More

    ಹಿತಾಸಕ್ತಿಗಳನ್ನು ಭಾರತ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇಡೀ ಜಗತ್ತಿಗೆ ತಿಳಿದಿದೆ: ಪ್ರಧಾನಿ ಮೋದಿ

    ಜೈಪುರ: ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಯೋಧರೊಂದಿಗೆ ಈ ಬಾರಿಯ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ ನಾನಿಂದು ನಿಮ್ಮಲ್ಲಿಗೆ ಪ್ರತಿಯೊಬ್ಬ ಭಾರತೀಯನ ಶುಭಾಶಯಗಳನ್ನು ಹೊತ್ತು ತಂದಿದ್ದೇನೆ. ಎಲ್ಲರಿಗೂ ದೀಪಾವಳಿ ಶುಭಾಶಯ ಕೋರಲು ಬಯಸುತ್ತೇನೆಂದರು.

    ಇದೇ ವೇಳೆ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನೀವು ಹಿಮಾವೃತ ಬೆಟ್ಟಗಳು ಅಥವಾ ಮರುಭೂಮಿಯಲ್ಲೇ ಇರಬಹುದು. ನಾನು ನಿಮ್ಮ ನಡುವೆ ಬಂದಾಗ ಮಾತ್ರ ನನ್ನ ದೀಪಾವಳಿ ಪರಿಪೂರ್ಣಗೊಳ್ಳುತ್ತದೆ. ನಿಮ್ಮ ಮುಖದಲ್ಲಿ ಸಂತಸ ನೋಡಿದಾಗ ನನ್ನ ಸಂತಸ ಇಮ್ಮಡಿಗೊಳ್ಳುತ್ತದೆ ಎಂದು ಭಾವುಕರಾದರು.

    ಇದನ್ನೂ ಓದಿ: ತಾಳ್ಮೆ ಪರೀಕ್ಷಿಸಿದರೆ ಸುಮ್ಮನಿರಲ್ಲ: ಪಾಕಿಗಳ ಎದೆ ನಡುಗಿಸುವ ತಿರುಗೇಟು ಹೇಗಿದೆ ನೋಡಿ…

    ಅದು ಹಿಮಾಲಯದ ಶಿಖರಗಳಾಗಿರಲಿ, ಮರುಭೂಮಿಯ ವಿಸ್ತರಣೆಯಾಗಿರಲಿ, ದಟ್ಟಡವಿ ಆಗಿರಲಿ ಅಥವಾ ಆಳದ ಸಮುದ್ರವಾಗಿರಲಿ ನಿಮ್ಮ ಶೌರ್ಯ ಯಾವಾಗಲೂ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತದೆ. ಯಾವಾಗಲಾದರೂ ಸೈನಿಕರ ಶ್ರೇಷ್ಠತೆ ಕುರಿತು ಇತಿಹಾಸವನ್ನು ಬರೆಯುವಾಗ ಅಥವಾ ಓದಿದಾಗ ರಾಜಸ್ಥಾನದ ಲಾಂಗೆವಾಲ ಯುದ್ಧವೂ ಯಾವಾಗಲೂ ನಮ್ಮ ನೆನಪಿನಲ್ಲೇ ಉಳಿಯುತ್ತದೆ ಎಂದರು.

    ದೇಶದ 130 ಕೋಟಿ ಜನರು ನಿಮ್ಮೊಂದಿಗೆ ಇದ್ದಾರೆ. ಸೈನಿಕರ ಶೌರ್ಯ, ಸಾಮರ್ಥ್ಯದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಇದೆ. ನಿಮ್ಮ ಅಜೇಯತೆಯ ಬಗ್ಗೆ ಹೆಮ್ಮೆ ಇದೆ. ನಮ್ಮ ದೇಶದ ಗಡಿಯನ್ನು ರಕ್ಷಿಸುವ ಯೋಧರ ಎದೆಗಾರಿಕೆಯನ್ನು ತಡೆಯುವ ಯಾವುದೇ ಶಕ್ತಿ ಈ ಜಗತ್ತಿನಲ್ಲಿ ಇಲ್ಲ ಎಂದು ಶ್ಲಾಘಿಸಿದರು.

    ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಭಾರತ ವೇಗವಾಗಿ ಕೆಲಸ ಮಾಡುತ್ತಿದೆ. ರಕ್ಷಣಾ ವಲಯವನ್ನು ಆತ್ಮನಿರ್ಭರ್​ ಮಾಡುವತ್ತ ಸಾಗುತ್ತಿದೆ. ಸ್ಥಳೀಯ ಶಸ್ತ್ರಾಸ್ತ್ರ ಕಾರ್ಖಾನೆಯ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದೇವೆ. ರಕ್ಷಣಾ ವಲಯಕ್ಕೆ ಸಂಬಂಧಿಸಿದ ಈ ಒಂದು ನಿರ್ಧಾರದಿಂದ ವೋಕಲ್​ ಫಾರ್​ ಲೋಕಲ್​ ಸಿದ್ಧಾಂತ ಕಡೆ 130 ಕೋಟಿ ಭಾರತೀಯರನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಹೇಳಿದರು.

    ವಿಸ್ತರಣಾ ಶಕ್ತಿಗಳಿಂದ ಇಂದು ಇಡೀ ವಿಶ್ವವೇ ತೊಂದರೆ ಎದುರಿಸುತ್ತಿದೆ ಎಂದು ಪರೋಕ್ಷವಾಗಿ ಚೀನಾ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, ವಿಸ್ತರಣೆ ಎಂಬುದು ಒಂದು ರೀತಿಯಲ್ಲಿ ಮಾನಸಿಕ ಕಾಯಿಲೆ ಮತ್ತು 18ನೇ ಶತಮಾನದ ಆಲೋಚನೆಯ ಪ್ರತಿಬಿಂಬವಾಗಿದೆ. ಈ ರೀತಿಯ ಆಲೋಚನೆ ವಿರುದ್ಧ ಬಲವಾದ ಧ್ವನಿಯೇರಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದರು.

    ಇದನ್ನೂ ಓದಿ: ಅಮೃತಾ ನಿಮ್ಮ ಹೆಸರಿನ ಮೊದಲ ಅಕ್ಷರದ ಮಹತ್ವ ಅರಿಯಿರಿ: ಮಾಜಿ ಸಿಎಂ ಪತ್ನಿಗೆ ಶಿವಸೇನಾ ಟಾಂಗ್​

    ಯಾವುದೇ ಸಂದರ್ಭದಲ್ಲೂ ತನ್ನ ಹಿತಾಸಕ್ತಿಯನ್ನು ಭಾರತ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಇಡೀ ಜಗತ್ತಿಗೆ ಅರ್ಥವಾಗಿದೆ. ಭಾರತದ ಈ ಖ್ಯಾತಿ ಮತ್ತು ನಿಲುವು ನಿಮ್ಮ ಶಕ್ತಿ ಮತ್ತು ಶೌರ್ಯದಿಂದಾಗಿ ಬಂದಿದೆ. ಇಂದು ಜಾಗತಿಕ ವೇದಿಕೆಯಲ್ಲಿ ಭಾರತ ತನ್ನ ನಿಲುವನ್ನು ನಿರ್ಭಿತಿಯಿಂದ ಸ್ಪಷ್ಟಪಡಿಸುತ್ತದೆ. ಏಕೆಂದರೆ ಆ ರೀತಿ ರಾಷ್ಟ್ರವನ್ನು ನೀವು ರಕ್ಷಣೆ ಮಾಡುತ್ತಿದ್ದೀರಾ ಎಂದು ಯೋಧರನ್ನು ಹೊಗಳಿದರು.

    2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪ್ರತಿ ವರ್ಷ ಮೋದಿ ಅವರು ಯೋಧರೊಂದಿಗೇ ದೀಪಾವಳಿ ಆಚರಿಸಿಕೊಂಡು ಬಂದಿದ್ದಾರೆ.(ಏಜೆನ್ಸೀಸ್​)

    ಯೋಧರೊಂದಿಗೆ ಮೋದಿಜೀ ದೀಪಾವಳಿ; ಗುಜರಾತ್​ ಸೈನಿಕರಿಗೆ ಸಿಹಿ ತಿನ್ನಿಸಲಿದ್ದಾರೆ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts