್ಮಕ ಚಿಂತನೆ ನಡೆಸಬೇಕು ಎಂದು ಅರಿವು ಮತ್ತು ಜಾಗೃತಿ ಮೂಡಿಸುವುದು ಇಂದಿನ ದಿನದಲ್ಲಿ ಅನಿವಾರ್ಯವಾಗಿದೆ ಎಂದರು.
    ಮಿಮ್ಸ್ ಪ್ರಭಾರ ನಿದೇರ್ಶಕ ಡಾ.ಬಿ.ಆರ್.ಹರೀಶ್, ವೈದ್ಯಕೀಯ ಅಧೀಕ್ಷಕರು ಡಾ.ಪಿ.ವಿ.ಶ್ರೀಧರ್, ಡಾ.ಟಿ.ಎಸ್.ತಮ್ಮಣ್ಣ, ಡಾ.ಭಾಗ್ಯವತಿ, ಡಾ.ಶಣ್ಮುಖಪ್ಪ, ಡಾ.ಎಂ.ಎಸ್.ಸಿದ್ದೇಗೌಡ, ಡಾ.ಸುಭಾಷ್‌ಬಾಬು, ಡಾ.ಎಸ್.ಎಂ.ಸುರೇಶ್, ಪಿಆರ್‌ಒ ಉಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts