More

    ರೈಲ್ವೆ ಡಿಪೊ ಆವರಣದಲ್ಲಿ ಒಂದೇ ದಿನ 100 ತೆಂಗಿನ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

    ಹುಬ್ಬಳ್ಳಿ: ನಿನ್ನೆ ವಿಶ್ವ ಪರಿಸರ ದಿನದ ಪ್ರಯುಕ್ತ ಹಲವೆಡೆ ನಾನಾ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಇಂದು ರೈಲ್ವೆ ಇಲಾಖೆಯೂ ಮಹತ್ವದ ಕಾರ್ಯವೊಂದನ್ನು ಮಾಡಿ ಗಮನ ಸೆಳೆದಿದೆ. ನೈಋತ್ಯ ರೈಲ್ವೆಯ ಹುಬ್ಬಳ್ಳಿಯ ಜನರಲ್ ಸ್ಟೋರ್ಸ್ ಡಿಪೊ ಆವರಣದಲ್ಲಿ ಒಂದೇ ದಿನದಲ್ಲಿ 100 ತೆಂಗಿನ ಸಸಿಗಳನ್ನು ನೆಡಲಾಗಿದೆ.

    ಹುಬ್ಬಳ್ಳಿಯಿಂದ 40 ಕಿ.ಮೀ. ದೂರದ ಮುಂಡಗೋಡು ಸಮೀಪದ ಹಳ್ಳಿಯಿಂದ 100 ತೆಂಗಿನ ಸಸಿಗಳನ್ನು ತರಿಸಿದ್ದು, ಅವುಗಳನ್ನು ಜನರಲ್ ಸ್ಟೋರ್ಸ್ ಡಿಪೊ ಆವರಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು.

    ಜಿಎಸ್​ಡಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಯಂಪ್ರೇರಿತ ದೇಣಿಗೆಯಿಂದ ಈ ಸಸಿಗಳನ್ನು ತರಿಸಲಾಗಿದೆ. ತೆಂಗಿನ ಮರದ ಮಹತ್ವ ಹಾಗೂ ಅದರಿಂದ ತಯಾರಿಸಲಾಗುವ ನಾನಾ ಉತ್ಪನ್ನಗಳ ಕುರಿತು ಸಿಬ್ಬಂದಿಯೊಬ್ಬರು ತಿಳಿಸಿದ ಮಾಹಿತಿಯಿಂದಾಗಿ ಇಂಥದ್ದೊಂದು ಯೋಜನೆ ರೂಪುಗೊಂಡಿದೆ.

    ರೈಲ್ವೆ ಡಿಪೊ ಆವರಣದಲ್ಲಿ ಒಂದೇ ದಿನ 100 ತೆಂಗಿನ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

    ನಮ್ಮ ಎರಡನೇ ಮನೆಯಂತಿರುವ ಕಚೇರಿ ವಾತಾವರಣ ಪರಿಸರಸ್ನೇಹಿ ಆಗಿಸುವ ಹಾಗೂ ಒಂದು ಭಾವನಾತ್ಮಕ ಸಂಬಂಧ ವೃದ್ಧಿಸುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಜಿಎಸ್​ಡಿ ಡೆಪ್ಯುಟಿ ಚೀಫ್​ ಮೆಟಿರಿಯಲ್ಸ್ ಮ್ಯಾನೇಜರ್​ ಇಂದು ಸಿರೋಯಿ ತಿಳಿಸಿದ್ದಾರೆ. ಚೀಫ್ ಮೆಟಿರಿಯಲ್ಸ್ ಮ್ಯಾನೇಜರ್​ (ಸೇಲ್ಸ್) ಜೋಗೇಂದ್ರ ಯಡ್ವೆಂಡು ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇದರಲ್ಲಿ ಪಾಲ್ಗೊಂಡಿದ್ದರು.

    ಹೆಣ್ಮಕ್ಳೂ ಸ್ಟ್ರಾಂಗು ಅನ್ನೋದಕ್ಕೆ ಈಕೆ ‘ಸಾಕ್ಷಿ’: ಏಕಾಂಗಿಯಾಗಿ ಬೈಕ್​ನಲ್ಲಿ ಜಮ್ಮು-ಕಾಶ್ಮೀರಕ್ಕೆ ಹೋಗಿಬಂದ ವಿದ್ಯಾರ್ಥಿನಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts