More

    ವಿಶ್ವ ಮಾನವ ಸಂದೇಶ ಅನುಷ್ಠಾನ ಅಗತ್ಯ

    ಕಂಪ್ಲಿ: ಮನುಕುಲ ಉದ್ಧಾರಕ್ಕೆ ಕುವೆಂಪುರ ವಿಶ್ವ ಮಾನವ ಸಂದೇಶ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ತಾಪಂ.ನರೇಗಾ ಎಡಿ ಕೆ.ಎಸ್.ಮಲ್ಲನಗೌಡ ಹೇಳಿದರು.

    ಇದನ್ನೂ ಓದಿ: ವಿಶ್ವ ಮಾನವ ಸಂದೇಶ ನಿಜಕ್ಕು ಮಹತ್ವದ್ದು

    ಇಲ್ಲಿನ ಗಂಗಾಸಂಕೀರ್ಣದಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ವಿಶ್ವ ಮಾನವ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ‘ಕುವೆಂಪು ವಿಚಾರಧಾರೆ ಪ್ರಸ್ತುತತೆ’ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

    ಕುವೆಂಪು ಸಾಹಿತ್ಯದಲ್ಲಿ ಜಗದ ಹಿತ ಅಡಗಿದೆ, ಮಾನವೀಯತೆ, ವೈಚಾರಿಕತೆ, ವೈಜ್ಞಾನಿಕತೆ ಮತ್ತು ಸತ್ಯ ಪಥದ ಬೆಳಕಿದೆ. ಕುವೆಂಪು ಸಾಹಿತ್ಯ ಕೇವಲ ಅಧ್ಯಯನಕ್ಕೆ ಸೀಮಿತಗೊಳಿಸದೆ, ಆಡಳಿತ ಮತ್ತು ನಿತ್ಯ ಜೀವನದ ಪ್ರತಿ ಸ್ತರದಲ್ಲಿ ಬಳಕೆಯಾಗಲಿ. ತತ್ವಾದರ್ಶಗಳು ಎಲ್ಲ ಹಂತದ ಪಠ್ಯಗಳ ಮೂಲಕ ಬೋಧಿಸಬೇಕಿದೆ ಎಂದರು.

    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ.ಅನ್ನಪೂರ್ಣ ಗುಡದೂರು ಮಾತನಾಡಿ, ಕುವೆಂಪು ದೈತ್ಯ ಪ್ರತಿಭೆಯಾಗಿದ್ದು ಅವರ ಬದುಕು ಮತ್ತು ಬರಹ ಒಂದೇ ಆಗಿದ್ದವು. ಕನ್ನಡ ಸಾಹಿತ್ಯ ಸಮೃದ್ಧತೆಯಲ್ಲಿ ಕುವೆಂಪು ಸಾಹಿತ್ಯ ಮೇರು ಸ್ಥಾನಗಳಿಸಿದೆ. ಜ್ಞಾನ ಸಂಪತ್ತು ಮತ್ತು ವಿಶ್ಲೇಷಿಸುವ ಪರಿ ಇಂದಿನ ಯುವಪೀಳಿಗೆಯ ಬರಹಗಾರರಿಗೆ ಆದರ್ಶವಾಗಿದೆ ಎಂದರು.

    ಶಿಕ್ಷಕ ಜೀರು ಮಲ್ಲಿಕಾರ್ಜುನ, ಸಾಹಿತ್ಯ ಸಿರಿ ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ್, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ಪದಾಧಿಕಾರಿಗಳಾದ ಬಂಗಿ ದೊಡ್ಡ ಮಂಜುನಾಥ, ಎಸ್.ಡಿ.ಬಸವರಾಜ,

    ಎಸ್.ಶಾಮಸುಂದರರಾವ್, ಚಂದ್ರಯ್ಯಸೊಪ್ಪಿಮಠ, ಕೆ.ಚಂದ್ರಶೇಖರ, ಬಡಿಗೇರ ಜಿಲಾನ್‌ಸಾಬ್, ಕವಿತಾಳ ಬಸವರಾಜ, ಡಾ.ಸುನೀಲ್, ಬಂಗಿ ಸರೋಜಾ, ಅಂಬಿಗರ ಮಂಜುನಾಥ, ಕರೇಕಲ್ ಶಂಕ್ರಪ್ಪ, ಸಜ್ಜೇದ ವೀರಭದ್ರಪ್ಪ, ಎಚ್.ನಾಗರಾಜ, ಕೆ.ಯಂಕಾರೆಡ್ಡಿ, ಎಲಿಗಾರ ವೆಂಕಟರೆಡ್ಡಿ, ಮಾ.ಶ್ರೀನಿವಾಸ, ಗೌಳೇರು ಶೇಖರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts